ETV Bharat / state

7 ವರ್ಷದ ಪೋರನ ಬಾಯಲ್ಲಿ 543 ಲೋಕಸಭಾ ಕ್ಷೇತ್ರಗಳ ಹೆಸರು! ನೀವೂ ಒಮ್ಮೆ ಕೇಳಿ - news kannada

2ನೇ ತರಗತಿ ಓದುತ್ತಿರುವ 7 ವರ್ಷದ ಪೋರನೊಬ್ಬ ದೇಶದ 543 ಲೋಕಸಭಾ ಕ್ಷೇತ್ರಗಳ ಹೆಸರನ್ನು ನೀರು ಕುಡಿದಷ್ಟೇ ಸಲೀಸಾಗಿ ಹೇಳಿ ಮುಗಿಸುತ್ತಾನೆ ಅಂದ್ರೆ ನೀವು ನಂಬುತ್ತೀರಾ?

ದೇಶದ 543 ಲೋಕಸಭಾ ಕ್ಷೇತ್ರದ ಹೆಸರು ಹೇಳುವ ಪೋರ
author img

By

Published : Apr 6, 2019, 6:39 PM IST

ಶಿವಮೊಗ್ಗ: ದೇಶದ 543 ಲೋಕಸಭಾ ಕ್ಷೇತ್ರಗಳ ಹೆಸರು ಹೇಳಿ ಅಂತ ಯಾರಿಗಾದ್ರೂ ಕೇಳಿದ್ರೆ ಅವರು ಗೊಂದಲಕ್ಕೀಡಾಗಬಹುದು. ಆದ್ರೆ, ನಗರದ 7 ವರ್ಷದ ಪೋರ ಮಾತ್ರ ನೀರು ಕುಡಿದಷ್ಟೇ ಸಲೀಸಾಗಿ ಹೇಳಿ ಮುಗಿಸುತ್ತಾನೆ.

ಈತನಿಗೆ ದೇಶದ ಯಾವುದೇ ರಾಜ್ಯದ ಲೋಕಸಭಾ ಕ್ಷೇತ್ರದ ಹೆಸರು ಹೇಳು ಅಂದ್ರೆ ಸಾಕು ಪಟಪಟನೆ ಹೇಳಿ ಮುಗಿಸಿ, ಮತ್ತೆ ಯಾವುದು ಹೇಳಬೇಕು ಅಂತ ಕೇಳುತ್ತಾನೆ. ಹೀಗೆ ದೇಶದ ಲೋಕಸಭಾ ಕ್ಷೇತ್ರಗಳ ಹೆಸರನ್ನು ಒಂದೇ ಉಸಿರಿನಲ್ಲಿ ಹೇಳಿ‌ ಮುಗಿಸುವ ಪೋರನ ಹೆಸರು ಇಂದ್ರಜಿತ್.

ದೇಶದ 543 ಲೋಕಸಭಾ ಕ್ಷೇತ್ರದ ಹೆಸರು ಹೇಳುವ ಪೋರ

ಇಂದ್ರಜಿತ್ ದೇಶದ ಅತಿ ಹೆಚ್ಚು ಮತದಾರು ಹೊಂದಿರುವ ಕ್ಷೇತ್ರ ತಲಂಗಾಣದ ಮಲ್ಕಜ್ ಗಂಜ್ ಹಾಗೂ ದೇಶದ ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಲಕ್ಷದ್ವೀಪ... ಹೀಗೆ ದೇಶದ ವಿಶೇಷ ಲೋಕಸಭಾ ಕ್ಷೇತ್ರದ ಹೆಸರನ್ನು‌ ಹೇಳುವ ಜೊತೆಗೆ ದೇಶದ ಎಲ್ಲಾ ಪ್ರದಾನಮಂತ್ರಿಗಳ ಹೆಸರನ್ನು ಸಹ ಒಂದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾನೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಕುಮಾರ್ ಹಾಗೂ ಆಶಾ ಅವರ ಏಕೈಕ ಪುತ್ರನಾದ ಇಂದ್ರಜಿತ್, ಈ ಮೂಲಕ ಇದೀಗ ಎಲ್ಲರ ಗಮನ ಸಳೆದಿದ್ದಾನೆ.

ಶಿವಕುಮಾರ್ ತಮ್ಮ ಮಗನಿಗೆ ಕಳೆದ ಮೂರು ತಿಂಗಳಿನಿಂದ ಲೋಕಸಭಾ ಕ್ಷೇತ್ರಗಳ ಹೆಸರನ್ನು ಹೇಳಿ ಕೊಟ್ಟಿದ್ದಾರಂತೆ. ಇದರ ಪರಿಣಾಮ ದೇಶದ 543 ಲೋಕಸಭಾ ಕ್ಷೇತ್ರಗಳ ಹೆಸರನ್ನು ನೀರು ಕುಡಿದಷ್ಟು ಸಲೀಸಾಗಿ ಹೇಳುತ್ತಿದ್ದಾನೆ. ಇಂದ್ರಜಿತ್ ಕೇವಲ ಲೋಕಸಭಾ ಕ್ಷೇತ್ರಗಳ ಹೆಸರನ್ನು ಹೇಳುವುದಷ್ಟೆ ಅಲ್ಲದೆ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಿ ಎಂದೂ ಮನವಿ ಮಾಡುತ್ತಿದ್ದಾನೆ. ಇಂದ್ರಜಿತ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಚುನಾವಣೆಯ ಅಂಬಾಸಿಡರ್ ಆಗಿದ್ದ.‌

Intro:ದೇಶದ 543 ಲೋಕಸಭ ಕ್ಷೇತ್ರದ ಹೆಸರು ಹೇಳಿ ಅಂತ ಯಾರಿಗಾದ್ರೂ ಕೇಳಿದ್ರೆ ಅವರು ತಡನಡಾಯಿಸಬಹುದು ಆದ್ರೆ, ಶಿವಮೊಗ್ಗದ 7 ವರ್ಷದ ಪೋರಾ ಮಾತ್ರ ನೀರು ಕುಡಿದಷ್ಟೆ ಸಲೀಸಲಾಗಿ ಹೇಳಿ ಮುಗಿಸುತ್ತಾನೆ. ಈತನಿಗೆ ದೇಶದ ಯಾವುದೇ ರಾಜ್ಯದ ಲೋಕಸಭ ಕ್ಷೇತ್ರದ ಹೆಸರು ಹೇಳು ಅಂದ್ರೆ ಸಾಕು ಪಟ ಪಟನೆ ಹೇಳಿ ಮುಗಿಸಿ, ಮತ್ತೆ ಯಾವುದು ಹೇಳಬೇಕು ಅಂತ ಕೇಳುತ್ತಾನೆ.. ಹೀಗೆ ದೇಶದ ಲೋಕಸಭ ಕ್ಷೇತ್ರಗಳ ಹೆಸರನ್ನು ಒಂದೇ ಉಸಿರಿನಲ್ಲಿ ಹೇಳಿ‌ ಮುಗಿಸುವ ಪೋರನ ಹೆಸರು ಇಂದ್ರಜಿತ್. ಇಂದ್ರಜಿತ್ ಎರಡನೇ ತರಗತಿಯನ್ನು‌ ಓದುತ್ತಿದ್ದಾನೆ.‌

Body:ಇಂದ್ರಜಿತ್ ದೇಶದ ಅತಿ ಹೆಚ್ಚು ಮತದಾರು ಹೊಂದಿರುವ ಕ್ಷೇತ್ರ ತಲಂಗಾಣದ ಮಲ್ಕಜ್ ಗಂಜ್ ಹಾಗೂ ದೇಶದ ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಲಕ್ಷದ್ವೀಪ್ ಹೀಗೆ ದೇಶದ ವಿಶೇಷ ಲೋಕಸಭ ಕ್ಷೇತ್ರದ ಹೆಸರನ್ನು‌ ಹೇಳುವ ಜೊತೆಗೆ ದೇಶದ ಎಲ್ಲಾ ಪ್ರದಾನ ಮಂತ್ರಿಗಳ ಹೆಸರನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾನೆ. ಇಂದ್ರಜಿತ್ ಶಿವಕುಮಾರ್ ಹಾಗೂ ಆಶಾ ರವರ ಏಕೈಕ ಪುತ್ರ. ಶಿವಕುಮಾರ್ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Conclusion:ಶಿವಕುಮಾರ್ ರವರು ತಮ್ಮ ಮಗನಿಗೆ ಕಳೆದ ಮೂರು ತಿಂಗಳನಿಂದ ಲೋಕಸಭ ಕ್ಷೇತ್ರದ ಹೆಸರನ್ನು ಹೇಳಿ ಕೊಟ್ಟಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸತತ ಟ್ರೈನಿಂಗ್ ಕೊಟ್ಟ ಪರಿಣಾಮ‌ ದೇಶದ 543 ಲೋಕಸಭ ಕ್ಷೇತ್ರದ ಹೆಸರನ್ನು ನೀರು ಕುಡಿದಷ್ಟು ಸಲೀಸಲಾಗಿ ಹೇಳುತ್ತಿದ್ದಾನೆ. ಇಂದ್ರಜಿತ್ ಕೇವಲ ಲೋಕಸಭ ಕ್ಷೇತ್ರಗಳ ಹೆಸರನ್ನು ಹೇಳುವುದಷ್ಟೆ ಅಲ್ಲದೆ, ಎಲ್ಲಾರು ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳುತ್ತಾ. ಮತದಾನ ಜಾಗೃತಿ ಮೂಡಿಸುತ್ತಿದ್ದಾನೆ.‌ಇಂದ್ರಜಿತ್ ಕಳೆದ ವಿಧಾನಸಭ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಚುನಾವಣೆಯ ಅಂಬಾಸಿಡರ್ ಆಗಿದ್ದಳು.‌ಇಂದ್ರಜಿತ್ ಸಣ್ಣ ವಯಸ್ಸಿನಲ್ಲಿಯೇ ಕಷ್ಟಕರವಾದ ಕಾರ್ಯವನ್ನು ಸುಲಭವಾಗಿ ಮಾಡಿದ್ದಾನೆ. ಈ ಮೂಲಕ ಎಲ್ಲಾರಿಗೂ ಮಾದರಿಯಾಗಿದ್ದಾನೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.