ETV Bharat / state

ಕೊಳವೆ ಬಾವಿ ಟಿಸಿಗೆ ಲಂಚ ಪಡೆಯುವಾಗ ಮೆಸ್ಕಾಂ ಇಂಜಿನಿಯರ್ ಎಸಿಬಿ ಬಲೆಗೆ - ಮೆಸ್ಕಾಂ ಇಂಜಿನಿಯರ್ ಎಸಿಬಿ ಬಲೆಗೆ

ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಲು ಫಲಾನುಭವಿ ಬಳಿ ಐದು ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೆಸ್ಕಾಂನ ಸಹಾಯಕ ಕಾರ್ಯಪಾಲಕ‌ ಇಂಜಿನಿಯರ್ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.

ACB
ಮೆಸ್ಕಾಂ ಇಂಜಿನಿಯರ್
author img

By

Published : Jan 28, 2021, 6:12 PM IST

ಶಿವಮೊಗ್ಗ: ಭದ್ರಾವತಿ ತಾಲೂಕು ಹೊಳೆಹೊನ್ನೂರು ಉಪ ವಿಭಾಗದ ಮೆಸ್ಕಾಂನ ಸಹಾಯಕ ಕಾರ್ಯಪಾಲಕ‌ ಇಂಜಿನಿಯರ್ ಲಂಚ ಸ್ವೀಕಾರ ಮಾಡುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಲು ಫಲಾನುಭವಿ ಆನವೇರಿಯ ಹರೀಶ್ ಎಂಬುವರಿಗೆ 5 ಸಾವಿರ ರೂ. ಲಂಚದ ಬೇಡಿಕೆಯನ್ನು ಇಂಜಿನಿಯರ್ ಪ್ರಕಾಶ್ ಇಟ್ಟಿದ್ದರಂತೆ. ಇಂದು ಹೊಳೆಹೊನ್ನೂರಿನ ಕಚೇರಿಯಲ್ಲಿ ಲಂಚ ಸ್ವೀಕಾರ ಮಾಡುವಾಗ ಎಸಿಬಿ ಎಸ್ಪಿ ಜಯಪ್ರಕಾಶ್​ ನೇತೃತ್ವದಲ್ಲಿ ದಾಳಿ ನಡೆಸಿ, ಲಂಚದ ಹಣದ ಸಮೇತ ಅಧಿಕಾರಿಯನ್ನು‌ ಹಿಡಿದಿದ್ದಾರೆ.

ಇದನ್ನೂ ಓದಿ: ಸೈಟ್​ ಕೊಡಿಸುವುದಾಗಿ ನಂಬಿಸಿ ಸಂಗೀತ ನಿರ್ದೇಶಕನಿಗೆ 94 ಲಕ್ಷ ರೂ. ದೋಖಾ ಆರೋಪ

ಈ ವೇಳೆ ಡಿವೈಎಸ್ಪಿ ಲೋಕೇಶ್, ಇನ್ಸ್​ಪೆಕ್ಟರ್ ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿ ವಸಂತ, ರಘುನಾಯ್ಕ, ನಾಗರಾಜ್, ಸುರೇಂದ್ರ, ಯೋಗೇಶಪ್ಪ, ಹರೀಶ್ ಹಾಗೂ ಶ್ರೀನಿವಾಸ್ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.