ಶಿವಮೊಗ್ಗ : ಲಾಕ್‌ಡೌನ್ ಬಳಿಕ ಶಿವಮೊಗ್ಗ ಹೊರ ವಲಯದ ಬಡಾವಣೆಗಳು ಕುಡುಕರ ಅಡ್ಡೆಗಳಾಗಿ ಪರಿವರ್ತನೆಯಾಗುತ್ತಿವೆ.
ಲಾಕ್‌ಡೌನ್ ಬಳಿಕ ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿತು. ಆದರೆ. ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ತೆರೆಯಲು ಅನುಮತಿ ನೀಡಲಿಲ್ಲ. ಹೀಗಾಗಿ ನಗರದ ಹೊರ ವಲಯದ ಬಡಾವಣೆಗಳು ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿವೆ. ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಸಾವಿರಾರು ಮದ್ಯದ ಖಾಲಿ ಬಾಟಲ್‌ಗಳು ಬಿದ್ದಿವೆ. ಇದಲ್ಲದೆ ಕೆಲವರು ಕಾಡುಗಳಲ್ಲಿ ಮದ್ಯಪಾನ ಮಾಡಿ ಅಲ್ಲಿಯೇ ಬಾಟಲಿಗಳನ್ನು ಒಡೆದು ಹಾಕುತ್ತಿರುವುದರಿಂದ ವನ್ಯಜೀವಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ನಗರದ ಹೊರವಲಯದ ಬಡಾವಣೆ ಹಾಗೂ ಕಾಡುಗಳಲ್ಲಿ ಮದ್ಯ ಸೇವನೆ ಹೆಚ್ಚಾಗಿರುವುದರಿಂದ ಪರಿಸರ ಹಾನಿ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಹೋರಾಟಗಾರ ಅಜಯ್‌ಕುಮಾರ್ ಶರ್ಮಾ ಆಗ್ರಹಿಸಿದ್ದಾರೆ.