ರಾಮನಗರ : ಬೆಂಗಳೂರಿನಿಂದ ಆಗಮಿಸಿದ ಕೆಲ ಯುವಕರು ಜಿಲ್ಲೆಯ ಕನಕಪುರ ತಾಲೂಕಿನ ರಸ್ತೆ ಪಕ್ಕದ ಜಮೀನುಗಳಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದು, ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಕೊರೊನಾ ಕಠಿಣ ಲಾಕ್ಡೌನ್ ನಡುವೆಯೂ ಬೆಂಗಳೂರಿನಿಂದ ಆಗಮಿಸಿದ ಕೆಲ ಯುವಕರು, ಕನಕಪುರ ತಾಲೂಕಿನ ರಸ್ತೆ ಪಕ್ಕದ ಜಮೀನುಗಳಲ್ಲಿ ಬರ್ತ್ ಡೇ ಪಾರ್ಟಿ, ಗೃಹ ಪ್ರವೇಶ ಇತ್ಯಾದಿಗಳ ಹೆಸರಿನಲ್ಲಿ ಗುಂಪುಗೂಡಿ ಪಾರ್ಟಿ ಮಾಡುತ್ತಿದ್ದಾರೆ.
ಪಾರ್ಟಿ ಬಳಿಕ ಮದ್ಯದ ಬಾಟಲಿಗಳನ್ನು ಜಮೀನನಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇದರಿಂದಾಗಿ ಜಮೀನಿನ ಮಾಲೀಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಈಗಾಗಲೇ ಕನಕಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳು ಸಿಕ್ಕರೆ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಸಿಎಂಗೂ ತಟ್ಟಿದ ಅರೆಸ್ಟ್ ಟೂ ಮಿ ಅಭಿಯಾನ : ಮುಖ್ಯಮಂತ್ರಿ ನಿವಾಸ ಬಳಿ ರಾತ್ರೋರಾತ್ರಿ ಪೋಸ್ಟರ್ ಅಂಟಿಸಿ ಆಕ್ರೋಶ