ETV Bharat / state

ತುಂಗಾ ನದಿ ಟ್ರಯಲ್ ಬ್ಲಾಸ್ಟ್​ಗೂ ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಸಂಬಂಧವಿದೆ: ಸಚಿವ ಆರಗ ಜ್ಞಾನೇಂದ್ರ

ಶಾರಿಕ್ ಮೇಲ್ನೋಟಕ್ಕೆ ಸೂಸೈಡ್ ಬಾಂಬರ್ ಅಂತ ಅನ್ನಿಸುತ್ತಿದೆ. ಮಾಹಿತಿಯ ಪ್ರಕಾರ ಆರೋಪಿ ಶಾರಿಕ್ ತೀರ್ಥಹಳ್ಳಿ ಮೂಲದವನೇ ಎಂದು‌ ತಿಳಿದುಬಂದಿದೆ. ಹೀಗಾಗಿ ತೀರ್ಥಹಳ್ಳಿಯಲ್ಲೂ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

Etv Bharat
ಆಗರ ಜ್ಞಾನೇಂದ್ರ
author img

By

Published : Nov 21, 2022, 3:14 PM IST

Updated : Nov 21, 2022, 7:44 PM IST

ಶಿವಮೊಗ್ಗ: ತುಂಗಾ ನದಿಯ ಟ್ರಯಲ್ ಬ್ಲಾಸ್ಟಗೂ, ಮಂಗಳೂರು ಕುಕ್ಕರ್ ಬ್ಲಾಸ್ಟ್​ಗೂ ಸಂಬಂಧವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೊಳಗಿ ಗ್ರಾಮದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದಿರುವ ಬ್ಲಾಸ್ಟ್​ನಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬಹಳಷ್ಟು ಜನರು ಸಿಲಿಂಡರ್​ ಸಿಡಿದಿದೆ ಅಂದುಕೊಂಡಿದ್ದರು. ಇದರ ಹಿಂದೆ ದೊಡ್ಡ ಸಂಚು ನಡೆದಿರುವುದು ಗೊತ್ತಾಗುತ್ತಿದೆ. ಬಾಂಬ್ ಸ್ಫೋಟ ಮಾಡಿ ಬಹಳಷ್ಟು ಜನರಿಗೆ ಸಾವು ನೋವು ಉಂಟು ಮಾಡಲು ತಯಾರಿ ನಡೆಸಿದ್ದರು. ಆದರೆ ಅದೃಷ್ಟವಶಾತ್​ ಸ್ಫೋಟಿಸಲು ಹೋದವನೇ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಆತ ಮಾತನಾಡಲು ಆರಂಭಿಸಿದ ನಂತರ ಇದರ ಹಿಂದಿರುವ ಜಾಲ ಯಾವುದು ಎಂದು ತಿಳಿದು ಬರಲಿದೆ ಎಂದರು.

ಶಾರಿಕ್ ತೀರ್ಥಹಳ್ಳಿ ಮೂಲದವನೇ ಎಂದು‌ ತಿಳಿದು ಬಂದಿದೆ: ಸಚಿವ ಆರಗ ಜ್ಞಾನೇಂದ್ರ

ಮಾಹಿತಿಯ ಪ್ರಕಾರ ಆರೋಪಿ ಶಾರಿಕ್ ತೀರ್ಥಹಳ್ಳಿ ಮೂಲದವನೇ ಎಂದು‌ ತಿಳಿದು ಬಂದಿದೆ. ಹೀಗಾಗಿ ತೀರ್ಥಹಳ್ಳಿಯಲ್ಲೂ ಪೊಲೀಸರು ದಾಳಿ ನಡೆಸಿದ್ದಾರೆ. ಈ ದೇಶದಲ್ಲಿ ರಕ್ತ ಹರಿಸುವ, ಜನರ ಹತ್ಯೆ ಮಾಡುವ ಕೆಲಸ‌ ಮೋದಿ ಸರ್ಕಾರ ಬಂದ ಮೇಲೆ ನಿಂತು‌ ಹೋಗಿದೆ. ಈಗ ಬಹಳಷ್ಟು ಕಡಿವಾಣ ಹಾಕುವ ಕೆಲಸ ಮಾಡಿದ್ದರೂ ಸಹ ಅಲ್ಲಲ್ಲಿ ಈ ರೀತಿy ಕೆಲಸ ನಡೆಯುತ್ತಿದೆ. ಎಲ್ಲವನ್ನು ಮಟ್ಟ ಹಾಕುತ್ತೇವೆ. ಈಗ ಅಮೂಲಾಗ್ರವಾಗಿ ಬೇರು ಸಮೇತ ಕಿತ್ತು‌ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ದುಷ್ಕರ್ಮಿಗಳಿಗೆ ಎಚ್ಚರಿಕೆ ರವಾನಿಸಿದರು.

ಶಾರಿಕ್ ಹುಬ್ಬಳ್ಳಿಯಲ್ಲಿ ಸ್ವಲ್ಪ ದಿನ‌ ಇದ್ದ, ಅಲ್ಲಿ ಆತ‌ ಆಧಾರ್ ಕಾರ್ಡ್‌ ಕದ್ದಿದ್ದ. ಅಲ್ಲಿಂದ ಮೈಸೂರಿನಲ್ಲಿ ವಾಸವಿದ್ದ, ಅಲ್ಲಿನ ಮನೆ ಮೇಲೂ ಪೊಲೀಸರು ದಾಳಿ‌ ನಡೆಸಿದ್ದಾರೆ. ಈ ಬಗ್ಗೆ ಎಲ್ಲಾ ಮಾಹಿತಿ ಇದೆ. ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖೆ ಸಂಪೂರ್ಣವಾದ ನಂತರ ಪೂರ್ಣ ಮಾಹಿತಿ ಹೊರ ಬರುತ್ತದೆ ಎಂದು ತಿಳಿಸಿದರು

ತುಂಗಾ ನದಿ ಟ್ರಯಲ್ ಬ್ಲಾಸ್ಟ್​ಗೂ ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಸಂಬಂಧವಿದೆ: ಸಚಿವ ಆರಗ ಜ್ಞಾನೇಂದ್ರ

ಸ್ಫೋಟದಲ್ಲಿ ಆಟೋ ಡ್ರೈವರ್ ಗಾಯಗೊಂಡಿದ್ದಾನೆ. ಹಿಂದಿನ ಸರ್ಕಾರ ಇದ್ದಾಗ ಎಫ್​ಐಆರ್ ಹಾಕಿ ಸುಮ್ಮನಾಗುತ್ತಿದ್ದರು. ಈಗ ಅಮೂಲಾಗ್ರವಾದ ತನಿಖೆ ನಡೆಸಲಾಗುತ್ತಿದೆ. ಶಾರಿಕ್ ಮೇಲ್ನೋಟಕ್ಕೆ ಸೂಸೈಡ್ ಬಾಂಬರ್ ಅಂತ ಅನ್ನಿಸುತ್ತಿದೆ. ಮತಿನ್ ತಲೆ‌ಮರೆಸಿ‌ಕೊಂಡಿದ್ದು, ಆತನ ಹುಡುಕಾಟ ನಡೆಸಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುರದ ಬಗ್ಗೆ ತನಿಖೆ ನಡೆಸಲಾಗುತ್ತದೆ. ಇಂತಹ ಉಗ್ರರು ಪದೇ ಪದೇ ತಮ್ಮ ವಾಸಸ್ಥಾನವನ್ನು ಬದಲಾವಣೆ ಮಾಡುತ್ತಿರುವುದರಿಂದ ಬಂಧನ ಕಷ್ಟಕರವಾಗಿದೆ. ಆದರೂ ಇವರನನ್ನು ಬಿಡಲ್ಲ ಎಂದು ಗೃಹ ಸಚಿವರು ಕಠಿಣ ಸಂದೇಶ ರವಾನಿಸಿದರು.

ಮತದಾರರ ಪಟ್ಟಿ ಕುರಿತು ಕಾಂಗ್ರೆಸ್ ಸುಮ್ಮನೆ ಆರೋಪ ಮಾಡ್ತಿದೆ.. ಮತದಾರರ ಪಟ್ಟಿ ವಿಚಾರದ ಕುರಿತು ಮಾತನಾಡಿದ ಅವರು, ಆ ಸಂಸ್ಥೆಗೆ 2012-13 ರ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರವೇ ಗುತ್ತಿಗೆ ನೀಡಿದ್ದು, ನಮ್ಮ ಮೇಲೆ ಆರೋಪ‌ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಸ್ಫೋಟದ ಪ್ರಮುಖ ಆರೋಪಿ ಶಾರೀಕ್​ಗೆ ಐಸಿಸ್‌ ಉಗ್ರ ಸಂಘಟನೆ ಪ್ರೇರಣೆ: ಎಡಿಜಿಪಿ ಅಲೋಕ್‌ ಕುಮಾರ್

Last Updated : Nov 21, 2022, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.