ETV Bharat / state

ಸ್ನೇಹಿತ ಡಿಕೆಶಿ ಜೊತೆ ಮಾತನಾಡಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮ: ಸಿಎಂ ಬಿಎಸ್​ವೈ - latest ramanagara news

ಡಿ.ಕೆ. ಶಿವಕುಮಾರ್ ನನ್ನ ಸ್ನೇಹಿತರು, ಅವರೊಂದಿಗೆ‌ ಮಾತನಾಡಿ ಸೂಕ್ತ ಸ್ಥಳದಲ್ಲಿ‌ ಮೆಡಿಕಲ್ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ‌ ನೀಡಿದ್ದಾರೆ.‌

ಡಿಕೆಶಿ ನನ್ನ ಸ್ನೇಹಿತರು ಅವರೊಂದಿಗೆ ಮಾತನಾಡಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗುವುದು.....ಸಿಎಂ ಬಿಎಸ್​ವೈ ಭರವಸೆ
author img

By

Published : Nov 8, 2019, 7:32 PM IST

ರಾಮನಗರ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನನ್ನ ಸ್ನೇಹಿತರು. ಅವರೊಂದಿಗೆ‌ ಸಮಾಲೋಚನೆ ನಡೆಸಿ ಸೂಕ್ತ ಸ್ಥಳದಲ್ಲಿ‌ ಮೆಡಿಕಲ್ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ‌ ನೀಡಿದ್ದಾರೆ.‌

ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಇಂದು ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಹಾಗೂ‌ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ‌ ಅವರು ಮಾತನಾಡಿದರು. ಮುಂದಿ‌ನ ಎರಡು ವರ್ಷಗಳಲ್ಲಿ ಇಲ್ಲಿ ಪತಿಮೆ ನಿರ್ಮಾಣ ಆಗಲಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್ ಪುತ್ಥಳಿಯಂತೆ ಇದೂ‌ ಜನಪ್ರಿಯ ಆಗಲಿದೆ. ಸಿದ್ಧಗಂಗೆಗೆ ಬರುವ ಎಲ್ಲಾ ಭಕ್ತರೂ ಇಲ್ಲಿಗೆ ಬರುವಂತಾಗಲಿದೆ. ಸರ್ಕಾರ ಒಟ್ಟು 80 ಕೋಟಿಯನ್ನು ಗ್ರಾಮದ ಅಭಿವೃದ್ಧಿಗೆ ವ್ಯಯಿಸಲಿದೆಯೆಂದು ಹೇಳಿದರು.

ಡಿಕೆಶಿ ನನ್ನ ಸ್ನೇಹಿತರು ಅವರೊಂದಿಗೆ ಮಾತನಾಡಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗುವುದು-ಸಿಎಂ ಭರವಸೆ

ಇದಕ್ಕೂ ಮೊದಲು ಸಂಸದ ಡಿ.ಕೆ.‌ ಸುರೇಶ್ ಮಾತನಾಡಿ, ವೀರಾಪುರದಲ್ಲಿ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣ ನಿರ್ಣಯವನ್ನು ಸರ್ಕಾರ ಮರು ಪರಿಶೀಲಿಸಬೇಕು. ಇಲ್ಲಿಯ ಬದಲಿಗೆ ಸಿದ್ಧಗಂಗಾ ಬೆಟ್ಟದಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ರು. ಅಷ್ಟೇ ಅಲ್ಲದೇ, ಅಕ್ಷರ, ಅನ್ನ, ಉದ್ಯೋಗ, ಸನ್ಮಾರ್ಗದ ನಡೆಯು ಶ್ರೀಗಳ ಆಶಯವಾಗಿತ್ತು. ಅದಕ್ಕೆ ಮೊದಲ ಆದ್ಯತೆ ಸಿಗಬೇಕು. ಬಡವರಿಗಾಗಿ ಇಲ್ಲೊಂದು ವಿಶ್ವವಿದ್ಯಾಲಯ ‌ಸ್ಥಾಪನೆ ಆಗಬೇಕು. ಐವತ್ತು ಎಕರೆ ಪ್ರದೇಶದಲ್ಲಿ ಶಾಲೆ-ಕಾಲೇಜು ಸ್ಥಾಪನೆ ಮಾಡಿ ಪ್ರಾಥಮಿಕ ಹಂತದಿಂದ ಪದವಿವರೆಗಿನ ಶಿಕ್ಷಣಕ್ಕೆ ಅವಕಾಶ ಸಿಗಬೇಕು. ಪ್ರತಿಮೆಯನ್ನು ಸಿದ್ಧಗಂಗಾ ಬೆಟ್ಟದಲ್ಲೇ ಮಾಡುವುದು ಸೂಕ್ತವೆಂದು ಸಲಹೆ ನೀಡಿದ್ರು.

ಮೆಡಿಕಲ್ ಕಾಲೇಜು ಕಿತ್ತುಕೊಳ್ಳಬೇಡಿ: ಚಿಕ್ಕಬಳ್ಳಾಪುರಕ್ಕೆ ಹೊಸ ಮೆಡಿಕಲ್ ಕಾಲೇಜು ಕೊಡಿ, ಆದರೆ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಕಿತ್ತು ಅಲ್ಲಿಗೆ ಕೊಡಬೇಡಿ ಎಂದು ಸುರೇಶ್ ಮುಖ್ಯಮಂತ್ರಿಗೆ ಮನವಿ‌ ಮಾಡಿದರು. ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಮನವಿ‌ ಮಾಡಿದ್ದು, ಕುಮಾರಸ್ವಾಮಿ ಅದಕ್ಕೆ ಅನುಮೋದನೆ ನೀಡಿದರು. ಈಗಾಗಲೇ ಕಾರ್ಯಾದೇಶ ದೊರೆತು ಟೆಂಡರ್ ಕೂಡ ಆಗಿದೆ. ಯಡಿಯೂರಪ್ಪ ಕೊಡುಗೈ ದಾನಿಗಳು. ಅವರು ಇದೇ ವೇದಿಕೆಯಲ್ಲಿ ಅಥವಾ ಚಿಕ್ಕಬಳ್ಳಾಪುರದಲ್ಲಿ ಈ ಬಗ್ಗೆ ಘೋಷಣೆ ಮಾಡಬೇಕು. ಕನಕಪುರಕ್ಕೆ ಅನ್ಯಾಯ ಮಾಡಬಾರದೆಂದು ಮನವಿ ಮಾಡಿದರು.

Intro:Body:ರಾಮನಗರ: 'ಡಿ.ಕೆ. ಶಿವಕುಮಾರ್ ನನ್ನ ಸ್ನೇಹಿತರು. ಅವರೊಂದಿಗೆ‌ ಮಾತನಾಡಿ ಸೂಕ್ತ ಸ್ಥಳದಲ್ಲಿ‌ ಮೆಡಿಕಲ್ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ‌ ನೀಡಿದರು.‌

ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶುಕ್ರವಾರ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಹಾಗೂ‌ ಗ್ರಾಮಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು‌ ಮಾತನಾಡಿದರು.
ಮುಂದಿ‌ನ ಎರಡು ವರ್ಷದಲ್ಲಿ‌ ಇಲ್ಲಿ ಪತಿಮೆ ನಿರ್ಮಾಣ ಆಗಲಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್ ಪುತ್ಥಳಿಯಂತೆ ಇದೂ‌ ಜನಪ್ರಿಯ ಆಗಲಿದೆ. ಸಿದ್ದಗಂಗೆಗೆ ಬರುವ ಎಲ್ಲ‌ ಭಕ್ತರೂ ಇಲ್ಲಿ ಬರುವಂತೆ ಆಗಲಿದೆ. ಸರ್ಕಾರ ಒಟ್ಟು 80 ಕೋಟಿಯನ್ನು ಗ್ರಾಮದ ಅಭಿವೃದ್ಧಿಗೆ ವ್ಯಯಿಸಲಿದೆ ಎಂದರು.

ಇದಕ್ಕೂ ಮುನ್ನ ಸಂಸದ ಡಿ.ಕೆ.‌ ಸುರೇಶ್ ಮಾತನಾಡಿ, ವೀರಾಪುರದಲ್ಲಿ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣ ನಿರ್ಣಯವನ್ನು ಸರ್ಕಾರ ಮರು ಪರಿಶೀಲಿಸಬೇಕು. ಇಲ್ಲಿಯ ಬದಲಿಗೆ ಸಿದ್ದಗಂಗಾ ಬೆಟ್ಟದಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಅಕ್ಷರ, ಅನ್ನ, ಉದ್ಯೋಗ, ಸನ್ಮಾರ್ಗದ ನಡೆಯು ಶ್ರೀಗಳ ಆಶಯ ಆಗಿತ್ತು. ಅದಕ್ಕೆ ಮೊದಲ ಆದ್ಯತೆ ಸಿಗಬೇಕು. ಬಡವರಿಗಾಗಿ ಇಲ್ಲೊಂದು ವಿಶ್ವವಿದ್ಯಾಲಯ ‌ಸ್ಥಾಪನೆ ಆಗಬೇಕು. ಐವತ್ತು ಎಕರೆ ಪ್ರದೇಶದಲ್ಲಿ ಶಾಲೆ-ಕಾಲೇಜು ಸ್ಥಾಪನೆ ಮಾಡಿ ಪ್ರಾಥಮಿಕ ಹಂತದಿಂದ ಪದವಿ ವರೆಗೆ ಓದಿಗೆ ಅವಕಾಶ ಸಿಗಬೇಕು. ಪ್ರತಿಮೆಯನ್ನು ಸಿದ್ದಗಂಗಾ ಬೆಟ್ಟದಲ್ಲೇ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಮೆಡಿಕಲ್ ಕಾಲೇಜು ಕಿತ್ತುಕೊಳ್ಳಬೇಡಿ: ' ಚಿಕ್ಕಬಳ್ಳಾಪುರ ಕ್ಕೆ ಹೊಸ ಮೆಡಿಕಲ್ ಕಾಲೇಜು ಕೊಡಿ. ಆದರೆ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಕಿತ್ತು ಅಲ್ಲಿಗೆ ಕೊಡಬೇಡಿ' ಎಂದು ಸುರೇಶ್ ಮುಖ್ಯಮಂತ್ರಿ ಗೆ ಮನವಿ‌ ಮಾಡಿದರು.

ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಮನವಿ‌ ಮಾಡಿದ್ದೆವು. ಕುಮಾರಸ್ವಾಮಿ ಅದಕ್ಕೆ ಅನುಮೋದನೆ ನೀಡಿದರು. ಈಗಾಗಲೇ ಕಾರ್ಯಾದೇಶ ದೊರೆತು ಟೆಂಡರ್ ಕೂಡ ಆಗಿದೆ. ಯಡಿಯೂರಪ್ಪ ಕೊಡುಗೈ ದಾನಿಗಳು. ಅವರು ಇದೇ ವೇದಿಕೆಯಲ್ಲಿ ಅಥವಾ ಚಿಕ್ಕಬಳ್ಳಾಪುರ ದಲ್ಲಿ ಈ ಬಗ್ಗೆ ಘೋಷಣೆ ಮಾಡಬೇಕು. ಕನಕಪುರಕ್ಕೆ ಅನ್ಯಾಯ ಮಾಡಬಾರದು' ಎಂದು ಆಗ್ರಹಿಸಿದರು.

ಉಪ‌ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಸಿದ್ದಲಿಂಗ ಸ್ವಾಮೀಜಿ ಇದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.