ETV Bharat / state

'ಐಪಿಪಿಬಿ' ಪ್ರಾರಂಭಿಸಿದ ಅಂಚೆ ಇಲಾಖೆ: ಗ್ರಾಮೀಣ ಜನತೆಗಿಲ್ಲ ಈ ಆ್ಯಪ್​ನ ಪರಿಚಯ! - Indian post

ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್​​​ ಪೇಮೆಂಟ್​​​ ಬ್ಯಾಂಕ್​​ (ಐಪಿಪಿಬಿ) ಸೇವೆಯನ್ನು ಪ್ರಾರಂಭಿಸಿದ್ದು, ಗ್ರಾಮೀಣ ಭಾಗದಲ್ಲಿ ಯಾರು ಬ್ಯಾಂಕ್ ಸೇವೆ ಪಡೆಯುತ್ತಿಲ್ಲವೋ ಅವರ ಮನೆ ಬಾಗಿಲಿಗೇ ಈ ಸೇವೆ ತಲುಪಿಸುತ್ತಿದೆ.

indian post service
ಅಂಚೆ ಇಲಾಖೆ
author img

By

Published : Dec 3, 2020, 11:05 PM IST

ಶಿವಮೊಗ್ಗ: ಕುಶಲೋಪರಿ ವಿಚಾರಿಸಲು, ತುರ್ತು ಸಂದೇಶ ರವಾನಿಸಲು ಬಳಸುತ್ತಿದ್ದ 166 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್​​​ ಪೇಮೆಂಟ್​​​ ಬ್ಯಾಂಕ್​​ (ಐಪಿಪಿಬಿ) ಸೇವೆ ಪ್ರಾರಂಭಿಸಿದೆ. ಆದರೆ, ಗ್ರಾಮೀಣ ಪ್ರದೇಶದ ಎಷ್ಟೋ ಜನರಿಗೆ ಈ ಐಪಿಪಿಬಿ ಆ್ಯಪ್​​ನ ಕುರಿತು ಪರಿಚಯವೇ ಇಲ್ಲ!

ಅಂಚೆ ಇಲಾಖೆಯು ಗ್ರಾಮೀಣ ಭಾಗದಲ್ಲಿ ಯಾರು ಬ್ಯಾಂಕ್ ಸೇವೆ ಪಡೆಯುತ್ತಿಲ್ಲವೋ ಅವರ ಮನೆ ಬಾಗಿಲಿಗೇ ಆ (ಐಪಿಪಿಬಿ ಆ್ಯಪ್) ಸೇವೆ ಒದಗಿಸುತ್ತಿದೆ. ಪೋಸ್ಟ್ ಮ್ಯಾನ್​​ಗಳು ಜನರ ಮನೆ ಬಾಗಿಲಿಗೆ ಬಂದು ಅಂಚೆ ಖಾತೆ ತೆರೆದು ಕೊಡುತ್ತಾರೆ. ಅದಕ್ಕೆ ಆಧಾರ್ ಕಾರ್ಡ್​ ಹಾಗೂ ಹೆಬ್ಬೆಟ್ಟು ಪಡೆಯುತ್ತಾರೆ. ಆದರೆ, ಯಾವೊಬ್ಬ ಪೋಸ್ಟ್​ ಮ್ಯಾನ್​ ಕೂಡ ಈ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಹಳ್ಳಿ ಜನರಿಗೆ ಆ್ಯಪ್​ ಪರಿಚಯವಾಗಿಲ್ಲ.

ಆ್ಯಪ್​​ನ ವಿಶೇಷತೆ: ಐಪಿಪಿಬಿ ಆ್ಯಪ್​​ ಅನ್ನು ಗೂಗಲ್ ಪೇ ರೀತಿ ಬಳಸಬಹುದು. ವಿದ್ಯುತ್ ಬಿಲ್, ನೀರಿನ ಬಿಲ್, ಕೇಬಲ್ ಬಿಲ್ ಸೇರಿದಂತೆ ಇತರ ಸೇವೆಗಳ ಬಿಲ್​​​ಗಳನ್ನು ಪಾವತಿಸಬಹುದು. ಇತರ ಬ್ಯಾಂಕ್ ಖಾತೆಯಿಂದ ಹಣ ಕೂಡ ವರ್ಗಾಯಿಸಬಹುದು. ವರ್ಚ್ಯುಯಲ್ ಕಾರ್ಡ್​​ಗಳ ಮೂಲಕ ಹಣ ವರ್ಗಾವಣೆ ಸೇವೆ ಇದೆ. ಸುಕನ್ಯಾ ಸಮೃದ್ಧಿ ಯೋಜನೆ ಹಣವನ್ನು ಈ ಆ್ಯಪ್‌ ಮೂಲಕ ಪಾವತಿಸಬಹುದು. ಐಪಿಪಿಬಿ ಬ್ಯಾಂಕ್‌ ಖಾತೆ ತೆರೆದವರಿಗೆ ಒಂದು ಕಾರ್ಡ್​ ನೀಡಲಾಗುತ್ತದೆ. ಅದನ್ನು ಸ್ಕ್ಯಾನ್ ಮಾಡಿ ಅಂಚೆ ಕಚೇರಿಯಲ್ಲಿ ಹಣ ಪಾವತಿಸಬಹುದು.

'ಐಪಿಪಿಬಿ' ಪ್ರಾರಂಭಿಸಿದ ಅಂಚೆ ಇಲಾಖೆ

ಜೊತೆಗೆ ಗೋಲ್ಡ್​​​ ಬಾಂಡ್ ಯೋಜನೆ ತಂದಿದೆ. ಈ ಯೋಜನೆಯ ಫಲಾನುಭವಿಗಳು ಬಾಂಡ್ ಪಡೆಯುವ ದಿನ ಚಿನ್ನಕ್ಕೆ ಮಾರುಕಟ್ಟೆ ದರ ಏನಿದೆಯೋ ಅದರಂತೆ ಖರೀದಿಸಬಹುದು. ಇದು ನಿರ್ದಿಷ್ಟ ಅವಧಿಗೆ ಬಾಂಡ್ (ಕನಿಷ್ಠ 5 ವರ್ಷ-ಗರಿಷ್ಠ 7 ವರ್ಷ) ನೀಡಲಾಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಬಾಂಡ್ ಮೇಲೆ ಶೇ.2.50ರಷ್ಟು ಬಡ್ಡಿ ನೀಡಲಾಗುತ್ತದೆ. ನಿವೃತ್ತ ನೌಕರರು ಪಡೆಯುವ ಪಿಂಚಣಿಯನ್ನು ಮುಂದೆ ಅಂಚೆ ಇಲಾಖೆಯ ಮೂಲಕ ನೀಡಲಾಗುತ್ತದೆ. ಅದಕ್ಕಾಗಿ ಪಿಂಚಣಿ ಪಡೆಯುವವರು ವರ್ಷಕ್ಕೊಮ್ಮೆ ಲೈಫ್​​ ಸರ್ಟಿಫಿಕೇಟ್ (ಜೀವಿತ ಪ್ರಮಾಣ ಪತ್ರ) ಮಾಡಿಸಬೇಕು.

indian post service
ಐಪಿಪಿಬಿ ಕಾರ್ಡ್​​

ಅಂಚೆ ಇಲಾಖೆಯ ಸೇವೆಗಳು: ಇಲಾಖೆಯು ಅಂಚೆ ಸೇವೆ, ಪಾರ್ಸಲ್, ‌ಮನಿ‌ ಆರ್ಡರ್‌, ಆರ್​​ಡಿ, ಪೋಸ್ಟಲ್ ಲೈಪ್ ಇನ್ಸೂರೆನ್ಶ್​​, ರೂರಲ್ ಪೋಸ್ಟ್ ಲೈಫ್ ಇನ್ಸೂರೆನ್ಶ್​​​​ ಸೇವೆ ನೀಡುತ್ತಿದೆ. ಇಷ್ಟೆಲ್ಲಾ ಸೇವೆಗಳಿದ್ದರೂ ಅಂಚೆ ಇಲಾಖೆಯು ಗ್ರಾಮೀಣ ಭಾಗದ ಜನರಿಗೆ ಈ ಕುರಿತು ಅರಿವು ಮೂಡಿಸುವ ಕ್ರಮಕ್ಕೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.