ETV Bharat / state

ಗ್ಯಾರಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕಾರ್ಯ: ಬಿ.ವೈ.ರಾಘವೇಂದ್ರ - ಕಾಂಗ್ರೆಸ್‌ ಸರ್ಕಾರ

ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಪರ್ಕ್ ಸೆ ಸಮರ್ಥನ್‌ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು.

MP B Y Raghavendra spoke at the press conference.
ಸಂಸದ ಬಿ ವೈ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Jun 16, 2023, 8:22 PM IST

Updated : Jun 16, 2023, 10:16 PM IST

ಸಂಸದ ಬಿ ವೈ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಮೊಗ್ಗ: ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ನಮಗೆ ಬೇಸರವಿಲ್ಲ, ಜನರಿಗೆ ಅವೆಲ್ಲವೂ ತಲುಪಬೇಕು. ಆದರೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವಂತಹದ್ದು ಸರಿಯಲ್ಲ ಎಂದು ಹೇಳಿದರು.

ವಿದ್ಯುತ್‌ ಯೂನಿಟ್‌ ದರ ಹೆಚ್ಚಳ ಮಾಡಿರುವುದಲ್ಲದೇ, 200ರ ಬದಲು 201 ಯೂನಿಟ್‌ ಬಳಕೆ ಮಾಡಿದರೂ ಪೂರ್ಣ ದರ ಕಟ್ಟಿಸಿಕೊಂಡು ಸಬ್ಸಿಡಿ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೆಇಬಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಕೆಲಸವನ್ನು ಬಿಜೆಪಿ ಆರಂಭಿಸಿದೆ ಎಂದರು.

ಸಂಪರ್ಕ್ ಸೆ ಸಮರ್ಥನ್‌ ಕಾರ್ಯಕ್ರಮ: ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಸಂಪರ್ಕ್ ಸೆ ಸಮರ್ಥನ್‌ ಕಾರ್ಯಕ್ರಮದಡಿ ಕಾರ್ಯಕರ್ತರು, ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಂತಹ ವಿಶೇಷ ಕಾರ್ಯಕ್ರಮ ಇಡೀ ದೇಶಾದ್ಯಂತ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಸಾಧನೆಗಳನ್ನು ಚರ್ಚೆ ಮಾಡಿ ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ, ಅಪೂರ್ಣಗೊಂಡ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರೈಸುವ ನಿಟ್ಟಿನಲ್ಲಿ ಹಾಗೂ ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ವಿಕಾಸ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಪಿಡ್‌ ಆಕ್ಷನ್‌ ಫೋರ್ಸ್‌ ಸ್ಥಾಪನೆ: ಭದ್ರಾವತಿ ಬುಳ್ಳಾಪುರ ಗ್ರಾಮದಲ್ಲಿ 50.29 ಎಕರೆ ಪ್ರದೇಶದಲ್ಲಿ ರಾಪಿಡ್‌ ಆಕ್ಷನ್‌ ಫೋರ್ಸ್‌ ಸ್ಥಾಪನೆಗೆ ಅಮಿತ್‌ ಶಾ ಅವರು ಈಗಾಗಲೇ ಭೂಮಿ ಪೂಜೆ ನೆರವೇರಿಸಿದ್ದಾರೆ. ರಾಪಿಡ್‌ ಅಕ್ಷನ್‌ ಫೋರ್ಸ್‌ ಕರ್ನಾಟಕದ 31 ಜಿಲ್ಲೆಗಳನ್ನೊಳಗೊಂಡಿದ್ದಷ್ಟೇ ಅಲ್ಲದೇ, ಕೇರಳದ 4 ಜಿಲ್ಲೆಗಳು, ಗೋವಾದ 2 ಜಿಲ್ಲೆಗಳು, ಲಕ್ಷದ್ವೀಪದ 1 ಜಿಲ್ಲೆ ಹಾಗೂ ಪುದುಚೆರಿಯ 1 ಜಿಲ್ಲೆಗಳ ವ್ಯಾಪ್ತಿಯನ್ನು ಸಹ ಒಳಗೊಂಡಿರುತ್ತದೆ. ಕಮಾಂಡೆಂಟ್‌, ಡೆಪ್ಯುಟಿ ಕಮಾಂಡೆಂಟ್‌ ಸೇರಿದಂತೆ ಒಟ್ಟು 445 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

2009ಕ್ಕೂ ಮೊದಲು ಕೇವಲ 8-10 ರೈಲುಗಳ ಓಡಾಟ ಇತ್ತು. ಇದೀಗ 28 ಟ್ರೇನ್​​ಗಳ ಟ್ರಿಪ್‌ ಓಡಾಟ ಆರಂಭವಾಗಿದೆ. ಎರಡು ರೈಲ್ವೆ ಓವರ್‌ ಬ್ರಿಡ್ಜ್​​ ನಿರ್ಮಾಣವಾಗಿದೆ.(ಭದ್ರಾವತಿ ತರೀಕೆರೆ ರಸ್ತೆಯಲ್ಲಿ, ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ), ಇನ್ನೂ ನಾಲ್ಕು ರೈಲ್ವೆ ಓವರ್‌ ಬ್ರಿಡ್ಜ್​ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಾ.ಹೆ.206 ತುಮಕೂರಿನಿಂದ ಶಿವಮೊಗ್ಗದ ವರೆಗಿನ 214.45 ಕಿ.ಮೀ ಉದ್ದದ 4 ಪಥದ ರಸ್ತೆಯ ನಿರ್ಮಾಣ ರೂ. 7162 ಕೋಟಿ, ರಾ.ಹೆ. 13 ಚಿತ್ರದುರ್ಗ ಶಿವಮೊಗ್ಗ ರಸ್ತೆಯ ಬಾಕಿ ಉಳಿದ ಕಾಮಗಾರಿಗಳು 5169 ಕೋಟಿ ರೂ.ಕಾಮಗಾರಿ ಪ್ರಾರಂಭಗೊಂಡು ಶೇ 10ರಷ್ಟು ಕೆಲಸ ಮುಗಿದಿದೆ.ಹೊಳೆಹೊನ್ನೂರಿನ ಬೈಪಾಸ್‌ ರಸ್ತೆ ಮತ್ತು ಭದ್ರಾನದಿಗೆ ಸೇತುವೆ ಸೇರಿದಂತೆ ಕೈಮರದಿಂದ ಶಿವಮೊಗ್ಗವರೆಗಿನ ರಸ್ತೆ ಕೆಲಸ ಪ್ರಗತಿಯಲ್ಲಿವೆ.

ರಾಷ್ಟ್ರೀಯ ಹೆದ್ದಾರಿ 206 ತುಮಕೂರು- ಶಿವಮೊಗ್ಗ ರಸ್ತೆ, ತುಮಕೂರಿನಿಂದ ಶಿವಮೊಗ್ಗ ವರೆಗಿನ ಹೆದ್ದಾರಿಯ 4 ಪಥದ ರಸ್ತೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿವಮೊಗ್ಗದಿಂದ ತಾಳಗುಪ್ಪ ಚೂರಿಕಟ್ಟೆ ಜಂಕ್ಷನ್‌ ವರೆಗೆ ಸುಮಾರು 80 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಡಿಪಿಆರ್‌ ತಯಾರಿಸಲಾಗಿದೆ ಎಂದು ವಿವರಣೆ ನೀಡಿದರು.

ವಿಐಎಸ್​​​ಎಲ್‌ ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಪಟ್ಟಿಯಿಂದ ಹಿಂಪಡೆದಿದ್ದನ್ನು ರದ್ದುಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿದ್ದರ ಪರಿಣಾಮ ಕೇಂದ್ರ ಸರ್ಕಾರ ವಾಪಸು ಪಡೆದಿದೆ. ಕೆಲವು ಸಣ್ಣಪುಟ್ಟ ಯುನಿಟ್‌ಗಳನ್ನು ಫೋರ್ಜ್‌ ಯುನಿಟ್‌ಗಳನ್ನು ಪ್ರಾರಂಭಿಸಲಾಗಿದೆ. ಉತ್ತಮ ಆದಾಯ ಬರುವಂತಾಗಿದೆ ಎಂದು ಹೇಳಿದರು.

ಸಂಸತ್‌ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ 37 ಕೋಟಿ ವೆಚ್ಚದಲ್ಲಿ ಅಂದಾಜು 1000 ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ತಂಗುದಾಣ, ಹೈಮಾಸ್ಟ್ ಲೈಟ್ಸ್ ಸಮುದಾಯಭವನಗಳು, ರಸ್ತೆ, ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳು, ಸ್ಮಶಾನ ಅಭಿವೃದ್ಧಿ, ಪಾರ್ಕ್‌ ಅಭಿವೃದ್ಧಿ, ರೈತ ಸಹಕಾರಿ ಸಂಘಗಳ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳು, ಭದ್ರಾವತಿಯಲ್ಲಿ 2 ಡಿಸ್ಪೆನ್ಸರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.

ಈಗ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದು ತಾತ್ಕಾಲಿಕ ಮಾತ್ರ. ಕಾಂಗ್ರೆಸ್‌ ಸರಕಾರ ಮಾಡುತ್ತಿರುವ ಘೋಷಣೆಗಳು ಹಾಗೂ ತೆಗೆದುಕೊಳ್ಳುವಂತಹ ನಿಲುವುಗಳು ಎಲ್ಲವೂ ಅಚ್ಚರಿಯಾಗಿದೆ. ದೇಶದ ಹಿತದೃಷ್ಟಿಯಿಂದ ಮಹಾನ್‌ ನಾಯಕ ಸಾವರ್ಕರ್‌ ಅವರ ಇತಿಹಾಸ ಪುಟದಿಂದ ಮುಚ್ಚಿಡುವಂತಹ ಕೆಲಸವನ್ನು ಕಾಂಗ್ರೆಸ್‌ ಮಾಡಿತು. ಅದನ್ನು ಸೇರಿಸುವಂತಹ ಕೆಲಸವನ್ನು ಬಿಜೆಪಿ ಸರಕಾರ ಮಾಡಿದಾಗ , ಈಗ ಕಾಂಗ್ರೆಸ್‌ ಸರಕಾರ ತೆಗೆಯುವ ಕೆಲಸವನ್ನು ಮಾಡುತ್ತಿದೆ ಎಂದು ಅಪಾದಿಸಿದರು.

ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಥವಾ ಬಿಜೆಪಿಯ ಸಿದ್ಧಾಂತಗಳಿಲ್ಲ, ಇವರು ಬ್ರಿಟಿಷರ ವಿರುದ್ಧ ಗುಂಡಿಗೆ ಎದೆಗೊಟ್ಟು ದೇಶದ ರಕ್ಷಣೆಗೋಸ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್‌ ನಾಯಕರ ಪಾಠವನ್ನು ತೆಗೆದು ಹಾಕುವ ಕೆಲಸ ನಿಜಕ್ಕೂ ಖಂಡನೀಯ, ಅಲ್ಲದೇ ಗೋ ಹತ್ಯೆಯನ್ನು ನಿಷೇಧ ಕಾಯಿದೆ ರದ್ದುಗೊಳಿಸುವ ಕುರಿತು ಪಶು ಸಂಗೋಪನಾ ಸಚಿವರು ಹೇಳಿರುವುದು ದೌರ್ಭಾಗ್ಯ.

ಕಾಂಗ್ರೆಸ್‌ ಹೀಗೆ ದ್ವೇಷದ ಕಾರಣವನ್ನು ಮಾಡಿದರೆ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡ್ರುವುದು ಅನುಮಾನ ಇಲ್ಲ ಎಂದ ಅವರು, ಈ ವೇಳೆ ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಬಸ್‌ ಸಂಚಾರದ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಇದನ್ನೂಓದಿ:Coal stock: ದೇಶದಲ್ಲಿ ದಾಖಲೆಯ 110 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹ: ಶಾಖೋತ್ಪನ್ನ ಕೇಂದ್ರಗಳು ನಿರಾಳ

Last Updated : Jun 16, 2023, 10:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.