ಶಿವಮೊಗ್ಗ: ಸಿಗಂದೂರು ದೇವಾಲಯದ ಉಸ್ತುವಾರಿಗೆ ರಚನೆಯಾಗಿರುವ ಮೇಲ್ವಿಚಾರಣಾ ಹಾಗೂ ಸಲಹ ಸಮಿತಿಯನ್ನು 15 ದಿನಗಳ ಒಳಗೆ ರದ್ದು ಮಾಡದೆ ಹೋದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಸಿಗಂದೂರು ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ನಗರದ ಆರ್ಯಈಡಿಗ ಸಮುದಾಯ ಭವನದಲ್ಲಿ ಸರ್ಕಾರ ರಚನೆ ಮಾಡಿರುವ ಮೇಲ್ವಿಚಾರಣಾ ಸಮಿತಿ ಹಾಗೂ ಸಲಹಾ ಸಮಿತಿಯನ್ನು ರದ್ದು ಮಾಡಬೇಕೆಂದು ಹೋರಾಟ ನಡೆಸಲು ಸರ್ವ ಸಮಾಜದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಸಿಗಂದೂರು ದೇವಾಲಯವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದು ಕೊಳ್ಳಲು ನಡೆಸುತ್ತಿರುವ ಹುನ್ನಾರವಿದು. ಇದರ ವಿರುದ್ದ ಹೋರಾಟ ನಡೆಸಲು ಎಲ್ಲಾ ಸಮಾಜದ ಮುಖಂಡರ ಸಭೆ ನಡೆಸಲಾಗಿದೆ. ಇದಕ್ಕಾಗಿ ಒಂದು ಹೋರಾಟ ಸಮಿತಿಯನ್ನು ರಚನೆ ಮಾಡಲಾಗುವುದು. ಇದರ ಗೌರವಾಧ್ಯಕ್ಷರಾಗಿ ಕಾಗೋಡು ತಿಮ್ಮಪ್ಪನವರು ಇರಲಿದ್ದಾರೆ. ಅಧ್ಯಕ್ಷನಾಗಿ ನಾನು ಇರಲಿದ್ದೇನೆ ಎಂದು ತಿಳಿಸದರು.
ನಾಳೆ ನಾಡಿದ್ದು ಸಮಿತಿಯ ಪಧಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಮುಂದಿನ 15 ದಿನಗಳ ಒಳಗೆ ಸರ್ಕಾರದ ಸಮಿತಿಯನ್ನು ರದ್ದು ಮಾಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.