ಶಿವಮೊಗ್ಗ: ರಾಜ್ಯ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ರವರು ತಾವು ಓದಿದ ಶಿಕ್ಷಣ ಸಂಸ್ಥೆಗೆ ವೈಯಕ್ತಿಕ 50 ಲಕ್ಷ ರೂ ನೀಡುವುದಾಗಿ ಘೋಷಿಸಿದ್ದಾರೆ.
ಇಂದು ಶಿಕ್ಷಣ ಸಂಸ್ಥೆಯ ಪರವಾಗಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಶಿಕ್ಷಣ ನೀಡುವುದನ್ನೆ ಧೈಯ್ಯವಾಗಿಸಿಕೊಂಡಿದೆ. ನಮ್ಮ ಹಳೇಯ ವಿದ್ಯಾರ್ಥಿ ಈ ರೀತಿ ಉನ್ನತ ಸ್ಥಾನದಲ್ಲಿ ಇರುವುದನ್ನು ಗುರುತಿಸಿ ಸನ್ಮಾನ ಮಾಡುವ ಮೂಲಕ ಆತನಿಗೆ ಇನ್ನಷ್ಟು ಉತ್ತಮ ಕೆಲಸ ಮಾಡುವಂತಹ ಕಾರ್ಯವನ್ನು ಸಂಸ್ಥೆ ಮಾಡಿದೆ ಎಂದರು.
ನಮ್ಮ ಸಂಸ್ಥೆಯ ಬಸಪ್ಪ ಗೌಡರು ಬೆಂಗಳೂರಿಗೆ ಬಂದು ಆಹ್ವಾನ ಕೊಟ್ಟಾಗ ಸಂತೋಷದಿಂದ ಬಂದೆ. ಇಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಇದೇ ಡಿ ಸೆಕ್ಷನ್ ನಲ್ಲಿ ಕುಳಿತ ಪಾಠ ಕಲಿತಿದ್ದೇನೆ. ನಾನು ಬಹಳ ತುಂಟ , ನಿಮ್ಮಂತೆ ಒಳ್ಳೆಯ ವಿದ್ಯಾರ್ಥಿಯಾಗಿರಲ್ಲ ಎಂದಾಗ ಸಭೆಯು ನಗೆಗಡಲಲ್ಲಿ ತೇಲಿತು.
ಡಿವಿಎಸ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸಿದ ಪರಿಣಾಮ ನನ್ನಲ್ಲಿ ಬದಲಾವಣೆ ಕಂಡಿತು. ಸಂಸ್ಕಾರ ಸಂಸ್ಕೃತಿಗಳನ್ನು ಕಲಿಯುವುದು ಶಿಕ್ಷಣದಿಂದ ಹಾಗೂ ಮನೆಗಳ ವಾತಾವರಣಗಳಿಂದ. ನಮ್ಮ ಸಂಸ್ಥೆ 75 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಇದೆ. ಈ ಹಿನ್ನಲೆಯಲ್ಲಿ ನನ್ನ ಕಡೆಯಿಂದ ಸಂಸ್ಥೆಗೆ 50 ಲಕ್ಷ ನಿಡುತ್ತೇನೆ ಎಂದರು.