ETV Bharat / state

ಕಡಿಮೆ ಅಂಕದಿಂದ ಸಿಗದ ಎಲ್​ಎಲ್​ಬಿ ಸೀಟ್: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ - ಆತ್ಮಹತ್ಯೆಗೂ ಮುನ್ನ ಮೊಬೈಲ್​ನಲ್ಲಿ ಸೆಲ್ಫಿ ವಿಡಿಯೋ

ರಾಮನಗರದ ನೆಲಮಂಗಲ - ಕುಣಿಗಲ್ ಹೆದ್ದಾರಿಯ ಸಮೀಪದ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಮೊಬೈಲ್​ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾನೆ.

youth-make-selfie-video-before-committing-suicide-in-ramnagar
ಕಡಿಮೆ ಅಂಕದಿಂದ ಸಿಗದ ಎಲ್​ಎಲ್​ಬಿ ಸೀಟ್: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ
author img

By

Published : Aug 20, 2022, 4:13 PM IST

ರಾಮನಗರ: ಕಡಿಮೆ ಅಂಕದಿಂದ ಎಲ್​ಎಲ್​ಬಿ ಸೀಟ್ ಸಿಗದ ಹಿನ್ನೆಲೆಯಲ್ಲಿ ಮನನೊಂದು ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ರಾಮನಗರದ ಕುದೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಕಿಗೆ ಬಂದಿದೆ.

ಗೋಪಾಲ್​ (22) ಎಂಬ ಯುವಕನೇ ಆತ್ಮಹತ್ಯೆಗೆ ಶರಣಾಗಿದ್ದು, ಈತ ಹಾಸನ ಜಿಲ್ಲೆಯ ಕುಂಬೇನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಇಲ್ಲಿನ ನೆಲಮಂಗಲ - ಕುಣಿಗಲ್ ಹೆದ್ದಾರಿಯ ಪಕ್ಕದಲ್ಲೇ ಪಲ್ಸರ್​ ಬೈಕ್​ ನಿಲ್ಲಿಸಿ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿರುವ ಸ್ಥಳೀಯರು ಮೃತನ ಮೊಬೈಲ್​ನಿಂದ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

youth-make-selfie-video-before-committing-suicide-in-ramnagar
ಕಡಿಮೆ ಅಂಕದಿಂದ ಸಿಗದ ಎಲ್​ಎಲ್​ಬಿ ಸೀಟ್: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ

ಮೃತ ಗೋಪಾಲ್​ ಪಿಯುಸಿ ಹಾಗೂ ಐಟಿಐ ಮುಗಿಸಿದ್ದ ಮತ್ತು ವಕೀಲನಾಗುವ ಕನಸು ಕಟ್ಟಿಕೊಂಡಿದ್ದ. ಆದರೆ, ಶೇಕಡಾವಾರು ಅಂಕ ಕಡಿಮೆ ಇದ್ದುದರಿಂದ ಎಲ್​ಎಲ್​ಬಿ ಸೀಟ್​ ಸಿಕ್ಕಿರಲಿಲ್ಲ. ಹೀಗಾಗಿಯೇ ಈತ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗ್ತಿದೆ.

ಆತ್ಮಹತ್ಯೆಗೂ ಮುನ್ನ ಮೊಬೈಲ್​ನಲ್ಲಿ ಸೆಲ್ಫಿ ವಿಡಿಯೋ ಹೇಳಿಕೆ ದಾಖಲಿಸಿರುವ ಗೋಪಾಲ್,​ ತನ್ನ ಜೀವನದಲ್ಲಿ ಉಂಟಾದ ಬೇಸರದ ಬಗ್ಗೆ ಹೇಳಿಕೊಂಡಿದ್ದಾನೆ. 'ನನ್ನ ಈ ಪರಿಸ್ಥಿತಿಗೆ ನಾನೇ ಕಾರಣ. ಇದಕ್ಕಾಗಿ ಯಾರೂ ಕಣ್ಣೀರು ಹಾಕುವ ಅವಶ್ಯಕತೆಯೂ ಇಲ್ಲ. ಅಲ್ಲದೇ, ಯಾರನ್ನೂ ದೂಷಿಸಬೇಡಿ. ಜೊತೆಗೆ ನಾನು ಪತ್ರವೊಂದನ್ನು ಕೂಡ ಬರೆದಿದ್ದೆ. ಆದರೆ, ಅದು ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಹೀಗಾಗಿಯೇ ವಿಡಿಯೋ ಚಿತ್ರೀಕರಣ ಮಾಡಿದ್ದೇನೆ' ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ತನ್ನ ಅಣ್ಣ ಹಾಗೂ ತನ್ನ ಸ್ನೇಹಿತರಿಗೆ ಕಳಿಸಿದ್ದಾನೆ ಎನ್ನಲಾಗ್ತಿದೆ. ಸದ್ಯ ಈ ಬಗ್ಗೆ ಕುದೂರು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕೋಲಾರ: ಬೃಹತ್​ ಮರದ ಕೊಂಬೆ ಬಿದ್ದು ಇಬ್ಬರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.