ETV Bharat / state

ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ಪ್ರಥಮ್ - Actor Pratham who consoled Harsh's family

ನಾನು ಅವತ್ತೇ ಬರೋಣ ಎಂದುಕೊಂಡಿದ್ದೆ. ಕರ್ಫ್ಯೂ ಇದೆ ಎನ್ನುವ ಕಾರಣಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ, ಇಂದು ಬಂದು ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು..

actor-pratham-who-consoled-harshs-family
ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ಪ್ರಥಮ್
author img

By

Published : Feb 27, 2022, 5:30 PM IST

ಶಿವಮೊಗ್ಗ : ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ನಟ ಪ್ರಥಮ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಇಂತಹ ಘಟನೆಗಳು ಶಿವಮೊಗ್ಗದಲ್ಲಿ ನಡೆಯದಿರಲಿ. ಕಾನೂನಿಗೆ ದಕ್ಕೆ ತರುವ ಯಾವ ಕೆಲಸಗಳು ಮುಂದೆ ಆಗದಿರಲಿ ಹಾಗೂ ಹರ್ಷನ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂದರು.

ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ಪ್ರಥಮ್..

ನಾನು ಅವತ್ತೇ ಬರೋಣ ಎಂದುಕೊಂಡಿದ್ದೆ. ಕರ್ಫ್ಯೂ ಇದೆ ಎನ್ನುವ ಕಾರಣಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ, ಇಂದು ಬಂದು ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಹರ್ಷ ಕುಟುಂಬಕ್ಕೆ ನಟ ಧೃವ ಸರ್ಜಾ ಅವರು ಆರ್ಥಿಕ ನೆರವನ್ನು ನನ್ನ ಕೈಯಲ್ಲಿ ಕೊಟ್ಟು ಕಳುಹಿಸಿದ್ದಾರೆ. ಅದನ್ನು ತಲುಪಿಸಿದ್ದೇನೆ. ಈ ಹಿಂದೆ ಹತ್ಯೆಯಾಗಿರುವ ವಿಶ್ವನಾಥ್ ಶೆಟ್ಟಿ ಮನೆಗೆ ಸಹ ಭೇಟಿ ನೀಡಿ ನೆರವು ನೀಡುತ್ತೇನೆ ಎಂದು ತಿಳಿಸಿದರು.

ಓದಿ: ರಾಜಧಾನಿಯಲ್ಲಿನ ಡಕಾಯಿತಿ, ಕಳ್ಳತನ ಪ್ರಕರಣಗಳಿಗೆ ಮಾಲೀಕರ ನಿರ್ಲಕ್ಷ್ಯವೇ ಕಾರಣ.. ಅದ್ಹೇಗೆ ಅಂತೀರಾ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.