ETV Bharat / state

ವಾಟರ್​ ಟ್ಯಾಂಕ್​ನಲ್ಲಿ ಮಹಿಳೆ ಶವ ಪತ್ತೆ: ಹೊಸ ಪೈಪ್​​ಲೈನ್ ಅಳವಡಿಸಲು ಹೆಚ್​​ಡಿಕೆ ಸೂಚನೆ - Ramnagar

ಪೈಪ್​​ಲೈನ್​​ನಲ್ಲಿ ಪುನಃ ಶವದ ಕುರುಹುಗಳು ಪತ್ತೆಯಾದ ಕೂಡಲೇ ಸಿಂಧಗಿ ವಿಧಾನಸಭೆ ಕ್ಷೇತ್ರದ ಪ್ರಚಾರದಲ್ಲಿದ್ದ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ ಕುಮಾರಸ್ವಾಮಿ ಅಲ್ಲಿಂದಲೇ ಅಧಿಕಾರಿಗಳ ಜತೆ ಮಾತನಾಡಿದ್ದರು. ಇಡೀ ಪೈಪ್​​ಲೈನ್​​ ಸಂಪೂರ್ಣವಾಗಿ ಪರಿಶೀಲಿಸುವಂತೆ ಅವರು ಸೂಚಿಸಿದ್ದರು.

woman organs found case
ಮಹಿಳೆ ಮೃತದೇಹ ಪತ್ತೆ: ಹೊಸ ಪೈಪ್​​ ಲೈನ್ ಅಳವಡಿಸಲು ಹೆಚ್​​ಡಿಕೆ ಸೂಚನೆ
author img

By

Published : Oct 28, 2021, 8:52 PM IST

ರಾಮನಗರ: ಚನ್ನಪಟ್ಟಣದ ಓವರ್ ಹೆಡ್ ನೀರಿನ ಟ್ಯಾಂಕ್​​ನಲ್ಲಿ ಮಹಿಳೆಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಪೈಪ್​​ಲೈನ್ ಬದಲಾವಣೆ ಮಾಡಿ ಹೊಸ ಪೈಪ್​​ ಲೈನ್ ಅಳವಡಿಸಲು ಕ್ಷೇತ್ರದ ಶಾಸಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅಪರಿಚಿತ ಮೃತ ದೇಹದ ಅಂಗಗಳು ಪತ್ತೆ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಒಂದು ವಾರದಲ್ಲಿ ಹೊಸ ಪೈಪ್​​ಲೈನ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಿನ್ನೆ (ಬುಧವಾರ) ಪೈಪ್​​ಲೈನ್​​ನಲ್ಲಿ ಪುನಃ ಶವದ ಕುರುಹುಗಳು ಪತ್ತೆಯಾದ ಕೂಡಲೇ ಸಿಂಧಗಿ ವಿಧಾನಸಭೆ ಕ್ಷೇತ್ರದ ಪ್ರಚಾರದಲ್ಲಿದ್ದ ಮಾಜಿ ಮುಖ್ಯಮಂತ್ರಿಗಳು ಅಲ್ಲಿಂದಲೇ ಅಧಿಕಾರಿಗಳ ಜತೆ ಮಾತನಾಡಿದ್ದರು. ಇಡೀ ಪೈಪ್​​ಲೈನ್​​ ಸಂಪೂರ್ಣವಾಗಿ ಪರಿಶೀಲಿಸುವಂತೆ ಅವರು ಸೂಚಿಸಿದ್ದರು.

ಈಗಾಗಲೇ ಮಾಜಿ ಮುಖ್ಯಮಂತ್ರಿಗಳ ಆದೇಶದಂತೆ ಟ್ಯಾಂಕ್​​ನ ನೀರು ಸರಬರಾಜಾಗುವ ವಾರ್ಡ್​ಗಳಿಗೆ ಈಗಾಗಲೇ ಟ್ಯಾಂಕರುಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಮನಗರ : ವಾಟರ್​ ಟ್ಯಾಂಕ್​ನಲ್ಲಿ ಮಹಿಳೆ ಮೃತದೇಹ ಪತ್ತೆ.. ನೀರು ಪೂರೈಕೆ ಸ್ಥಗಿತಗೊಳಿಸಿದ ನಗರಸಭೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.