ETV Bharat / state

ರೇಷ್ಮೆ ನಗರಿಯಲ್ಲಿ ಕೈ ಬೀಸಿ ಕರೆಯುತ್ತಿದೆ ಫಲಪುಷ್ಪ ಪ್ರದರ್ಶನ

author img

By

Published : Jan 27, 2020, 10:23 AM IST

ರೇಷ್ಮೆ ನಗರಿ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

The Flower Show, which draws the public in the silk city
ರೇಷ್ಮೆನಗರದಲ್ಲಿ ಸಾರ್ವಜನಿಕರನ್ನು ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ರಾಮನಗರ: ರೇಷ್ಮೆ ನಗರಿ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ರೇಷ್ಮೆ ನಗರಿಯಲ್ಲಿ ಗಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ

ಫಲಪುಷ್ಪ ಪ್ರದರ್ಶನದಲ್ಲಿ ತಾಜಾ ಹಣ್ಣು, ತರಕಾರಿ ಹಾಗೂ ಹೂಗಳಿಂದ ತಯಾರಿಸಲಾಗಿದ್ದ ಕಲಾಕೃತಿಗಳು ನೋಡುಗರ ಗಮನ ಸೆಳೆದವು. ಪ್ರದರ್ಶನಕ್ಕೆ ಬಂದವರು ತಮ್ಮ ನೆಚ್ಚಿನ ಕಾಲಾಕೃತಿಗಳ ಮುಂದೆ ಸಿಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

ಇನ್ನೂ 2 ದಿನಗಳ ಕಾಲ ಈ ಪ್ರದರ್ಶನ ಇರಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ವೀಕ್ಷಕರಿಂದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಪ್ರದರ್ಶನವನ್ನು ಆಯೋಜನೆ ಮಾಡಿರುವ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

Intro:Body:ರಾಮನಗರ : ಹೂವಿನಲ್ಲಿ ಅರಳಿದ ಐತಿಹಾಸಿಕ ಪ್ರಸಿದ್ದ ಮಾಗಡಿಯ ಶ್ರೀರಂಗನಾಥ ದೇವಾಲಯ, ತರಕಾರಿಗಳಲ್ಲಿ ಅರಳಿದ ಇತಿಹಾಸ ಪ್ರಸಿದ್ದ ಮಹನೀಯರುಗಳಾದ ವಿವೇಕಾನಂದರು, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಕೃತಿಗಳು, ತಾಜಾ ಹಣ್ಣು, ತರಕಾರಿ ಹಾಗೂ ಹೂಗಳಿಂದ ಸಿದ್ದಪಡಿಸಲಾದ ಕಲಾಕೃತಿಗಳು, ಹೂವಿನಂದ ಮಾಡಿದ ಕಾಡುಪ್ರಾಣಿಗಳು, ನೋಡುಗರ ಮನಸೂರೆಗೊಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ನೆಚ್ಚಿನ ಕಾಲಾಕೃತಿಗಳ ಮುಂದೆ ಸಿಲ್ಫಿ ಕ್ಲಿಕಿಸಿಕೊಳ್ಳಲು ಮುಂದಾದ್ರು. ಹೌದು ಇದು ರೇಷ್ಮೆನಗರಿ ರಾಮನಗರದಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಾವಳಿಗಳಿವು
ರೇಷ್ಮೆನಗರಿ ರಾಮನಗರದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು. ಇಂದಿನಿಂದ ಮೂರು ದಿನಗಳ ಕಾಲ ಈ ಪ್ರದರ್ಶನದಲ್ಲಿ ಸೇವಂತಿ ಹಾಗೂ ಗುಲಾಬಿ ಹೂವುಗಳಿಂದ ಆಕೃತಿಗೊಂಡಿರೋ ಐತಿಹಾಸಿಕ ಸುಪ್ರಸಿದ್ದ ಮಾಗಡಿ ಶ್ರೀರಂಗನಾಥ ಸ್ವಾಮಿ ದೇವಾಲಯದ ಗೋಪುರ. ಕೆಂಪು ಗುಲಾಬಿಗಳಿಂದ ಕೂಡಿರುವ ಹೃದಯದ ಸಂಕೇತ. ವಿವಿಧ ತರಕಾರಿಗಳಿಂದ ತಯಾರಿಸಿದ ಆಕೃತಿಗಳ ಮುಂದೆ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ತೋ ಸಾರ್ವಜನಿಕರು ಹಾಗೂ ಅಧಿಕಾರಿಗಳ. ಇನ್ನೂ ಇಂತಹ ಫ್ಲವರ್ ಶೋ ಅಂದ್ರೆ ಮೊದಲಿಗೆ ನೆನಪಿಗೆ ಬರೋದು ಸಿಲಿಕಾನ್ ಸಿಟಿ ಬೆಂಗಳೂರಿನ ಲಾಲ್ ಬಾಗ್ ಸಸ್ಯ ತೋಟ. ಇಂತಹ ಫಲಪುಸ್ಪ ಪ್ರದರ್ಶನ ನೋಡಬೇಕೆಂದ್ರೆ ಬೆಂಗಳೂರಿಗೆ ಹೋಗಬೇಕಿತ್ತು. ಆದ್ರೆ ಜಿಲ್ಲಾಡಳಿತ ಕ್ರೀಡಾಂಗಣದಲ್ಲಿ ಫ್ಲವರ್ ಶೋವನ್ನು ಆಯೋಜನೆ ಮಾಡಿರುವುದಕ್ಕೆ ಜಿಲ್ಲೆಯ ಜನರಿಗೂ ಸಹ ಖುಷಿಕೊಟ್ಟಿದೆ. ಇನ್ನು ಈ ಬಾರಿ ಸುಮಾರು ೬೦ ಮಳಿಗೆಗಳನ್ನ ಇಲ್ಲಿ ಸೃಷ್ಟಿಸಲಾಗಿದ್ದು ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ತೋಟಗಾರಿಕ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಗುಣವಂತ ತಿಳಿಸಿದರು.
ಈ ಬಾರಿಯ ಫಲಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ. ಫಲಪುಷ್ಪ ಪ್ರದರ್ಶನಕ್ಕೆ ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಫಲಪುಷ್ಪ ಪ್ರದರ್ಶನ ನೋಡುತ್ತಿದ್ದಾರೆ.
ಒಟ್ಟಾರೆ ಮೂರು ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಹಾಗೂ ಯುವಕ-ಯುವತಿಯರು ಫ್ಲವರ್ ಶೋವನ್ನು ಕಣ್ತುಂಬಿಕೊಳ್ಳಲು ನಾ ಮುಂದು ತಾ ಮುಂದು ಅಂತಾ ಜಿಲ್ಲಾ ಕ್ರೀಂಡಾಗಣದತ್ತ ಧಾವಿಸಿ, ತಮ್ಮ ನೆಚ್ಚಿನ ಆಕೃತಿಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಇದನ್ನು ಆಯೋಜನೆ ಮಾಡಿರುವ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.