ETV Bharat / state

ನಿಧಿಯಾಸೆಗಾಗಿ ರಾತ್ರೋರಾತ್ರಿ ದೇವಸ್ಥಾನದಲ್ಲೇ ತೋಡಿದ್ರು ಗುಂಡಿ! - kannadanews

ನಿಧಿ ಆಸೆಗಾಗಿ ಚನ್ನಪಟ್ಟಣ ತಾಲೂಕಿನ ದೇವಸ್ಥಾನವೊಂದರಲ್ಲಿ ಖದೀಮರು 3 ಅಡಿಗೂ ಆಳವಾದ ಗುಂಡಿ ತೋಡಿ ಪರಾರಿಯಾಗಿದ್ದಾರೆ. ಅಮವಾಸೆ ದಿನವೇ ಈ ಕೃತ್ಯ ನಡೆದಿದೆ.

ನಿಧಿ ಆಸೆಗಾಗಿ ದೇವಸ್ಥಾನದಲ್ಲಿ ಗುಂಡಿ ತೋಡಿ ಖದೀಮರು ಪರಾರಿ
author img

By

Published : May 5, 2019, 12:45 PM IST

ರಾಮನಗರ : ನಿಧಿ ಆಸೆಗಾಗಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಖದೀಮರು 3 ಅಡಿಗೂ ಆಳವಾದ ಗುಂಡಿ ತೋಡಿ ಪರಾರಿಯಾಗಿದ್ದಾರೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಡಿಕೆಹೊಸಳ್ಳಿ ಗ್ರಾಮದ ಶ್ರೀ ಚನ್ನಪ್ಪಸ್ವಾಮಿ ದೇವಸ್ಥಾನದಲ್ಲಿ ನಿಧಿಯಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದ ಖದೀಮರು ಈ ಕೃತ್ಯವೆಸಗಿದ್ದಾರೆ.

ನಿಧಿ ಆಸೆಗಾಗಿ ದೇವಸ್ಥಾನದಲ್ಲಿ ಗುಂಡಿ ತೋಡಿ ಖದೀಮರು ಪರಾರಿ

ಶನಿವಾರ ಅಮಾವಾಸ್ಯೆ ಇದ್ದ ಕಾರಣ ಪ್ಲಾನ್​ ಮಾಡಿಕೊಂಡಿದ್ದ ದುಷ್ಕರ್ಮಿಗಳು ನಿಧಿಯಾಸೆಗಾಗಿ ಪೂಜೆ‌ ನಡೆಸಿ‌ ಸುಮಾರು ಮೂರು ಅಡಿಗೂ ಹೆಚ್ಚು ಆಳಕ್ಕೆ ಗುಂಡಿ ಅಗೆದಿದ್ದಾರೆ. ಆದ್ರೆ ಯಾವುದೇ ನಿಧಿ ಸಿಗದೇ ಪರಾರಿಯಾಗಿದ್ದಾರೆ.

ಇದೇ ಗ್ರಾಮದ ಕೆಲವರಿಂದ ಕೃತ್ಯ ನಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ‌ ಮುಂದುವರಿದಿದೆ.

ರಾಮನಗರ : ನಿಧಿ ಆಸೆಗಾಗಿ ದೇವಸ್ಥಾನದಲ್ಲಿ 3 ಅಡಿಗೂ ಹೆಚ್ಚು ಗುಂಡಿ ತೋಡಿರುವ ಖದೀಮರು ನಿಧಿ ದೋಚುವಲ್ಲಿ‌ ವಿಫಲರಾಗಿ‌ ಪರಾರಿಯಾಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಡಿಕೆಹೊಸಳ್ಳಿ ಗ್ರಾಮದ ಶ್ರೀ ಚನ್ನಪ್ಪಸ್ವಾಮಿ ದೇವಸ್ಥಾನದಲ್ಲಿ ನಿಧಿಯಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದ ಖದೀಮರು ವಿಫಲ ಪ್ರಯತ್ನ ನಡೆಸಿದ್ದಾರೆ. ಶನಿವಾರ ನೆನ್ನೆ ಅಮಾವಾಸೆ ಇದ್ದ ಕಾರಣ ಪ್ಲ್ಯಾನ್ ಮಾಡಿಕೊಂಡಿದ್ದ ಖದೀಮರ ತಂಡ ನಿಧಿಯಾಸೆಗಾಗಿ ಪೂಜೆ‌ನಡೆಸಿ‌ ಸುಮಾರು ಮೂರು ಅಡಿಗೂ ಹೆಚ್ಚು ಆಳಕ್ಕೆ ಗುಂಡಿ ಬಗೆದಿದ್ದರು. ಈ ವಿಚಾರ ಬಹಿರಂಗವಾಗಿ‌ಗ್ರಾಮಸ್ಥರು‌ಸೇರುತ್ತಾರೆಂಬ ಮಾಹಿತಿ ಅರಿತ ಖದೀಮರು‌ ಕಾಲಿಗೆ ಬುದ್ದಿ ಹೇಳಿದ್ದಾರೆ ಎನ್ನಲಾಗಿದೆ. ದೇವಾಲಯದ ಬಗ್ಗೆ ಚಲನ‌ವಲನ‌ ಮತ್ತು ಇಲ್ಲಿನ ವಾಸ್ತವಾಂಸ ಸ್ಥಿತಿಗತಿ ಅರಿತ‌ವರಿಂದಲೇ‌ ಈ ಕೃತ್ಯ ನಡೆದಿದೆ‌ ಎಂದು ಶಂಕಿಸಲಾಗಿದೆ. ಇದೇ ಗ್ರಾಮದ ಕೆಲವರಿಂದ ಕೃತ್ಯ ನಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ‌ ಮುಂದುವರಿದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.