ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾಗೆ ಓರ್ವ ಬಲಿಯಾಗಿದ್ದು, ಹೊಸನಗರ ಪಟ್ಟಣದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ.
ಹೊಸನಗರದ ಮಸೀದಿ ರಸ್ತೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಆಶಾ ಕಾರ್ಯಕರ್ತೆಯ ಪತಿಯಾಗಿರುವ ಇವರ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ ತಾಲೂಕು ಆಡಳಿತ ಮಸೀದಿ ರಸ್ತೆಯನ್ನು ಸೀಲ್ಡೌನ್ ಮಾಡಿದೆ. ಇನ್ನು ಆಶಾ ಕಾರ್ಯಕರ್ತೆಗೆ ಸಹ ಪರೀಕ್ಷೆ ನಡೆಸಲಾಗಿದ್ದು, ಅವರ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.
ಕ್ಷೌರಿಕ ಸಾವು:
ಶಿವಮೊಗ್ಗ ತಾಲೂಕು ಗೊಂದಿ ಚಟ್ನಳ್ಳಿಯ ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಮೃತನ ಅಂತ್ಯ ಸಂಸ್ಕಾರ ಮಂಗಳೂರಿನಲ್ಲಿಯೇ ನಡೆಸಲಾಗಿದೆ.