ETV Bharat / state

ಬೇವೂರು ಬೆಟ್ಟದ ತಿಮ್ಮಪ್ಪನಿಗೆ ವಿಷ್ಣು ದೀಪೋತ್ಸವ.. ಬೆಣ್ಣೆ ಅಲಂಕಾರದಲ್ಲಿ ಮಿಂದ ತಿಮ್ಮಪ್ಪ - ETV Bharat Kannada

ಲೋಕ ಕಲ್ಯಾಣಕ್ಕಾಗಿ ದೇವರನ್ನು ಪ್ರಾರ್ಥಿಸಿ ಸಾಂಕೇತಿಕವಾಗಿ ರಾಜ ಗೋಪುರದ ಬಳಿ ತೈಲಪಟಕ್ಕೆ ಮಂಗಳಾರತಿಯಿಂದ ಬೆಂಕಿ ಹಚ್ಚಿ ಧಗಧಗನೆ ಉರಿಸಲಾಯಿತು.

Vishnu Deepothsava in Bevuru bettada thimmappa Temple
ಬೇವೂರು ಬೆಟ್ಟದ ತಿಮ್ಮಪ್ಪನಿಗೆ ವಿಷ್ಣು ದೀಪೋತ್ಸವ
author img

By

Published : Dec 9, 2022, 6:39 AM IST

Updated : Dec 9, 2022, 12:50 PM IST

ರಾಮನಗರ: ಶ್ರೀಕ್ಷೇತ್ರ ಚನ್ನಪಟ್ಟಣ ತಾಲೂಕಿನ ಬೇವೂರು ಬೆಟ್ಟದ ತಿಮ್ಮಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಿಂದ ಜರುಗಿತು. ಮೂಲ ದೇವರು ತಿಮ್ಮಪ್ಪನಿಗೆ ಬೆಣ್ಣೆ ಅಲಂಕಾರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ದೇವಾಲಯದ ಒಳ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಭಕ್ತರು ದೇವಾಲಯದ ಒಳಗಡೆ ಮಣ್ಣಿನ ಹಣತೆ ಹಚ್ಚಿ ಸಂಭ್ರಮಿಸಿದರು. ಲೋಕ ಕಲ್ಯಾಣಕ್ಕಾಗಿ ಯಾವುದೇ ಅಗ್ನಿ ಅವಘಡಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳಲ್ಲಿ ದೇವರನ್ನು ಪ್ರಾರ್ಥಿಸಿ ಸಾಂಕೇತಿಕವಾಗಿ ರಾಜ ಗೋಪುರದ ಬಳಿ ತೈಲಪಟಕ್ಕೆ ಮಂಗಳಾರತಿಯಿಂದ ಬೆಂಕಿ ಹಚ್ಚಿ ಧಗಧಗನೆ ಉರಿಸಲಾಯಿತು.

ಬೇವೂರು ಬೆಟ್ಟದ ತಿಮ್ಮಪ್ಪನಿಗೆ ವಿಷ್ಣು ದೀಪೋತ್ಸವ

ದೇವಸ್ಥಾನದ ಹೊರಗೆ ಗೋಪುರದ ಬಳಿ ಜಗಜ್ಯೋತಿ ಬೆಳಗಿಸಿದರು. ಬಳಿಕ ತೈಲ ಬಟ್ಟೆಯ ಕರಿಯನ್ನು ರಕ್ಷಾ ಪ್ರಸಾದವಾಗಿ ಭಕ್ತರಿಗೆ ನೀಡಲಾಯಿತು. ನಂತರ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿನಿಯೋಗ ಗಜೋತ್ಸವ ನಡೆಸಲಾಯಿತು. ಮಣ್ಣಿನ ಹಣತೆಯನ್ನು ಅಲಂಕರಿಸಿದ್ದ ದೇವಸ್ಥಾನ ವರ್ಣ ವೈಭವಗಳಿಂದ ಕಂಗೊಳಿಸುತ್ತಿತ್ತು. ಹೊರಗಡೆ ಮಾಡಿದ್ದ ವಿದ್ಯುತ್‌ ದೀಪಗಳ ಅಲಂಕಾರದಿಂದ ದೇವಾಲಯ ಕಣ್ಮನ ಸೆಳೆಯಿತು.

Vishnu Deepothsava in Bevuru bettada thimmappa Temple
ಬೇವೂರು ಬೆಟ್ಟದ ತಿಮ್ಮಪ್ಪನಿಗೆ ವಿಷ್ಣು ದೀಪೋತ್ಸವ

ತಾಲೂಕಿನ ದೊಡ್ಡಮಳೂರು ಅಪ್ರಮೇಯ ಸ್ವಾಮಿ, ನಗರದ ಕೋಟೆ ವರದರಾಜ ಸ್ವಾಮಿ, ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ವಿಷ್ಣು ದೀಪೋತ್ಸವ ಜರುಗಿತು. ಭಕ್ತರು ಉತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.

ಇದನ್ನೂ ಓದಿ: ತಿರುವಣ್ಣಾಮಲೈನಲ್ಲಿ ಕಾರ್ತಿಗೈ ದೀಪಂ ಉತ್ಸವ ಸಂಭ್ರಮ: ಸಾವಿರಾರು ಭಕ್ತರು ಭಾಗಿ!

Last Updated : Dec 9, 2022, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.