ರಾಮನಗರ : ಕಾಡು ಪ್ರಾಣಿಗಳನ್ನು ಬೇಟೆಯಾಡಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಅಪ್ಪ-ಮಗನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಲು ಮುಂದಾದಾಗ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.
ಕನಕಪುರದ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಸಂಗಮ ವನ್ಯಜೀವಿ ಅರಣ್ಯ ಪ್ರದೇಶದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಚರ್ಮ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಗಳ ಬಗ್ಗೆ ಸಾಕಷ್ಟು ಅನುಮಾನ ಇತ್ತು . ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಬಿಸಿದ್ದರು.
ಈ ವೇಳೆ ಕೆರೆಮ್ಯಾಗಲದೊಡ್ಡಿ ನಿವಾಸಿಗಳು ಎನ್ನಲಾದ ಕರಿಯಪ್ಪ(55) ಸ್ವಾಮಿ (30) ಪರಾರಿಯಾಗಿದ್ದಾರೆ . ಇವರ ಬಳಿ13 ಕೆಜಿ ಮಾಂಸ ಹಾಗೂ ಜಿಂಕೆ ಚರ್ಮ ಮತ್ತು ಒಂದು ಬೈಕ್ ಹೊಸ ಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಬಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.