ಶಿವಮೊಗ್ಗ: ಆಟವಾಡುತ್ತಿದ್ದ ಬಾಲಕಿಯ ಮೇಲೆ ಮರದ ದಿಮ್ಮಿ ಉರುಳಿ ಬಿದ್ದು ಐದು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಸಾಗರದ ಹುಲಿದೇವರಬನದಲ್ಲಿ ನಡೆದಿದೆ. ವರ್ಣಿಣಿ ಸಾವನ್ನಪ್ಪಿದ ಬಾಲಕಿ.
ಹುಲಿದೇವರಬನದ ಬಳಿ ಇರುವ ಎಂಪಿ ಎಂ ಅರಣ್ಯ ಪ್ರದೇಶದಲ್ಲಿ ಅಕೇಷಿಯ ಮರಗಳನ್ನು ಕತ್ತರಿಸಿ ಜೋಡಿಸಿಡಲಾಗಿತ್ತು. ಮರದ ದಿಮ್ಮಿ ಪಕ್ಕದಲ್ಲಿ ಆಟ ಆಡುವಾಗ ಜೋಡಿಸಿದ್ದ ಮರದ ದಿಮ್ಮಿ ಬಾಲಕಿ ಮೇಲೆ ಉರುಳಿ ಬಿದ್ದಿದ್ದವು. ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೇ ಬಾಲಕಿಯನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ.
ಬಾಲಕಿಯ ತಂದೆ, ತಾಯಿ ಕೊಲಿಗಾಗಿ ಧಾರವಾಡ ಜಿಲ್ಲೆಯಿಂದ ಬಂದಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:
ಮರದ ದಿಮ್ಮಿ ಉರುಳಿ ಬಿದ್ದು ಬಾಲಕಿ ಸಾವನ್ನಪ್ಪಿದ ವಿಷಯ ತಿಳಿದರು ಸಹ ಅರಣ್ಯ ಇಲಾಖೆಯ ಯಾವ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಇದರಿಂದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ಇದನ್ನೂ ಓದಿ: ಎರಡೂ ಡೋಸ್ ಲಸಿಕೆ ಪಡೆಯದವರಿಗೆ ಪಾರ್ಕ್, ಟಾಕೀಸ್, ಮಾಲ್ಗಳಿಗೆ ಎಂಟ್ರಿ ಇಲ್ಲ..ಬೆಂಗಳೂರಿನಲ್ಲಿ ಟಫ್ ರೂಲ್ಸ್!)