ETV Bharat / state

ನಿಜಾಮುದ್ದಿನ್​ಗೆ ಶಿವಮೊಗ್ಗದಿಂದ 10 ಜನ ಭೇಟಿ: ಜಿಲ್ಲಾಧಿಕಾರಿ ಸ್ಪಷ್ಟನೆ - corona news '

ಶಿವಮೊಗ್ಗ ಜಿಲ್ಲೆಯಿಂದ ಒಟ್ಟು‌ 12 ಜನ ಪ್ರಯಾಣ ಮಾಡಿದ್ದರು. ಅದರಲ್ಲಿ 10 ಜನ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಇನ್ನಿಬ್ಬರು ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಯವರಾಗಿದ್ದಾರೆ. ಇವರ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
author img

By

Published : Apr 3, 2020, 1:14 PM IST

ಶಿವಮೊಗ್ಗ: ದೆಹಲಿಯ ನಿಜಾಮುದ್ದೀನ್​ಗೆ ಶಿವಮೊಗ್ಗ ಜಿಲ್ಲೆಯಿಂದ‌ 10 ಜನ ಹೋಗಿ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆಯಿಂದ ಒಟ್ಟು‌ 12 ಜನ ಪ್ರಯಾಣ ಮಾಡಿದ್ದರು. ಅದರಲ್ಲಿ 10 ಜನ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಇನ್ನಿಬ್ಬರು ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಯವರಾಗಿದ್ದಾರೆ. ಇವರುಗಳ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಅದರಂತೆ ಜಿಲ್ಲಾಡಳಿತ ಎಲ್ಲರನ್ನೂ ಕ್ವಾರಂಟೈನ್ ಮಾಡಿದೆ. ಇವರುಗಳ ಪ್ರಾಥಮಿಕ ಪರೀಕ್ಷೆ ಮಾಡಿದ್ದು, ಎಲ್ಲರಲ್ಲೂ ಎ ಲಕ್ಷಣಗಳು ಕಂಡು ಬಂದಿವೆ. ಇದರಿಂದ ಯಾರೂ ಅತಂಕ ಪಡಬೇಕಿಲ್ಲ ಎಂದರು.

ಅವರ ಕುಟುಂಬಗಳನ್ನು ಸಹ ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, ಅದೇ ರೀತಿ ಇವರ ಸಂಪರ್ಕದಲ್ಲಿದ್ದವರ ಮಾಹಿತಿಯನ್ನೂ ಸಹ ಸಂಗ್ರಹ ಮಾಡಲಾಗುತ್ತಿದೆ. ಸದ್ಯ ಇವರಲ್ಲಿ ಎ ಲಕ್ಷಣಗಳು ಕಂಡು ಬಂದ ಕಾರಣ ಇವರ ಸಂಪರ್ಕದಲ್ಲಿ ಇರುವವರ ಹುಡುಕಾಟ ಕಡಿಮೆಯಾಗುತ್ತದೆ. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಆಗಿರುವುದನ್ನು ನೋಡಿದ್ರೆ, ಇದನ್ನು ಹಗುರವಾಗಿ ಪರಿಗಣಿಸದೇ, ಜಿಲ್ಲಾಡಳಿತ ಕಠಿಣ ಕ್ರಮ ತೆಗದುಕೊಂಡಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.