ETV Bharat / state

ಶಿವಮೊಗ್ಗದಲ್ಲಿ ಇಂದು 43 ಜನ ಸೋಂಕಿತರು ಪತ್ತೆ: 92 ಜನ ಗುಣಮುಖ

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 92 ಜನ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

author img

By

Published : Oct 27, 2020, 10:30 PM IST

corona
ಕೊರೊನಾ

ತುಮಕೂರು/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 43 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ18,965 ಕ್ಕೆ ಏರಿಕೆಯಾಗಿದೆ. ಇಂದು 92 ಜನ ಗುಣಮುಖರಾಗಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 18,126 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 343ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 511 ಜನ ಚಿಕಿತ್ಸೆಯಲ್ಲಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 81 ಜನ, ಕೋವಿಡ್ ಕೇರ್ ಸೆಂಟರ್​ನಲ್ಲಿ 2, ಖಾಸಗಿ ಆಸ್ಪತ್ರೆಯಲ್ಲಿ 68, ಮನೆಯಲ್ಲಿ 352 ಜನ ಐಸೋಲೇಷನ್ ನಲ್ಲಿದ್ದಾರೆ. ಆರ್ಯುವೇದ ಆಸ್ಪತ್ರೆಯಲ್ಲಿ 8 ಜನರಿದ್ದಾರೆ.

ತಾಲೂಕುವಾರು ಸೋಂಕಿತರ ಸಂಖ್ಯೆ: ಶಿವಮೊಗ್ಗ-15, ಭದ್ರಾವತಿ-03, ಶಿಕಾರಿಪುರ-03, ತೀರ್ಥಹಳ್ಳಿ-01, ಸೊರಬ-05, ಸಾಗರ-05, ಹೊಸನಗರ- 01, ಬೇರೆ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಬೇರೆ ಜಿಲ್ಲೆಯಿಂದ ಯಾರು ಆಗಮಿಸಿಲ್ಲ. ಇಂದು ಜಿಲ್ಳೆಯಲ್ಲಿ 2,735 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2,366 ಜನರ ವರದಿ ಬಂದಿದೆ.

ಕಲ್ಪತರು ನಾಡಿನಲ್ಲಿ 103 ಮಂದಿಗೆ ಕೊರೊನಾ ಸೋಂಕು

ತುಮಕೂರು ಜಿಲ್ಲೆಯಲ್ಲಿ ಇಂದು 103 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 19,473ಕ್ಕೆ ಏರಿಕೆಯಾಗಿದೆ.

ತುಮಕೂರು ತಾಲ್ಲೂಕಿನಲ್ಲಿ 35 ಮಂದಿಗೆ ಸೋಂಕು ತಗುಲಿದ್ದರೆ ಶಿರಾ ತಾಲೂಕಿನಲ್ಲಿ 14 ಮಂದಿಗೆ, ತಿಪಟೂರು ತಾಲೂಕಿನಲ್ಲಿ 13, ಕುಣಿಗಲ್ ತಾಲೂಕಿನಲ್ಲಿ ಹತ್ತು ಮಂದಿಗೆ, ತುರುವೇಕೆರೆ ಮತ್ತು ಪಾವಗಡ ತಾಲೂಕಿನಲ್ಲಿ ತಲಾ 8 ಮಂದಿಗೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಆರು ಮಂದಿಗೆ, ಗುಬ್ಬಿ ತಾಲೂಕಿನಲ್ಲಿ 5, ಮಧುಗಿರಿ ತಾಲೂಕಿನಲ್ಲಿ ಮೂವರಿಗೆ, ಕೊರಟಗೆರೆ ತಾಲೂಕಿನಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ.

ಇಂದು 219 ಮಂದಿ ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇದುವರೆಗೂ 17,795 ಮಂದಿ ಗುಣಮುಖರಾಗಿದ್ದಾರೆ. ಇನ್ನು 1276 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದು, ಇದುವರೆಗೂ 251 ಮಂದಿ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.