ETV Bharat / state

ರಾಜಕೀಯ ಮುಖಂಡನ ಬರ್ತ್​ ಡೇ ಪಾರ್ಟಿಯಲ್ಲಿ ಯುವತಿಯರ ಡ್ಯಾನ್ಸ್ - ಈಟಿವಿ ಭಾರತ ಕನ್ನಡ

ಹುಟ್ಟುಹಬ್ಬದ ಆಚರಣೆ ವೇಳೆ ಯುವತಿಯರನ್ನು ಕರೆಯಿಸಿ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುವತಿಯರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ಈಗ ವೈರಲ್​​ ಆಗಿದ್ದು ಸದ್ದು ಮಾಡುತ್ತಿವೆ.

young-women-dance-in-birthday-party
ರಾಜಕೀಯ ಮುಖಂಡನ ಬರ್ತ್​ ಡೇ ಪಾರ್ಟಿಯಲ್ಲಿ ಯುವತಿಯರ ಡ್ಯಾನ್ಸ್
author img

By

Published : Nov 26, 2022, 9:21 PM IST

Updated : Nov 26, 2022, 9:52 PM IST

ರಾಮನಗರ: ನಗರದಲ್ಲಿ ರಾಜಕೀಯ ಮುಖಂಡರೊಬ್ಬರು ಹುಟ್ಟುಹಬ್ಬದ ಆಚರಣೆ ವೇಳೆ ಯುವತಿಯರನ್ನು ಕರೆಯಿಸಿ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿವೆ.

ಬರ್ತ್​ ಡೇ ಪಾರ್ಟಿಗೆ ಸಾಕಷ್ಟು ಮಂದಿ ಸೇರಿದ್ದು, ಯುವತಿಯರು ನೃತ್ಯ ಮಾಡಿದ್ದಾರೆ. ಇದೇ ವೇಳೆ ಕೆಲವರು ಡ್ಯಾನ್ಸ್ ಮಾಡುತ್ತಿದ್ದ ಯುವತಿಯರ ಮೇಲೆ ಹಣದ ನೋಟು ಎಸೆದು ಕೇಕೇ ಹಾಕಿದ್ದಾರೆ ಎನ್ನಲಾಗಿದೆ.

ಬರ್ತ್​ ಡೇ ಪಾರ್ಟಿಯಲ್ಲಿ ಯುವತಿಯರ ಡ್ಯಾನ್ಸ್

ರಾಜಕೀಯ ನಾಯಕರು ಜನರ ಸಮಸ್ಯೆಗೆ ಸ್ಪಂದಿಸುವ ಬದಲು ಇಂತಹ ಪಾರ್ಟಿ ಮಾಡಿ ಮೋಜು ಮಾಡುತ್ತಿರುವುದು ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗುತ್ತಿದೆ‌.

ಇದನ್ನೂ ಓದಿ: Video: ಮೂರಡಿಯ ವಾರ್ಡ್​ ಸದಸ್ಯನಿಂದ ಆರ್ಕೆಸ್ಟ್ರಾ ಯುವತಿ ಜೊತೆ ಡ್ಯಾನ್ಸ್

Last Updated : Nov 26, 2022, 9:52 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.