ಶಿವಮೊಗ್ಗ: ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ 2013 ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹೆಸರು ತಿಳಿದು ಬಂದಿಲ್ಲ. ಕಳೆದ 7 ವರ್ಷಗಳ ಹಿಂದೆ ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಸೆರೆಗೆ ಹುಡುಕಾಟ ಕೂಡ ನಡೆಸಿದ್ದರು. ಆದರೆ ಈತ 2013ರಲ್ಲಿ ಅಜ್ಞಾತಕ್ಕೆ ತೆರಳಿದ್ದವನು ಈಗ ಸಿಕ್ಕಿಬಿದ್ದಿದ್ದಾನೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ' ಐವರ ಬಂಧನ:
ಭದ್ರಾವತಿ ಪೊಲೀಸರು ಬಾರಂದೂರಿನ ಕಂಪೇಗೌಡ ನಗರದ ಬೈಪಾಸ್ ಬಳಿ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳಿಂದ 31,500 ರೂ. ವಶಪಡಿಸಿಕೊಂಡಿದ್ದಾರೆ.