ETV Bharat / state

6.9 ಸೆ.ಮೀ​ ಸಿಗರೇಟ್‌ನಲ್ಲಿ 260 ಬಾರಿ 'ಸ್ಮೋಕಿಂಗ್ ಈಸ್ ಇಂಜುರಿಯಸ್ ಟು ಹೆಲ್ತ್' ಬರೆದ ಯುವಕ! - ಈಟಿವಿ ಭಾರತ ಕನ್ನಡ

ದರ್ಶನ್​ ಗೌಡ ಎಂಬವರು ಸಿಗರೇಟ್​ ಮೇಲೆ ಬರೆದ ಎಚ್ಚರಿಕೆ ಸಂದೇಶ ದಾಖಲೆ ಬರೆದಿದೆ.

record
ದರ್ಶನ್​ ಗೌಡ
author img

By

Published : Jan 13, 2023, 10:28 AM IST

Updated : Jan 13, 2023, 11:16 AM IST

ಆರೋಗ್ಯಕ್ಕೆ ಸಿಗರೇಟ್‌ ಹಾನಿ ಕುರಿತು ವಿಶಿಷ್ಟ ಜನಜಾಗೃತಿ

ರಾಮನಗರ: ಒಂದು ಚಿಕ್ಕ ಸಿಗರೇಟ್​ ಮೇಲೆ ಎಚ್ಚರಿಕೆಯ ಸಂದೇಶ ಬರೆದು ಯುವಕನೊಬ್ಬ ಇತರರಿಗೆ ಇದೀಗ ಮಾದರಿಯಾಗಿದ್ದಾನೆ. ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಗ್ರಾಮದ ಎಂ.ಎಸ್.ದರ್ಶನ್ ಗೌಡ ಸಿಗರೇಟ್ ಮೇಲೆ 'ಸ್ಮೋಕಿಂಗ್ ಈಸ್ ಇಂಜುರಿಯಸ್ ಟು ಹೆಲ್ತ್' ಎಂಬ ಎಚ್ಚರಿಕೆ ಬರೆದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗ್ರಾಂಡ್ ಮಾಸ್ಟರ್ ಬಿರುದು ಗಿಟ್ಟಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಧೂಮಪಾನದ ವ್ಯಾಮೋಹಕ್ಕೆ ಒಳಗಾಗುತ್ತಿದ್ದು ಜಾಗೃತಿ ಮೂಡಿಸಲು ದರ್ಶನ್ ಗೌಡ 6.9 ಸೆಂಟಿ ಮೀಟರ್​ನ ಸಿಗರೇಟ್‌ನಲ್ಲಿ 260 ಬಾರಿ 'ಸ್ಮೋಕಿಂಗ್ ಈಸ್ ಇಂಜುರಿಯಸ್ ಟು ಹೆಲ್ತ್' ಮತ್ತು 'ಇಂಡಿಯಾ' ಎಂದು 80 ಬಾರಿ ಒಟ್ಟು 7,186 ಅಕ್ಷರಗಳನ್ನು ಬರೆದು ದುಶ್ಚಟಕ್ಕೆ ಒಳಗಾಗುತ್ತಿರುವ ಯುವ ಜನತೆಯಲ್ಲಿ ಅರಿವು ಮೂಡಿಸಿದ್ದಾರೆ.

ಮತ್ತಿಕೆರೆ ಗ್ರಾಮದ ಶಿಕ್ಷಕ ಸುರೇಶ್ ಹಾಗೂ ಶೋಭ ದಂಪತಿಯ ಪುತ್ರ ದರ್ಶನ್ ಗೌಡ ಉತ್ತಮ ಯೋಗ ಪಟುವೂ ಆಗಿದ್ದು ಧೂಮಪಾನ ಮಾಡಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುವ ಯುವಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. 'ಸ್ವಾಮಿ ವಿವೇಕಾನಂದರ ಜೀವನದ ಆದರ್ಶವನ್ನು ನಾನು ಪಾಲಿಸುತ್ತಿದ್ದೇನೆ. ಅವರ ಮಾತು, ಮಾರ್ಗದರ್ಶನಗಳೇ ನನ್ನೆಲ್ಲಾ ಸಾಧನೆಗಳಿಗೆ ಪ್ರೇರಣೆ' ಎನ್ನುತ್ತಾರೆ ದರ್ಶನ್​.

ಇದನ್ನೂ ಓದಿ: ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ 100 ನಿಮಿಷಗಳಲ್ಲಿ 1 ರಿಂದ 100 ರವರೆಗೆ ಮಗ್ಗಿ ಪಠಿಸಿ ವಿಶ್ವ ದಾಖಲೆ

ಹೀಗೊಬ್ಬ ವಿಶಿಷ್ಠ ಸಾಧಕ!: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರ್ ನಿವಾಸಿ ಕೆ. ಚಂದ್ರಶೇಖರ ರೈ ಎಂಬವರು ಉಸಿರು ಕಟ್ಟಿಕೊಂಡು ಈಜುಕೊಳದಲ್ಲಿ ಮುಂಭಾಗದಿಂದ 29 ತಿರುವು(ಪಲ್ಟಿ) ಹೊಡೆಯುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾರೆ. ಇವರು ಒಂದು ನಿಮಿಷ ಎರಡು ಸೆಕೆಂಡ್​ನಲ್ಲಿ ಉಸಿರು ಕಟ್ಟಿಕೊಂಡು ಮುಂಭಾಗದಿಂದ 29 ತಿರುವು ಹೊಡೆದಿದ್ದಾರೆ. ಇದು ರಾಷ್ಟ್ರೀಯ ದಾಖಲೆಯಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್​ನಲ್ಲಿ ಸೇರಿಕೊಂಡಿದೆ.

ವಾಹ್! ಇದು ಹುಬ್ಬಳ್ಳಿ ಪೋರಿಯ ಜ್ಞಾಪಕ ಶಕ್ತಿ: ಪುಟ್ಟ ಬಾಲಕಿ​ ಅರ್ನಾ ಎಸ್.ಪಾಟೀಲ್ ತನ್ನ ವಿಶೇಷ ಜ್ಞಾಪಕ ಶಕ್ತಿಯ ಮೂಲಕ ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಿಸಿದ್ದಾಳೆ. ಹುಬ್ಬಳ್ಳಿಯ ಪೋರಿ ಕನ್ನಡ ವರ್ಣಮಾಲೆ ಮತ್ತು ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಿ ಹೇಳಬಲ್ಲಳು. ರಾಷ್ಟ್ರೀಯ ಚಿಹ್ನೆಗಳನ್ನು ಹೇಳುವುದು, 15 ದೇಹದ ಭಾಗಗಳನ್ನು ಗುರುತಿಸುವುದು, ಪ್ರಧಾನಮಂತ್ರಿಯ ಹೆಸರು ಮತ್ತು ಮುಖ್ಯಮಂತ್ರಿಯ ಹೆಸರುಗಳನ್ನು ಹೇಳುವ ಸಾಮರ್ಥ್ಯ ಹೊಂದಿದ್ದಾಳೆ.

ಇದನ್ನೂ ಓದಿ: ಸುಳ್ಯ: ಯೋಗ ಮಾಡಿ ಗಮನ ಸೆಳೆದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ವಿನ್ನರ್ ಕು. ಆರಾಧ್ಯ

Last Updated : Jan 13, 2023, 11:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.