ETV Bharat / state

ಶಿವಮೊಗ್ಗ: ಅಡಿಕೆ ಕಳ್ಳರ ಬಂಧನ, ₹9 ಲಕ್ಷ ಮೌಲ್ಯದ ಮಾಲು ವಶ - Nut thieves arrested

Areca nuts theft case: ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣ ನಡೆದಿತ್ತು.

ಅಡಿಕೆ ಕಳ್ಳರ ಬಂಧನ
ಅಡಿಕೆ ಕಳ್ಳರ ಬಂಧನ
author img

By ETV Bharat Karnataka Team

Published : Dec 10, 2023, 10:50 AM IST

ಶಿವಮೊಗ್ಗ: ಶಿಕಾರಿಪುರ ತಾಲೂರಿನ ಬಳ್ಳಿಗಾವಿ ಗ್ರಾಮದಲ್ಲಿ ಅಡಿಕೆ ಕದ್ದು ಪರಾರಿಯಾಗಿದ್ದ ಮೂವರು ಕಳ್ಳರನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ. 2 ಲಕ್ಷ ರೂ ಮೌಲ್ಯದ ಅಡಿಕೆ, ವಾಹನ ಸೇರಿದಂತೆ ಸುಮಾರು 9 ಲಕ್ಷ ರೂ ಮೌಲ್ಯದ ಮಾಲು ವಶಕ್ಕೆ ಪಡೆಯಲಾಗಿದೆ.

ಬಳ್ಳಿಗಾವಿ ಗ್ರಾಮದ ರಮೇಶ್ ಎಂಬವರು ತಮ್ಮ ಮನೆಯಲ್ಲಿ ದಾಸ್ತಾನಿಟ್ಟಿದ್ದ 3 ಕ್ವಿಂಟಾಲ್ 50 ಕೆ.ಜಿ ಒಣಅಡಕೆಯನ್ನು ನವೆಂಬರ್ 11ರಂದು ಆರೋಪಿಗಳು ಕಳ್ಳತನ ಮಾಡಿದ್ದರು. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೆನ್ನತ್ತಿದ ಪೊಲೀಸರು ಡಿಸೆಂಬರ್ 6ರಂದು ಭಟ್ಕಳ ಟೌನ್​ನ ಮೂವರನ್ನು ಸೆರೆಹಿಡಿದಿದ್ದಾರೆ. ಅಬ್ರಾರ್ ಶೇಖ್ (21), ಅಬ್ದುಲ್ ವಾಹೀದ್ ತಾರ್ (22) ಹಾಗೂ ಇಮ್ರಾನ್ (20) ಬಂಧಿತರು. ಶಿರಾಳಕೊಪ್ಪ ಹಾಗೂ ಆನಂದಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಎರಡು ಅಡಿಕೆ ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ. ಒಟ್ಟು 2.41.586 ರೂ ಮೌಲ್ಯದ 5 ಕ್ಚಿಂಟಾಲ್ 14 ಕೆ.ಜಿ ಒಣಅಡಕೆ ಮತ್ತು ಕೃತ್ಯಕ್ಕೆ ಬಳಸಿದ ಬುಲೆರೋ ವಾಹನ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇತ್ತೀಚಿನ ಘಟನೆಗಳು-ಅಡಿಕೆ ವ್ಯಾಪಾರಿಯ ಗಮನ ಬೇರೆಡೆ ಸೆಳೆದು ಕಳ್ಳತನ: ನವೆಂಬರ್​ 2ರಂದು ಬೆಂಗಳೂರಿನ ಉಪ್ಪಾರಪೇಟೆ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಅಕ್ಟೋಬರ್ 7ರಂದು ಬೆಂಗಳೂರಿಗೆ ಬಂದಿದ್ದ ಅಡಿಕೆ ವ್ಯಾಪಾರಿಯ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 1 ಕೋಟಿ ರೂ ಕಳವು ಮಾಡಿದ್ದ ಚಾಲಕನಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದರು. ಆರೋಪಿಗಳನ್ನು ಸ್ವಾಮಿ (34), ಅನುಪಮಾ (38), ಪವನ್ (30) ಹಾಗೂ ಕಾರ್ತಿಕ್ (27) ಎಂದು ಗುರುತಿಸಲಾಗಿದೆ. ಕಾರು ಚಾಲಕ ಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿ ಅಕ್ಟೋಬರ್ 21ರಂದು ಉಪ್ಪಾರಪೇಟೆ ಠಾಣೆಗೆ ಉಮೇಶ್ ಎಂಬವರು ದೂರು ನೀಡಿದ್ದರು.

ಇದನ್ನೂ ಓದಿ: ಅಡಿಕೆ ದೋಚಿದ ಕಳ್ಳರು, ಓರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಮಾಲಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.