ETV Bharat / state

ಸರಗಳ್ಳತನಕ್ಕೆ ಯತ್ನಿಸಿದ ಖದೀಮರಿಗೆ ಸ್ಥಳೀಯರಿಂದ ಬಿತ್ತು ಗೂಸಾ - ಸರಗಳ್ಳರ ಬಂಧನ

ಗ್ರಾಮದಲ್ಲಿ ಮಹಿಳೆ ಹಸು ಮೇಯಿಸುತ್ತಿದ್ದ ವೇಳೆ ಬೈಕ್​ನಲ್ಲಿ ಬಂದು ಕೃತ್ಯ ಎಸಗಿದ್ದರು. ಈ ವೇಳೆ ಥಳಿಸಿದ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಕಳ್ಳರು ತಮ್ಮ ಕಾಲುಗಳ ಬಳಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಪತ್ತೆಯಾಗಿದೆ.

Locals caught thief those who came for robber a gold chain
ಸರಗಳ್ಳತನಕ್ಕೆ ಯತ್ನಿಸಿದ ಖದೀಮರಿಗೆ ಸ್ಥಳೀಯರಿಂದ ಬಿತ್ತು ಗೂಸಾ
author img

By

Published : Aug 12, 2020, 9:49 PM IST

ರಾಮನಗರ: ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರ ಎಗರಿಸಲು ಯತ್ನಸಿದ ಇಬ್ಬರು ಸರಗಳ್ಳರಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ‌ ನಡೆದಿದೆ.

ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಬಳಿ ಇರುವ ಕಬ್ಬಾಳಮ್ಮ ದೇವಾಲಯದ ಬಳಿ ಈ ಘಟನೆ ನಡೆದಿದ್ದು, ದೇವಾಲಯದ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಕರಗಮ್ಮ ಎಂಬ ಮಹಿಳೆಯ ಸರ ಕದ್ದು ಪರಾರಿಯಾಗಲು ಯತ್ನಿಸಿದ್ದರು. ಆಗ ಮಹಿಳೆ ಕಿರುಚಿಕೊಂಡಿದ್ದರಿಂದ ಹತ್ತಿರದಲ್ಲಿದ್ದ ಸಾರ್ವಜನಿಕರು ದೌಡಾಯಿಸಿ ಕಳ್ಳರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಸರಗಳ್ಳರನ್ನು ಹಿಡಿದ ಸ್ಥಳೀಯರು

ಬಳಿಕ ಕಳ್ಳರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಕಳ್ಳರು ತಮ್ಮ ಕಾಲುಗಳ ಬಳಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಪತ್ತೆಯಯಾಗಿದೆ. ಕಳ್ಳತನ ವೇಳೆ ಬೆದರಿಸಲು ಇಟ್ಟುಕೊಂಡಿದ್ದ ಚಾಕು ಸಹ ಸಿಕ್ಕಿದ್ದು, ಆರೋಪಿಯನ್ನು ಸಾತನೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.