ಶಿವಮೊಗ್ಗ: ಉಕ್ರೇನ್ನಿಂದ ಸುರಕ್ಷಿತವಾಗಿ ಶಿವಮೊಗ್ಗಕ್ಕೆ ಬಂದ ಇಬ್ಬರು ವಿದ್ಯಾರ್ಥಿನಿಯರ ಹೆಸರಿನಲ್ಲಿ ಇಲ್ಲಿನ ರಾಷ್ಟ್ರಭಕ್ತ ಬಳಗವು ಪಿಎಂ ಕೇರ್ಸ್ ಫಂಡ್ಗೆ ಇಂದು 20 ಸಾವಿರ ರೂ. ದೇಣಿಗೆ ನೀಡಿದೆ.
ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗದಿಂದ ಉಕ್ರೇನ್ಗೆ ಅನುಮಿತ ಹಾಗೂ ಜಯಶೀಲನ್ ಎಂಬುವರು ತೆರಳಿದ್ದರು. ಇವರಲ್ಲಿ ಅನುಮಿತ ಅವರು ಯುದ್ಧ ಪ್ರಾರಂಭವಾಗುವುದಕ್ಕೂ ಮುನ್ನವೇ ಉಕ್ರೇನ್ ತೊರೆದಿದ್ದರು. ಆದರೆ, ವಿದ್ಯಾರ್ಥಿನಿ ಜಯಶೀಲನ್ ಮಾತ್ರ ಅಲ್ಲಿನ ಯುದ್ಧ ಸನ್ನಿವೇಶಗಳನ್ನು ಕಣ್ಣಾರೆ ಕಂಡಿದ್ದಾರೆ.
ಸುರಕ್ಷಿತವಾಗಿ ಕರೆ ತರಲಾಯಿತು.. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೆಯೇ ಉಕ್ರೇನ್ ದೇಶ ತತ್ತರಿಸಿದೆ. ಇದರಿಂದ ಭಾರತೀಯರನ್ನು ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಹೆಸರಿನಲ್ಲಿ ಎಲ್ಲರನ್ನೂ ವಿಮಾನಗಳ ಮೂಲಕ ಸುರಕ್ಷಿತವಾಗಿ ಕರೆ ತರಲಾಯಿತು. ಪ್ರಧಾನಮಂತ್ರಿ ಅವರು ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ.
ಇದರಿಂದ ಅಲ್ಲಿ ಕೆಲಸಕ್ಕೆ ಹಾಗೂ ವಿದ್ಯಾಭ್ಯಾಸಕ್ಕೆ ಹೋಗಿದ್ದವರು ಯಾವುದೇ ತೊಂದರೆ ಗೊಳಗಾಗದೆ ವಾಪಸ್ ಆಗಿದ್ದಾರೆ. ಹೀಗಾಗಿ ಶಿವಮೊಗ್ಗದ ರಾಷ್ಟ್ರಭಕ್ತರ ಬಳಗವು ಪಿಎಂ ಕೇರ್ಸ್ ಫಂಡ್ಗೆ ಇಬ್ಬರು ವಿದ್ಯಾರ್ಥಿನಿಯರ ಪರವಾಗಿ ತಲಾ 10 ಸಾವಿರದಂತೆ 20 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಲಾಗುತ್ತಿದೆ ಎನ್ನುತ್ತಾರೆ ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ. ಈ ಕಾಂತೇಶ್.
ಕ್ರಮ ತೆಗೆದುಕೊಳ್ಳಬೇಕು.. ನಾವು ಸುರಕ್ಷಿತವಾಗಿ ಬಂದಿದ್ದೇವೆ. ಇದು ನಮಗೆ ಸಂತೋಷವನ್ನುಂಟು ಮಾಡಿದೆ. ಆದರೆ, ನಮ್ಮ ಮುಂದಿನ ಭವಿಷ್ಯವೇನು? ಎಂಬುದು ನಮ್ಮನ್ನು ಕಾಡುತ್ತಿದೆ. ಸರ್ಕಾರ ನಮ್ಮ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಅನುಮಿತ ಹಾಗೂ ಜಯಶೀಲನ್.
ಓದಿ: ಪಾವಗಡ ಬಸ್ ದುರಂತ.. ಈ ಮಾರ್ಗದಲ್ಲಿ ಖಾಸಗಿ ಬಸ್ ಪರವಾನಿಗೆ ರದ್ದು, KSRTC ಬಸ್ ಸಂಚಾರ : ಸಚಿವ ಶ್ರೀರಾಮುಲು