ETV Bharat / state

ಶೋಕಿಗಾಗಿ ಸೈಲೆನ್ಸರ್ ಬಳಸುವವರಿಗೆ ಶಾಕ್... 41 ಬುಲೆಟ್ ಬೈಕ್​ ಪೊಲೀಸ್​ ವಶಕ್ಕೆ - ಶಿವಮೊಗ್ಗ ಸಂಚಾರಿ ಪೊಲೀಸರು

ಶೋಕಿಗಾಗಿ ಶಬ್ದ ಮಾಲಿನ್ಯ ಮಾಡುತ್ತಿದ್ದವರಿಗೆ ಪೊಲೀಸರಿಂದ ಶಾಕ್. 41 ಬೈಕ್​ಗಳನ್ನು ವಶಕ್ಕೆ ಪಡೆದ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರು.

ಶೋಕಿಗಾಗಿ ಕರ್ಕಶ ಶಬ್ದದ ಸೈಲೆನ್ಸರ್ ಬಳಕೆ: 41 ಬೈಕ್​ಗಳು ಪೊಲೀಸ್​ ವಶಕ್ಕೆ
author img

By

Published : Jul 30, 2019, 9:11 PM IST

ಶಿವಮೊಗ್ಗ: ಶೋಕಿಗಾಗಿ ಕರ್ಕಶ ಶಬ್ದವನ್ನುಂಟು ಮಾಡುವ ಸೈಲೆನ್ಸರ್ ಹಾಕಿಕೊಂಡು ಓಡಾಡುತ್ತಿದ್ದವರ 41 ಬೈಕ್​ಗಳನ್ನು ಪಶ್ಚಿಮ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಶ್ಚಿಮ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬುಲೆಟ್ ಬೈಕ್​ಗಳನ್ನು ತಡೆದು ಪರಿಶೀಲನೆ ನಡೆಸಿ, 41 ಬೈಕ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೋಕಿಗಾಗಿ ಹಾಗೂ ಎಲ್ಲರ ಗಮನ ಸೆಳೆಯಲು ಬುಲೆಟ್ ಬೈಕ್​ಗಳಿಗೆ ವಿವಿಧ ರೀತಿಯ ಶಬ್ದ ಹೊರಹಾಕುವ ಸೈಲೆನ್ಸರ್​ಗಳನ್ನು ಹಾಕಿಕೊಂಡು ಜನನಿಬಿಡ ರಸ್ತೆಯಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಅಲ್ಲದೇ ಶಾಲಾ- ಕಾಲೇಜುಗಳ ಬಳಿಯೂ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದರು.

ಕರ್ಕಶ ಶಬ್ದಗಳನ್ನು ಹೊರಹಾಕುವ ಸೈಲೆನ್ಸರ್​ಗಳನ್ನು ಬಿಚ್ಚಿ ಸಾಮಾನ್ಯ ಸೈಲೆನ್ಸರ್ ಹಾಕಿಕೊಂಡು ಹೋಗಲು ಬೈಕ್ ಮಾಲೀಕರಿಗೆ ಪೊಲೀಸರು ತಿಳಿಸಿ ದಂಡ ವಿಧಿಸಿದ್ದಾರೆ. ಅಲ್ಲದೇ ಬೈಕ್ ಮೆಕ್ಯಾನಿಕ್​ಗಳಿಗೂ ಸಹ ಈ ರೀತಿಯ ಸೈಲೆನ್ಸರ್​ಗಳನ್ನು ಅಳವಡಿಸದಂತೆ ಎಚ್ಚರಿಕೆ ನೀಡಿದ್ದಾರೆ.

Intro:ರಸ್ತೆಯಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ 41 ಬೈಕ್ ಗಳ ವಶ.

ಶಿವಮೊಗ್ಗ: ಶೋಕಿಗಾಗಿ ಬೈಕ್ ಗಳಿಗೆ ಕರ್ಕಶ ಶಬ್ದ ಉಂಟು ಮಾಡುವು ಸೈಲಸ್ಸರ್ ಹಾಕಿ ಕೊಂಡು ಓಡಾಡುತ್ತಿದ್ದ 41 ಬೈಕ್ ಗಳನ್ನು ಪಶ್ಚಿಮ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಇಂದು ಬೆಳಗ್ಗೆಯಿಂದ ಪಶ್ಛಿಮ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರಿಸುತ್ತಿದ್ದ ಬುಲೆಟ್ ಬೈಕ್ ಗಳನ್ನು ತಡೆದು ಪರಿಶೀಲನೆ ನಡೆಸಿದ ವೇಳೆ 41 ಬೈಕ್ ಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. Body:ಬುಲೆಟ್ ಬೈಕ್ ಗಳಿಗೆ ವಿವಿಧ ರೀತಿಯ ಶಬ್ದ ಹೊರ ಹಾಕುವ ಸೈಲಸ್ಸರ್ ಗಳನ್ನು ಹಾಕಿ ಕೊಂಡು ಜನ ನಿಬಿಡ ರಸ್ತೆಯಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೂಂದ್ರೆ ನೀಡುತ್ತಿದ್ದರು. ಅಲ್ಲದೆ ಶಾಲಾ- ಕಾಲೇಜುಗಳ ಬಳಿ ಜೋರಾಗಿ ಬೈಕ್ ಓಡಿಸುತ್ತಾ ಎಲ್ಲಾರ ಗಮನ ತಮ್ಮತ್ತ ಸೆಳೆಯಲು ಹಾಗೂ‌ ಶೋಕಿಗಾಗಿ ಬೈಕ್ ಓಡಿಸುತ್ತಾ ಜನರಲ್ಲಿ ಭಯಭೀತರನ್ನಾಗಿ ಮಾಡುವವರಿಗೆ ಸಂಚಾರಿ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ.Conclusion:ಕರ್ಕಶ ಶಬ್ದಗಳನ್ನು ಹೊರ ಹಾಕುವ ಸೈಲಸ್ಸರ್ ಗಳನ್ನು ಬಿಚ್ಚಿ ಸಾಮಾನ್ಯ ಸೈಲಸ್ಸರ್ ಹಾಕಿ ಕೊಂಡು ಹೋಗಲು ಬೈಕ್ ಮಾಲೀಕರಿಗೆ ತಿಳಿಸಿ,ದಂಡ ವಿಧಿಸಿದ್ದಾರೆ. ಹಾಗೂ ಬೈಕ್ ಮ್ಯಾಕನಿಕ್ ಗಳಿಗೂ ಸಹ ಈ ರೀತಿಯ ಸೈಲಸ್ಸರ್ ಗಳನ್ನು ಅಳವಡಿಸದಂತೆ ಎಚ್ಚರಿಕೆ ನೀಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.