ಶಿವಮೊಗ್ಗ: ತನ್ನ ಮನೆಗೆ ಟಿವಿ ನೋಡಲು ಬರುತ್ತಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ವಿವಾಹಿತನೋರ್ವನನ್ನು ಆಗುಂಬೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುರಳೀಧರ್ ಭಟ್ ಎಂದು ಗುರುತಿಸಲಾಗಿದೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲೂರಿನ ಬಾಲಕಿ ಕಾಲೇಜು ಇಲ್ಲದ ವೇಳೆ, ಪಕ್ಕದ ಮನೆಯ ಮುರುಳೀಧರ್ ಭಟ್ ಎಂಬುವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದಳು. ಈ ಸಂದರ್ಭವನ್ನು ಬಳಸಿಕೊಂಡು ಮುರುಳೀಧರ್ ಭಟ್ ಆ ಬಾಲಕಿಯನ್ನು ಪುಸಲಾಯಿಸಿ 2021 ರ ಡಿಸೆಂಬರ್ ರಲ್ಲಿ ಅತ್ಯಾಚಾರ ಮಾಡಿರುವುದಾಗಿ ತಿಳಿದುಬಂದಿದೆ. ಬಳಿಕ ಬಾಲಕಿ ಮುರುಳೀಧರ್ ಮನೆಗೆ ಹೋಗುವುದನ್ನೇ ಬಿಟ್ಟಿದ್ದಾಳೆ.
ಇದಾದ ಬಳಿಕ ದಾರಿಯಲ್ಲಿ ಸಿಕ್ಕಾಗ ಬಾಲಕಿಯನ್ನು ಮತ್ತೆ ಮನೆಗೆ ಕರೆದಿದ್ದಾರೆ. ಬಾಲಕಿ ತಿರಸ್ಕರಿಸಿದಾಗ ನಿನ್ನ ಹಾಗೂ ನಿನ್ನ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಸಿ ಮತ್ತೆ ಎರಡು ಭಾರಿ ಅತ್ಯಾಚಾರ ಮಾಡಿರುವುದಾಗಿ ತಿಳಿದುಬಂದಿದೆ.
ಬಾಲಕಿಯ ದೇಹದಲ್ಲಾದ ಬದಲಾವಣೆ ಕಂಡು ಮನೆಯವರು ವೈದ್ಯರಲ್ಲಿ ಪರೀಕ್ಷೆ ನಡೆಸಿದಾಗ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಸದ್ಯ ಬಾಲಕಿಯನ್ನು ಶಿವಮೊಗ್ಗದ ಸುರಭಿ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಮುರುಳೀಧರ್ ವಿರುದ್ದ ಆಗುಂಬೆ ಪೊಲೀಸರು ಅತ್ಯಾಚಾರ ಹಾಗೂ ಜಾತಿ ನಿಂದನೆ ಕೇಸು ದಾಖಲಿಸಿ ಬಂಧಿಸಿದ್ದಾರೆ.
ಇದನ್ನೂ ಓದಿ : ಕೌಟುಂಬಿಕ ಕಲಹದಿಂದ ಬೇಸತ್ತು ಅಪ್ರಾಪ್ತ ಮಗನ ಸಹಾಯದಿಂದ ಪತಿ ಕೊಂದ ಪತ್ನಿ