ETV Bharat / state

ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆರಗಿದ ಬೀದಿ ನಾಯಿಗಳು - ರಾಮನಗರ

ರಸ್ತೆ ಬಳಿ ನಿಂತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ನಡೆಸಿವೆ. ಬಾಲಕನ ಚಿರಾಟ ಗಮನಿಸಿ ತಂದೆ-ತಾಯಿ ಹಾಗೂ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಣೆ ಮಾಡಿದರು.

Street dogs attacks on a boy standing by the side of the road
ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆರಗಿದ ಬೀದಿ ನಾಯಿಗಳು
author img

By

Published : Mar 19, 2021, 5:49 PM IST

ರಾಮನಗರ: ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ‌. ಚನ್ನಪಟ್ಟಣ ನಗರದ ಪಾರ್ವತಿ ಚಿತ್ರ ಮಂದಿರದ ಬಳಿ ಚೇತನ್ (3) ಮೇಲೆ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದೆ‌.

ರಸ್ತೆ ಬಳಿ ನಿಂತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ನಡೆಸಿವೆ. ಬಾಲಕನ ಚಿರಾಟ ಗಮನಿಸಿ ತಂದೆ-ತಾಯಿ ಹಾಗೂ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಿಸಿದ್ದಾರೆ. ನಾಯಿಗಳು ಬಾಲಕನ ಹೊಟ್ಟೆ ಹಾಗೂ ಕೈಗಳಿಗೆ ಕಡಿದಿದ್ದು, ತಕ್ಷಣವೇ ಖಾಸಗಿ ನರ್ಸಿಂಗ್ ಹೋಮ್​​ಗೆ ತೆರಳಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ನಗರದಲ್ಲಿ ಬೀದಿ ನಾಯಿಗಳ ಉಪಟಳ

ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಈ ಕೂಡಲೆ ಚನ್ನಪಟ್ಟಣ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ.

ಇದನ್ನೂ ಓದಿ: ಶಾಲೆಯಲ್ಲಿ ವಿದ್ಯುತ್​ ಅವಘಡ : ಓರ್ವ ವಿದ್ಯಾರ್ಥಿ ಸಾವು, 9 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.