ಶಿವಮೊಗ್ಗ: ಪೊಲೀಸ್ ಹಾಗೂ ಪತ್ರಕರ್ತನೆಂದು ಹೇಳಿಕೊಂಡು ಕೊರೊನಾ ಫಂಡ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿವಮೊಗ್ಗದ ಎಪಿಎಂಸಿಯಲ್ಲಿ ಇಂದು ಸಂತೋಷ್ ಎಂಬಾತ ಕೈಯ್ಯಲ್ಲಿ ಫೈಲ್ ಹಿಡಿದು ತಾನು ಪೊಲೀಸ್ ಅಂತ ಕೆಲವರ ಬಳಿ, ಇನ್ನೂ ಕೆಲವರ ಬಳಿ ತಾನು ಪತ್ರಕರ್ತನೆಂದು ಹೇಳಿ ಹಣ ವಸೂಲಿ ಮಾಡುತ್ತಿದ್ದ.
ಈ ಬಗ್ಗೆ ಪ್ರಶ್ನೆ ಮಾಡಿದಾಗ ಸರಿಯಾಗಿ ಉತ್ತರಿಸಿದ ಕಾರಣ ಸಾರ್ವಜನಿಕರು ಸಂತೋಷ್ನನ್ನು ವಿನೋಬನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಶಿವಮೊಗ್ಗದ ದುರ್ಗಿಗುಡಿಯ ಎರಡನೇ ತಿರುವಿನ ನಿವಾಸಿಯಾಗಿದ್ದು, ಈ ಹಿಂದೆ ಹಲವು ಸಂಘಟನೆಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದ ಎನ್ನಲಾಗಿದೆ.