ETV Bharat / state

ಎಟಿಎಂನಲ್ಲಿ ಸಹಾಯ ಮಾಡುವ ನೆಪ: ಪಾಸ್​ಕೋಡ್​ ​ಪಡೆದು ಮೋಸ ಮಾಡುತ್ತಿದ್ದವನ ಬಂಧನ

ವ್ಯಕ್ತಿಯೊಬ್ಬರು ಕೆನಾರಾ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಸಮಸ್ಯೆ ಉಂಟಾಗಿದೆ. ಆರೋಪಿ ಆ ವ್ಯಕ್ತಿಯ ಬಳಿ ಪರಿಚಿತನಂತೆ ಹೋಗಿ ಕಾರ್ಡ್ ನಂಬರ್ ಹಾಗೂ ಎಟಿಎಂ ಪಿನ್ ತೆಗೆದು ಕೊಂಡು ಅವರ ಖಾತೆಯಿಂದ 37.887 ರೂ ಹಣವನ್ನು ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ.

Arrest of cheater in shimoga
ಪಾಸ್​ಕೋಡ್​ ​ಪಡೆದು ಮೋಸ ಮಾಡುತ್ತಿದ್ದವನ ಬಂಧನ
author img

By

Published : May 10, 2020, 9:34 AM IST

ಶಿವಮೊಗ್ಗ: ಎಟಿಎಂನಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ನಂಬರ್ ಹಾಗೂ ಪಿನ್ ನಂಬರ್ ಪಡೆದು ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿಯ ಹುಡ್ಕೊ ಕಾಲೋನಿಯ ಸಾಗರ ಅಲಿಯಾಸ್ ದಡಿಯಾ ದಿಲೀಪ್ ಬಂಧಿತ ಆರೋಪಿ. ಹೊಸೂರು ಸಿದ್ದಾಪುರ ಗ್ರಾಮದ ವ್ಯಕ್ತಿಯೊಬ್ಬರು ಕೆನಾರಾ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಸಮಸ್ಯೆ ಉಂಟಾಗಿದೆ. ಆರೋಪಿ ಆ ವ್ಯಕ್ತಿಯ ಬಳಿ ಪರಿಚಿತನಂತೆ ಹೋಗಿ ಕಾರ್ಡ್ ನಂಬರ್ ಹಾಗೂ ಎಟಿಎಂ ಪಿನ್ ತೆಗೆದು ಕೊಂಡು ಅವರ ಖಾತೆಯಿಂದ 37.887 ರೂ ಹಣವನ್ನು ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ.

ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಇಎನ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಗುರುರಾಜ್ ರವರ ನೇತೃತ್ವದಲ್ಲಿ ಸಾಗರನನ್ನು ವಶಕ್ಕೆ ಪಡೆದು ಆತನಿಂದ 45 ಸಾವಿರ ರೂ ನಗದು ವಶಕ್ಕೆ ಪಡೆಯಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.