ಶಿವಮೊಗ್ಗ : ಜಿಲ್ಲೆಯಲ್ಲಿ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟಿಸಿದ್ದು, ಜನರಲ್ಲಿ ಆಂತಕ ಮೂಡುವಂತೆ ಮಾಡಿದೆ.
ಸತತ ಏಳು ದಿನಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಅನೇಕ ಪ್ರದೇಶಗಳು ಜಲಾವೃತಗೊಂಡು ಮನೆ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಜನ ನಿರಾಶ್ರಿತರಾಗಿದ್ದರು. ಆದರೆ ಅಬ್ಬರಿಸಿದ ಮಳೆರಾಯ ಕಳೆದ ಎರಡು ದಿನಗಳಿಂದ ಸ್ವಲ್ಪ ಬಿಡುವು ನೀಡಿದ್ದ. ಆದ್ದರಿಂದ ಮಳೆಯಿಂದ ತತ್ತರಿಸಿ ಹೋಗಿದ್ದ ಜನ ಭಯದ ವಾತಾವರಣದಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದರು.
ಇಂದು ಮತ್ತೆ ಮಳೆರಾಯ ಆರ್ಭಟಿಸಲು ಆರಂಭಿಸಿದ್ದು, ಮತ್ತೆ ಏನಾಗುತ್ತೋ ಎಂಬ ಆತಂಕ ಜನರಲ್ಲಿ ಮೂಡಿದೆ.