ಶಿವಮೊಗ್ಗ: ಕೋಳಿಗಳನ್ನು ತಿನ್ನಲು ಕೋಳಿ ಫಾರಂಗೆ ನುಗ್ಗಿದ್ದ ಹೆಬ್ಬಾವನ್ನು ಸ್ನೇಕ್ ಕಿರಣ್ ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಶಿವಮೊಗ್ಗ ತಾಲೂಕು ಗಾಜನೂರು ತುಂಗಾ ಅಣೆಕಟ್ಟೆ ಪಕ್ಕದ ಲಕ್ಷ್ಮೀ ಕೋಳಿ ಫಾರಂಗೆ ಬುಧವಾರ ಬೆಳಗ್ಗೆ, ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ಬಂದಿದೆ.
ಕೋಳಿ ಫಾರಂ ಪಕ್ಕದ ಅಡಿಕೆ ತೋಟದಲ್ಲಿ ಹೆಬ್ಬಾವು ಪತ್ತೆಯಾಗಿದೆ. ತೋಟದ ಕೆಲಸಕ್ಕೆ ಬಂದವರು ಹೆಬ್ಬಾವನ್ನು ಕಂಡು ಮಾಲೀಕರಿಗೆ ತಿಳಿಸಿದ್ದಾರೆ. ಮಾಲೀಕರಾದ ರಾಕೇಶ್ ಅವರು ತಕ್ಷಣ ಸ್ನೇಕ್ ಕಿರಣ್ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಅವರು, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಹಾವು ಹಿಡಿಯುತ್ತಿದ್ದಂತೆಯೇ ಸ್ನೇಕ್ ಕಿರಣ್ ಅವರ ಕೈಗೆ ಸುತ್ತಿಕೊಂಡಿತು.
ನಂತರ ಅದರಿಂದ ಸುರಕ್ಷಿತವಾಗಿ ಬಿಡಿಸಿಕೊಂಡು, ಅದನ್ನು ಚೀಲಕ್ಕೆ ಹಾಕಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡಲಾಯಿತು. ಅಲ್ಲದೇ ತೋಟದ ಮಾಲೀಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಹೆಬ್ಬಾವಿನ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವು ರಕ್ಷಣೆ -ವಿಡಿಯೋ