ETV Bharat / state

ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಿ..

author img

By

Published : Dec 18, 2019, 11:29 PM IST

ನ್ಯಾ. ಎ ಜೆ ಸದಾಶಿವ ಆಯೋಗದ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ನ್ಯಾ. ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಮನವಿ ಮಾಡಿದೆ.

aj-sadashiva-commission-recommended-to-the-center-said-by-muttanna-y-bennura
ಮುತ್ತಣ್ಣ ವೈ.ಬೆಣ್ಣೂರ ಮಾತನಾಡಿದ್ದಾರೆ

ಶಿವಮೊಗ್ಗ: ಕಳೆದ ಹಲವು ವರ್ಷಗಳಿಂದ ನ್ಯಾ. ಸದಾಶಿವ ಆಯೋಗದ ವರದಿ ಶಿಫಾರಸು ನೆನೆಗುದಿಗೆ ಬಿದ್ದಿದೆ. ಎಲ್ಲ ಸರ್ಕಾರಗಳು ಇದನ್ನು ಮುಂದೂತ್ತಲೇ ಇವೆ. ಈಗಲಾದರೂ ವಿಳಂಬ ಮಾಡದೇ ಮುಖ್ಯಮಂತ್ರಿಗಳು ಆಯೋಗದ ವರದಿಯನ್ನ ಸಚಿವ ಸಂಪುಟದಲ್ಲಿ ಚರ್ಚಿಸಿ ನಂತರ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಸಮಿತಿಯ ರಾಜ್ಯಾಧ್ಯಕ್ಷ ಮುತ್ತಣ್ಣ ವೈ ಬೆಣ್ಣೂರ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮಾಜವು ಹಲವು ಸೌಲಭ್ಯಗಳಿಂದ ವಂಚಿತವಾಗಿದೆ. ತಾರತಮ್ಯಕ್ಕೆ ಒಳಗಾಗಿದೆ. ಅಲ್ಲದೇ ಅಸ್ಪೃಶ್ಯತೆಯನ್ನು ಎದುರಿಸುತ್ತಿದೆ. ಸುಮಾರು 85 ಉಪ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಹಿನ್ನೆಲೆಯಲ್ಲಿಯೇ ಆಯೋಗ ರಚನೆಯಾಗಿತ್ತು. ಬಿಜೆಪಿ ಸರ್ಕಾರವಿದ್ದಾಗ ಆಯೋಗಕ್ಕೆ 12 ಕೋಟಿ ರೂ. ಅನುದಾನ ನೀಡಿತ್ತು. ಈಗ ವರದಿಯನ್ನು ಪಡೆದುಕೊಂಡಿದೆ. ಆದ್ದರಿಂದ ಇದನ್ನು ಜಾರಿ ಮಾಡಬೇಕು ಎಂದರು.

ಮುತ್ತಣ್ಣ ವೈ.ಬೆಣ್ಣೂರ, ಅಧ್ಯಕ್ಷ, ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮಿತಿ

ಸದಾಶಿವ ಆಯೋಗದ ವರದಿ ಅಂಗೀಕಾರದ ಬಗ್ಗೆ ಸ್ಪರ್ಶ ಮತ್ತು ಬಲಿತ ಜಾತಿಯವರು ಅಪಪ್ರಚಾರ ಮಾಡುತ್ತಲೇ ಇದ್ದಾರೆ. ನಮ್ಮ ನಮ್ಮಲಿಯೇ ಭಿನ್ನಾಭಿಪ್ರಾಯ ಮೂಡುತ್ತಿವೆ. ಆದರೆ, ನಮ್ಮದು ನಿಜವಾಗಿಯೂ ಅಸ್ಪೃಶ್ಯತೆಯ ಸಮುದಾಯವಾಗಿದೆ. ಹಲವು ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. ಈ ಎಲ್ಲ ಹಿನ್ನೆಲೆಯಲ್ಲಿ ಈಗಾಗಲೇ ಆಯೋಗದ ಶಿಫಾರಸ್ಸಿನಂತೆ ನಮಗೆ ನ್ಯಾಯ ಒದಗಿಸಬೇಕು. ಸಂವಿಧಾನದ ಚೌಕಟ್ಟಿನಲ್ಲಿರುವ ಮೀಸಲಾತಿಯಲ್ಲಿ ಒಳ ಮೀಸಲಾತಿ ವಿರೋಧಿಸುವುದು ಸರಿಯಲ್ಲ. ವರದಿಯನ್ನು ಅಂಗೀಕರಿಸುವ ಮೂಲಕ ಪರಿಶಿಷ್ಟರ ಅಭಿವೃದ್ದಿಗೆ ಸಹಾಯಕವಾಗಬೇಕು ಎಂದು ಮನವಿ ಮಾಡಿದರು.

Intro:ಶಿವಮೊಗ್ಗ,
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ನ್ಯಾ|| ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಮನವಿ ಮಾಡಿದೆ.
         ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಮುತ್ತಣ್ಣ ವೈ.ಬೆಣ್ಣೂರ, ಕಳೆದ ಹಲವು ವರ್ಷಗಳಿಂದ ಸದಾಶಿವ ಆಯೋಗದ ಶಿಫಾರಸು ನೆನೆಗುದಿಗೆ ಬಿದ್ದಿದೆ. ಎಲ್ಲ ಸರ್ಕಾರಗಳು ಇದನ್ನು ಮುಂದೂತ್ತಲೇ ಇವೆ. ಈಗಲಾದರು ವಿಳಂಬ ಮಾಡದೇ ಮುಖ್ಯಮಂತ್ರಿಗಳು ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಂತರ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.
         ಮಾದಿಗ ಸಮಾಜವು ಸೌಲಭ್ಯಗಳಿಂದ ವಂಚಿತವಾಗಿದೆ. ತಾರತಮ್ಯಕ್ಕೆ ಒಳಗಾಗಿದೆ. ಅಸ್ಪೃಶ್ಯತೆಯನ್ನು ಎದುರಿಸುತ್ತಿವೆ. ಸುಮಾರು ೮೫ ಉಪ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಹಿನ್ನೆಲೆಯಲ್ಲಿಯೇ ಆಯೋಗ ರಚನೆಯಾಗಿತ್ತು. ಬಿಜೆಪಿ ಸರ್ಕಾರವಿದ್ದಾಗ ಆಯೋಗಕ್ಕೆ ೧೨ ಕೋಟಿ ರೂ. ಅನುದಾನ ನೀಡಿತ್ತು. ಈಗ ವರದಿಯನ್ನು ಪಡೆದುಕೊಂಡಿದೆ. ಆದ್ದರಿಂದ ಇದನ್ನು ಜಾರಿ ಮಾಡಬೇಕು ಎಂದರು.
         ಸದಾಶಿವ ಆಯೋಗದ ವರದಿ ಅಂಗೀಕಾರದ ಬಗ್ಗೆ ಸ್ಪರ್ಶ ಮತ್ತು ಬಲಿತ ಜಾತಿಯವರು ಅಪಪ್ರಚಾರ ಮಾಡುತ್ತಲೇ ಇದ್ದಾರೆ. ನಮ್ಮ ನಮ್ಮಲಿಯೇ ಭಿನ್ನಾಭಿಪ್ರಾಯ ಮೂಡುತ್ತಿವೆ. ಆದರೆ ನಮ್ಮದು ನಿಜವಾಗಿಯೂ ಅಸ್ಪೃಶ್ಯತೆಯ ಸಮುದಾಯವಾಗಿದೆ. ಹಲವು ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. ಈ ಎಲ್ಲ ಹಿನ್ನೆಲೆಯಲ್ಲಿ ಈಗಾಗಲೇ ಆಯೋಗದ ಶಿಫಾರಸಿನಂತೆ ನಮಗೆ ನ್ಯಾಯ ಒದಗಿಸಬೇಕು. ಸಂವಿಧಾನದ ಚೌಕಟ್ಟಿನಲ್ಲಿರುವ ಮೀಸಲಾತಿಯಲ್ಲಿ ಒಳ ಮೀಸಲಾತಿ ವಿರೋಧಿಸುವುದು ಸರಿಯಲ್ಲ. ವರದಿಯನ್ನು ಅಂಗೀಕರಿಸುವ ಮೂಲಕ ಪರಿಶಿಷ್ಟರ ಅಭಿವೃದ್ದಿಗೆ ಸಹಾಯಕವಾಗಬೇಕು ಎಂದು ಮನವಿ ಮಾಡಿದರು.
         ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಗೌರವಾಧ್ಯಕ್ಷ ಅಂಬಣ್ಣ ಅರೋಲಿಕರ್, ಪ್ರಮುಖರಾದ ಮುನಿಕೃಷ್ಣಯ್ಯ, ನಾಗರಾಜ ಕೋಡಿಗೆಹಳ್ಳಿ, ಶಿವಾನಂದ ಮಬ್ರೂಮಕರ್, ಚಂದ್ರು, ಹೆಚ್.ಎನ್.ಮೂರ್ತಿ, ವಸಂತ ಕುಮಾರ್ ಸೇರಿದಂತೆ ಹಲವರಿದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.