ETV Bharat / state

ಕೆರೆಯಲ್ಲಿ ಮೀನಿನ ಬಲೆ ಹಾಕಲು ಹೋಗಿ ವ್ಯಕ್ತಿ ನೀರುಪಾಲು - ಶಿವಮೊಗ್ಗ

ಕೆರೆ ಕೋಡಿ ಒಡೆದು ಮೀನು ಹೊರ ಹೋಗುತ್ತವೆ ಎಂದು ಬಲೆ ಹಾಕಲು ಹೋದ ವ್ಯಕ್ತಿಯೋರ್ವ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ನಡೆದಿದೆ.

ವ್ಯಕ್ತಿ ನೀರು ಪಾಲು
author img

By

Published : Aug 8, 2019, 9:28 AM IST

Updated : Aug 8, 2019, 1:08 PM IST

ಶಿವಮೊಗ್ಗ: ಕೋಡಿ ಒಡೆದು ಕೆರೆಯಿಂದ ಮೀನು ಹೊರ ಹೋಗುತ್ತವೆ ಎಂದು ಬಲೆ ಹಾಕಲು ಹೋದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯರೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ವ್ಯಕ್ತಿ ನೀರುಪಾಲು

ಭದ್ರಾವತಿ‌ ನಿವಾಸಿ ಷಣ್ಮುಗಪ್ಪ (50) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟವ. ಭದ್ರಾವತಿ ತಾಲೂಕು ಯರೇಹಳ್ಳಿ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ.

ಮೃತ ಷಣ್ಮುಗಪ್ಪ ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ಗುತ್ತಿಗೆ ಪಡೆದಿದ್ದ ವ್ಯಕ್ತಿಯ ಬಳಿ ಕೆಲಸಕ್ಕೆಂದು ಹೋಗಿದ್ದ. ಮಳೆ ಹೆಚ್ಚಾಗಿದ್ದ ಕಾರಣ ಕೆರೆಗೆ ನೀರು ಸಹ ಹೆಚ್ಚಾಗಿಯೇ ಬಂದಿತ್ತು. ಈ ವೇಳೆ ಕೆರೆಯ ಕೋಡಿ ಬಿದ್ದು ನೀರು ಹೊರ ಹೋಗುತ್ತಿದ್ದಾಗ ಪೈಪ್ ಬಳಿ ಬಲೆ ಹಾಕಲು ಹೋಗಿದ್ದ ಷಣ್ಮುಗಪ್ಪ ನೀರಿನ ರಭಸಕ್ಕೆ ಪೈಪ್ ಮೂಲಕವೇ ನೀರಿನಲ್ಲಿ‌ ಕೊಚ್ಚಿ ಹೋಗಿದ್ದಾನೆ.

ಇನ್ನು ಕೊಚ್ಚಿ ಹೋಗುತ್ತಿದ್ದ ಷಣ್ಮುಗಪ್ಪನನ್ನು ಹಿಡಿಯಲು ಗ್ರಾಮಸ್ಥರು ಯತ್ನ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸುಮಾರು 1 ಕಿ.ಮೀ. ದೂರದಲ್ಲಿ ಷಣ್ಮುಗಪ್ಪನ ಶವ ಪತ್ತೆಯಾಗಿದೆ. ಈ ಕುರಿತು ಭದ್ರಾವತಿ ಹೊಸಮನೆ ಶಿವಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕೆರೆಯಲ್ಲಿ ಮೀನ ಬಲೆ ಹಾಕಲು ಹೋಗಿ ವ್ಯಕ್ತಿ ನೀರು ಪಾಲು.

ಶಿವಮೊಗ್ಗ: ಕೊಡಿ ಬಿದ್ದ ಕೆರೆಯಿಂದ ಮೀನು ಹೊರ ಹೋಗುತ್ತವೆ ಎಂದು ಬಲೆ ಹಾಕಲು ಹೋದ ವ್ಯಕ್ತಿವೊರ್ವ ನೀರಿನಲ್ಲಿ ತೇಲಿ ಹೋಗಿ ಸಾವನ್ನಪ್ಪಿರುವ ಘಟನೆ ಯರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಯರೇಹಳ್ಳಿ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ. ಈ ಕುರಿತ ಎಕ್ಸಕ್ಲೋಸಿವ್ ವಿಡಿಯೋ ಈ ಟಿವಿ ಭಾರತ್ ಗೆ ಲಭ್ಯವಾಗಿದೆ. ಭದ್ರಾವತಿ‌ ನಿವಾಸಿ 50 ವರ್ಷದ ಷಣ್ಮುಗ ಎಂಬಾತ ನೀರಿನಲ್ಲಿ ತೇಲಿ ಹೋಗಿ ಮೃತ ಪಟ್ಟ ದುದೈರ್ವಿಯಾಗಿದ್ದಾನೆ. Body:ಮೃತ ದುದೈವಿ ಷಣ್ಮುಗಪ್ಪ ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ಗುತ್ತಿಗೆ ಪಡೆದಿದ್ದ ವ್ಯಕ್ತಿಯ ಬಳಿ ಕೆಲ್ಸಕ್ಕೆಂದು ಹೋಗಿದ್ದನು. ಮಳೆ ಹೆಚ್ಚಾಗಿದ್ದ ಕಾರಣ ಕೆರೆಗೆ ನೀರು ಸಹ ಹೆಚ್ಚಾಗಿಯೇ ಬಂದಿತ್ತು. ಈ ವೇಳೆ ಕೆರೆಯ ಕೊಡಿ ಬಿದ್ದು ನೀರು ಹೊರ ಹೋಗುತ್ತಿದ್ದಾಗ ಪೈಪ್ ಬಳಿ ಬಲೆ ಹಾಕಲು ಹೋಗಿದ್ದ ಷಣ್ಮುಗಪ್ಪ ನೀರಿನ ರಭಸಕ್ಕೆ ಪೈಪ್ ಮೂಲಕವೇ ನೀರಿನಲ್ಲಿ‌ ತೇಲಿ ಹೋಗಿದ್ದಾನೆ.Conclusion:ತೇಲಿ‌ ಹೋಗುತ್ತಿದ್ದ ಷಣ್ಮುಗಪ್ಪನನ್ನು ಹಿಡಿಯಲು ಗ್ರಾಮಸ್ಥರು ಯತ್ನ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸುಮಾರು 1 ಕಿಮೀ ದೂರದಲ್ಲಿ ಷಣ್ಮುಗಪ್ಪನ ಶವ ಪತ್ತೆಯಾಗಿದೆ. ಈ ಕುರಿತು ಭದ್ರಾವತಿ ಹೊಸಮನೆ ಶಿವಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Aug 8, 2019, 1:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.