ETV Bharat / state

ಶಿವಮೊಗ್ಗ: ಮನೆಯಲ್ಲೇ ತಾಯಿಯ ಮೃತದೇಹದ ಜೊತೆ ಐದು ದಿನ ಕಳೆದ ಮಗಳು! - a dead Body found at home in Shimoga

ಮಹಿಳೆಯೊಬ್ಬರು ಶಿವಮೊಗ್ಗದಲ್ಲಿ ಕ್ಯಾನ್ಸ್​​​ರ್​​ನಿಂದ ಸಾವನ್ನಪ್ಪಿದ್ದು, ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆ ಮೃತಪಟ್ಟಿದ್ದರೂ ಅವರ ಮಗಳು ಕಳೆದ ಐದು ದಿನದಿಂದ ಮೃತದೇಹದ ಜೊತೆಗೆ ಮನೆಯೊಳಗಿದ್ದಾರೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

a dead  Body found at home in Shimoga
'ಅಮ್ಮ'ನ ಮೃತದೇಹದ ಜೊತೆ ಮಗಳ ಐದು ದಿನ ವಾಸ
author img

By

Published : May 19, 2020, 3:37 PM IST

ಶಿವಮೊಗ್ಗ: ತಾಯಿಯ ಮೃತದೇಹದೊಂದಿಗೆ ಮಗಳು ಐದು ದಿನ ಕಾಲ ಕಳೆದಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಕ್ಯಾನ್ಸ್​​​ರ್​​ನಿಂದ ಬಳಲುತ್ತಿದ್ದು, ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಹಿಳೆ ಮೃತಪಟ್ಟಿದ್ದರೂ ಅವರ ಮಗಳು ಕಳೆದ ಐದು ದಿನದಿಂದ ಮೃತದೇಹದ ಜೊತೆಗೆ ಮನೆಯೊಳಗಿದ್ದಾರೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಸಾವಿನ ಕುರಿತು ಅನುಮಾನ ಮೂಡುವಂತೆ ಮಾಡಿದೆ.

ನಿವೃತ್ತ ಶಿಕ್ಷಕಿ ರಾಜೇಶ್ವರಿ (64) ಎಂಬುವವರು ಮೃತರಾಗಿದ್ದು, ಇವರು ಬಸವನಗುಡಿಯ 5ನೇ ಅಡ್ಡ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಇವರು ಮೇ 13ರಂದು ಔಷಧಿ ಸೇವಿಸಿದ್ದು, ಓವರ್​ ಡೋಸ್​​​ನಿಂದಲೋ ಅಥವಾ ಆರೋಗ್ಯ ಸಮಸ್ಯೆ ಉಲ್ಬಣಿಸಿಯೋ ಮನೆಯೊಳಗೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ತಾಯಿಯ ಮೃತದೇಹದ ಜೊತೆ ಮಗಳ ಐದು ದಿನ ವಾಸ

ಈ ವಿಚಾರ ಹೊರಗಿನವರಿಗೆ ತಿಳಿದಿರಲಿಲ್ಲ. ರಾಜೇಶ್ವರಿ ಮೃತಪಟ್ಟಾಗ ಅವರ ಮಗಳು ಮನೆಯಲ್ಲಿಯೇ ಇದ್ದಾರೆ. ಸ್ನಾತಕೋತ್ತರ ಪದಿವೀಧರೆಯಾಗಿರುವ ಮಗಳು, ಐದು ದಿನ ತಾಯಿಯ ಶವದೊಂದಿಗೆ ಮನೆಯೊಳಗೆ ಇದ್ದಾರೆ. ಹೊರಗೆ ಬಂದು ಯಾರಿಗೂ ವಿಚಾರ ತಿಳಿಸಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಮನೆ ಮಾಲೀಕರು ಮತ್ತು ಅಕ್ಕಪಕ್ಕದವರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಆಗ ರಾಜೇಶ್ವರಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜೊತೆಗೆ ಅಲ್ಲೇ ಮಗಳು ಕುಳಿತಿರುವುದನ್ನು ಗಮನಿಸಿ ಆತಂಕಕ್ಕೀಡಾಗಿದ್ದಾರೆ.

ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದು, ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಗಳು ಮಾನಸಿಕ ಖಿನ್ನತೆಗೆ ಒಳಗಾದಂತೆ ಕಾಣುತ್ತಿದ್ದು, ಪೊಲೀಸರು ಚಿಕಿತ್ಸೆ ಕೊಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.