ಶಿವಮೊಗ್ಗ : ಕೃಷಿ ಇಲಾಖೆಯ ಲಿಪಿಕ ನೌಕರರ ಮುಂಬಡ್ತಿ ಸಮಸ್ಯೆ ಪರಿಹರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿರವರಿಗೆ ಕೃಷಿ ಇಲಾಖೆ ನೌಕರರು ಸನ್ಮಾನ ಮಾಡಿದ್ದಾರೆ.
ಕಳೆದೆರಡು ವರ್ಷಗಳಿಂದ ಕೃಷಿ ಇಲಾಖೆಯ ಲಿಪಿಕ ನೌಕರರಿಗೆ ಮುಂಬಡ್ತಿ ವಿಚಾರದಲ್ಲಿ ವಿಳಂಬ ಉಂಟಾಗಿತ್ತು. ಈ ಬಗ್ಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಕೃಷಿ ಇಲಾಖೆಯ ಆಯುಕ್ತರು ಹಾಗೂ ನಿರ್ದೇಶಕರೊಂದಿಗೆ ಚರ್ಚಿಸಿ, ಮುಂಬಡ್ತಿ ಸಮಸ್ಯೆ ಬಗೆಹರಿಸಿದ್ದರು.
ಇದರಿಂದಾಗಿ ರಾಜ್ಯಾದ್ಯಂತ 200 ಕ್ಕೂ ಅಧಿಕ ಕೃಷಿ ಇಲಾಖೆಯ ಲಿಪಿಕ ನೌಕರರಿಗೆ ಬಡ್ತಿ ಆದೇಶ ಹೊರಡಿಸಲಾಗಿದೆ. ಮುಂಬಡ್ತಿ ವಿಚಾರದಲ್ಲಿ ವಿಳಂಬವಾಗುತ್ತಿದೆ ಎಂದು ಇಲಾಖೆಯ ಲಿಪಿಕ ನೌಕರರು ರಾಜ್ಯಾಧ್ಯಕ್ಷರ ಬಳಿ ಮನವಿ ಮಾಡಿದ್ದರು. ಮನವಿ ಆಲಿಸಿದ್ದ ರಾಜ್ಯಾಧ್ಯಕ್ಷರು ಈ ಬಗ್ಗೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ 2 ಬಾರಿ ಚರ್ಚೆ ನಡೆಸಿದ್ದರು.
ಈ ಪರಿಣಾಮವಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಲಿಪಿಕ ನೌಕರರಿಗೆ ಮುಂಬಡ್ತಿ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಿಗೆ ಹಾಗೂ ಬೆಂಗಳೂರು ವಿಭಾಗ ಉಪಾಧ್ಯಕ್ಷ ಕೆ. ಮೋಹನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶಾಂತರಾಜ್ ಇವರುಗಳನ್ನು ಲಿಪಿಕ ನೌಕರರು ಹಾರ್ದಿಕವಾಗಿ ಅಭಿನಂದಿಸಿದರು.
ಈ ವೇಳೆ ಕೃಷಿ ಇಲಾಖೆಯ ಅಧೀಕ್ಷಕ ಸುರೇಶ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.