ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಘಾಟಿನಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆಗುಂಬೆ ಘಾಟಿಯ ಎರಡನೇ ತಿರುವುವಿನಲ್ಲಿ ಕಳೆದ ತಡರಾತ್ರಿ ಚಲಿಸುತ್ತಿದ್ದ ಟಾಟಾ ಏಸ್ ಮೇಲೆ ಮರ ಉರುಳು ಬಿದ್ದಿದೆ. ವಾಹನದಲ್ಲಿ ಚಾಲಕ ಸೇರಿ ಇನ್ನೋರ್ವ ಮುಂಭಾಗದಲ್ಲಿ ಇದ್ದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ.
ಮರ ಬಿದ್ದ ತಕ್ಷಣ ಗಾಬರಿಯಾದ ಚಾಲಕ ವಾಹನ ಬಿಟ್ಟು ಕೆಳಗೆ ಇಳಿದು ಓಡಿ ಹೋಗಿದ್ದಾನೆ. ಮರ ಬಿದ್ದ ಕಾರಣ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನಂತರ ಅರಣ್ಯಾಧಿಕಾರಿಗಳು, ಪೊಲೀಸರು ಬಂದು ಮರವನ್ನು ತೆರವುಗೊಳಿಸಿದ್ದಾರೆ. ಕಳೆದ ತಿಂಗಳ ಗುಡ್ಡ ಕುಸಿತವಾದ ಕಾರಣ ಆಗುಂಬೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
(ಇದನ್ನೂ ಓದಿ: ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿ: ಮಗಳ ಮುಡಿ ಕೊಟ್ಟು ಬರುತ್ತಿದ್ದ ಒಂದೇ ಕುಟುಂಬದ 6 ಜನ ದುರ್ಮರಣ)