ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಕೇಂದ್ರವಾದ ಸಹ್ಯಾದ್ರಿ ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಗೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು 1 ಕೋಟಿ ರೂ. ಘೋಷಿಸಿದ್ದಾರೆ.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತರಣಾ ಕಟ್ಟಡ, ಪ್ರವೇಶ ದ್ವಾರ ಹಾಗೂ ಪುರುಷರ ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳ ಉದ್ಘಾಟನೆಯನ್ನು ಸಿಎಂ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಹ್ಯಾದ್ರಿ ಕಾಲೇಜಿಗೆ ಒಂದು ಇತಿಹಾಸವಿದೆ. ಈ ಕಾಲೇಜಿನಲ್ಲಿ ಸಾಹಿತಿಗಳಾದ ಯು ಆರ್ ಅನಂತಮೂರ್ತಿ, ಪಿ. ಲಂಕೇಶ್‌ರಂತಹ ದಿಗ್ಗಜರು ಓದಿದ್ದಾರೆ. ಇಂತಹ ಕಾಲೇಜಿನ ವಿಸ್ತರಣಾ ಕಟ್ಟಡ ಉದ್ಘಾಟನೆ ಮಾಡಿದ್ದೇನೆ ಎಂದರು.
ಕಾರವಾರ: ಮೀನಿಗೆ ಬೀಡಿ ಸೇದಿಸಿ ವಿಕೃತಿ ಮೆರೆದ ಬೋಟ್ ಕಾರ್ಮಿಕರು!
ನಂತರ ಕಾಲೇಜಿನವರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದ ಸಿಎಂ, ತಕ್ಷಣಕ್ಕೆ 1 ಕೋಟಿ ರೂ. ನೀಡಲಾಗುವುದು, ಮುಂದಿನ ಬಜೆಟ್ನಲ್ಲಿ ಉಳಿದ ಹಣ ನೀಡಲಾಗುವುದು ಎಂದರು.