ETV Bharat / state

ಬಾಣಂತಿ ಸಾವು, ನಾಲ್ಕು ದಿನದ ಕಂದಮ್ಮ ಅನಾಥ.. ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಆರೋಪ - ಶಿವಮೊಗ್ಗದಲ್ಲಿ ಬಾಣಂತಿ ಸಾವು

ಕಳೆದ ನಾಲ್ಕು ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಇಂದು ಸಡನ್​ ಆಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಶಿವಮೊಗ್ಗದ ಹೊಸಮನೆಯ ಸವಿತಾ ಮೃತ ಬಾಣಂತಿ.

pregnant died
ಬಾಣಂತಿ ಸಾವು
author img

By

Published : Jun 21, 2022, 7:13 PM IST

ಶಿವಮೊಗ್ಗ: ನಾಲ್ಕು ದಿನದ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಮಂಗಳವಾರ ದಿಢೀರ್ ಆಗಿ ಸಾವಿಗೀಡಾಗಿರುವ ಘಟನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.‌ ಶಿವಮೊಗ್ಗದ ಹೊಸಮನೆಯ ಸವಿತಾ (20) ಮೃತ ಬಾಣಂತಿ. ಸವಿತಾ ಕಳೆದ ವರ್ಷ ಬೆಂಗಳೂರಿನ ಯುವಕನೊಂದಿಗೆ ಮದುವೆಯಾಗಿದ್ದರು. ಕಳೆದ ಐದು ದಿನದ ಹಿಂದೆ ಹೆರಿಗೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನದ ಹಿಂದಷ್ಟೇ ಸವಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಸಿಸೇರಿಯನ್ ಮೂಲಕ ಮಗು ಹೊರತೆಗೆಯಲಾಗಿತ್ತು. ಆಪರೇಷನ್ ನಡೆಸಿದ ನಂತರ ಸವಿತಾ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಇಂದು ಬೆಳಗಿನ ಜಾವ ಸವಿತಾ ಮೃತಪಟ್ಟಿದ್ದಾರೆ. ಸವಿತಾ ಭಾನುವಾರ ಸ್ವಲ್ಪ ಸುಸ್ತಾಗಿದ್ದರು. ಆದರೆ ಹೆದರುವ ಅವಶ್ಯಕತೆ ಇಲ್ಲ. ಎಲ್ಲಾ ಸರಿ ಹೋಗುತ್ತದೆ ಎಂದು ವೈದ್ಯರು ಧೈರ್ಯ ಹೇಳಿದ್ದರು. ಆದ್ರೆ ಇಂದು ಬೆಳಗಿನ ಜಾವ ಸವಿತಾ ದಿಢೀರ್​ ಉಸಿರು ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ವಸತಿ ಶಾಲಾ ವಾರ್ಡನ್, ಪಾರು ಮಾಡಿದ ಸಿಬ್ಬಂದಿ

ಸೋಮವಾರ ಸವಿತಾ ಪೋಷಕರು ಸವಿತಾಳ ಆರೋಗ್ಯ ಹದಗೆಟ್ಟ ಕಾರಣ, ತಾವು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ರು. ಆದ್ರೆ ಮೆಗ್ಗಾನ್ ಆಸ್ಪತ್ರೆ ವೈದ್ಯರು ಎಲ್ಲಾ ಸರಿ ಆಗುತ್ತದೆ ಎಂದು ತಿಳಿಸಿದ್ರು ಎನ್ನಲಾಗ್ತಿದೆ. ಇಲ್ಲಿನ ವೈದ್ಯರ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಸವಿತಾ ಪೋಷಕರು ಆರೋಪಿಸಿದ್ದಾರೆ. ಆದರೆ ಯಾವುದೇ ದೂರು ದಾಖಲಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.