ಶಿವಮೊಗ್ಗ: ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 80 ವರ್ಷದ ಹೆಣ್ಣಾನೆ ಗಂಗೆ ಸಾವನ್ನಪ್ಪಿದೆ.
1971 ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿದು ಗಂಗೆಯನ್ನು ಸಕ್ರೆಬೈಲಿಗೆ ತರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಿಡಾರದ ಪ್ರೀತಿಯ ಆನೆಯಾಗಿತ್ತು. ಇದು ಆರು ಮರಿಗಳಿಗೆ ಜನ್ಮ ನೀಡಿತ್ತು. ಕಾಡಾನೆಗಳನ್ನು ಸೆರೆ ಹಿಡಿಯುವಾಗ ಗಂಗೆಯನ್ನು ಬಳಸಲಾಗುತ್ತಿತ್ತು.
ಕಳೆದ 15 ದಿನಗಳಿಂದ ಆನೆ ಅನಾರೋಗ್ಯದಿಂದ ಬಳಲುತ್ತಿತ್ತು. ಇದಕ್ಕೆ ಬಿಡಾರದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ನಿಯಮದ ಪ್ರಕಾರ ಆನೆಯ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಗಿದೆ.
ಇದನ್ನೂ ಓದಿ: ವೀರಶೈವ ಸಂಪ್ರದಾಯದಂತೆ ಕುಪ್ಪೂರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅಂತ್ಯಕ್ರಿಯೆ