ETV Bharat / state

ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ಗೆ ಯದುವೀರ್ ದಂಪತಿ ಭೇಟಿ, ಪ್ರೋತ್ಸಾಹ - Mysore Latest News Update

ರಾಮನಗರ ಪಟ್ಟಣದ ಸಾತನೂರು ಹಲಗೂರು ರಸ್ತೆಯಲ್ಲಿರುವ ಸಣ್ಣಘಟ್ಟ ಬಳಿ ಕ್ರಾಫ್ಟ್ ಪಾರ್ಕ್ ನ ಸಮುಚ್ಛಯದಲ್ಲಿರುವ ಬೊಂಬೆ ತಯಾರಿಕ ಘಟಕಕ್ಕೆ ಭೇಟಿ ನೀಡಿದ ಯದುವೀರ್​ ದಂಪತಿ ಇಲ್ಲಿನ ಕರಕುಶಲಕರ್ಮಿಗಳು ಹಾಗೂ ಉದ್ಯಮಿಗಳ ಜೊತೆ ಬೊಂಬೆ ತಯಾರಿಕೆ ಬಗ್ಗೆ ಚರ್ಚೆ ನಡೆಸಿದರು.

Yaduveer couple visits to Craft Park in Channapatnam
ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ಗೆ ಯದುವೀರ್ ದಂಪತಿ ಭೇಟಿ, ಪ್ರೋತ್ಸಾಹ
author img

By

Published : Jan 23, 2021, 10:56 AM IST

ರಾಮನಗರ: ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ಗೆ ಮೈಸೂರು ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಯುವರಾಣಿ ತ್ರಿಷಿಕಾ ಒಡೆಯರ್ ದಂಪತಿ ಭೇಟಿ ನೀಡಿ ಬೊಂಬೆ ಉದ್ಯಮಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ಗೆ ಯದುವೀರ್ ದಂಪತಿ ಭೇಟಿ, ಪ್ರೋತ್ಸಾಹ

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ದೇಶೀ ಆಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ. ಅದರಲ್ಲೂ ಚನ್ನಪಟ್ಟಣ ಬೊಂಬೆ ಆಟಿಕೆಗಳ ಬಗ್ಗೆ ಮಾತನಾಡಿದ ಮೇಲೆ ಇಲ್ಲಿನ ಬೊಂಬೆ ಉದ್ಯಮಕ್ಕೆ ಭಾರೀ ಬೇಡಿಕೆ ಶುರುವಾಗಿತ್ತು. ಈ ನಡುವೆ ಚನ್ನಪಟ್ಟಣ ನಗರದ ಮಹದೇಶ್ವರ ದೇವಾಲಯದ ಬಳಿಯಿರುವ ಕ್ರಾಫ್ಟ್ ಪಾರ್ಕ್ ಗೆ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಒಡೆಯರ್ ದಂಪತಿ ಭೇಟಿ ನೀಡಿ ಬೊಂಬೆ ಉದ್ಯಮಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಪಟ್ಟಣದ ಸಾತನೂರು ಹಲಗೂರು ರಸ್ತೆಯಲ್ಲಿರುವ ಸಣ್ಣಘಟ್ಟ ಬಳಿ ಕ್ರಾಫ್ಟ್ ಪಾರ್ಕ್ ನ ಸಮುಚ್ಚಯದಲ್ಲಿರುವ ಬೊಂಬೆ ತಯಾರಿಕ ಘಟಕಕ್ಕೆ ಭೇಟಿ ನೀಡಿದ ದಂಪತಿ ಇಲ್ಲಿನ ಕರಕುಶಲಕರ್ಮಿಗಳು ಹಾಗೂ ಉದ್ಯಮಿಗಳ ಜೊತೆ ಬೊಂಬೆ ತಯಾರಿಕೆ ಬಗ್ಗೆ ಚರ್ಚೆ ನಡೆಸಿದರು.

ಚನ್ನಪಟ್ಟಣ ಆಟಿಕೆಗೆ ಬಣ್ಣ ಬಳಿದ ಯುವರಾಣಿ:

ಈ ಘಟಕದಲ್ಲಿ ಕುಶಲಕರ್ಮಿಗಳು ಕೆತ್ತನೆಗೆ ಬಳಸುವ ಯಂತ್ರದ ಮೇಲೆ ಕುಳಿತ ಯುವರಾಣಿ ತ್ರಿಷಿಕಾ ತಾವೇ ಸ್ವತಃ ಬೊಂಬೆ ತಯಾರಿಸುವ ಮೂಲಕ ಕರಕುಶಲತೆಯ ಅನುಭವ ಪಡೆದುಕೊಂಡರು. ನಂತರ ಅಲ್ಲಿದ್ದ ಬೊಂಬೆಗಳಿಗೆ ನೈಸರ್ಗಿಕವಾದ ಅರಗಿನಿಂದ ತಯಾರಾದ ಬಣ್ಣವನ್ನು ತಾವೇ ಹಚ್ಚಿದರು.

ಭೇಟಿ ವೇಳೆ ಯುವರಾಜ ದಂಪತಿ ಬೊಂಬೆ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳು, ಬಣ್ಣಲೇಪನ ಹಾಗೂ ಇನ್ನಿತರ ಮಾಹಿತಿಯನ್ನು ಪಡೆದುಕೊಂಡರು. ಆನಂತರ ಮಾತನಾಡಿ, ಸಾಂಪ್ರದಾಯಿಕ ಕಲೆಗೆ ಹೆಚ್ಚು ಪ್ರೋತ್ಸಾಹ ದೊರಕಬೇಕಿದೆ. ರಾಸಾಯನಿಕ ಬಣ್ಣ ಮಿಶ್ರಿತ ಆಟಿಕೆಗಳಿಗಿಂತ ಚನ್ನಪಟ್ಟಣ ಆಟಿಕೆಗಳು ಹೆಚ್ಚು ಸುರಕ್ಷಿತವಾಗಿವೆ. ಆಟಿಕೆಗಳು‌ ಹೇಗೆ ತಯಾರಾಗುತ್ತವೆಂಬುದನ್ನು ನೋಡಲು ಖುದ್ದು ನಾವೇ ಆಗಮಿಸಿದ್ದೇವೆ. ದೇಶಿ ಕಲೆಯನ್ನು ಉಳಿಸಿ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.