ETV Bharat / state

ಬ್ರೈನ್ ಮ್ಯಾಪಿಂಗ್ ಟೆಸ್ಟ್​ನಲ್ಲಿ ವರ್ಷದ ಹಳೆ ಕೇಸ್​ ಪತ್ತೆ: ರಾಜ್ಯದಲ್ಲಿ ಈ ತಂತ್ರಜ್ಞಾನದಿಂದ ಮೊದಲ ಪ್ರಕರಣ ಬಯಲು - ETV Bharath Kannada news

ಬ್ರೈನ್ ಮ್ಯಾಪಿಂಗ್ ಟೆಸ್ಟ್​ ಮೂಲಕ ರಾಜ್ಯದ ಮೊದಲ ಅಪರಾಧ ಪ್ರಕರಣ ಪತ್ತೆ - ವರ್ಷಗಳ ಹಿಂದಿನ ಪ್ರಕರಣ ಬಯಲಿಗೆ - ಪರೀಕ್ಷೆಯಲ್ಲಿ ಸತ್ಯ ಒಪ್ಪಿಕೊಂಡ ಚಾಣಕ್ಯ ಲಾಯರ್​.

states-first-brain-mapping-test-for-crime
ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ವರ್ಷಗಳ ಹಳೆ ಕೇಸ್​ ಪತ್ತೆ
author img

By

Published : Jan 25, 2023, 9:45 PM IST

ರಾಜ್ಯದಲ್ಲಿ ಮೊದಲ ಬಾರಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಅಪರಾಧ ಪ್ರಕರಣ ತನಿಖೆ

ರಾಮನಗರ: ಆತ ಆಗ ತಾನೆ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಮತ್ತೆ ಕಾಲ್ ಮಾಡಿ ಇನ್ನಷ್ಟು ಕೆಲಸ ಇದೆ ಅಂತ ಬರ ಹೇಳಿದ್ದರು. ಅಮ್ಮಾ ಬೇಗ ಬಂದೆ ಅಂತ ಹೋದವನು ಹಂತಕರ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ ಅಸುನೀಗಿದ್ದ. ಒಂದು ವರ್ಷದಿಂದಲೂ ಕ್ರಿಮಿನಲ್ ಲಾಯರ್ ಹಾಗೂ ಆತನ ಸಹಚರನನ್ನು ಎಷ್ಟೇ ವಿಚಾರಣೆ ಮಾಡಿದರು ಸುಳಿವೇ ಸಿಗದಿದ್ದ ರಾಮನಗರ ಪೊಲೀಸರಿಗೆ ಅಸ್ತ್ರವಾಗಿ ಸಿಕ್ಕಿದ್ದು ಬ್ರೈನ್ ಮ್ಯಾಪಿಂಗ್ ಪರೀಕ್ಷೆ. ಏನಿದು ಪ್ರಕರಣ, ಯಾರೂ ಆ ಖತರ್ನಾಕ್ ಲಾಯರ್, ರಹಸ್ಯ ಬಯಲು ಮಾಡಿದ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಕುರಿತ ಸ್ಟೋರಿ ಇಲ್ಲಿದೆ.

ರಾಜ್ಯದಲ್ಲೇ ಮೊದಲ ಬಾರಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಯಶಸ್ವಿ!: ಕಳೆದ ಒಂದು ವರ್ಷದ ಮೇ 19 ರಂದು ನಡೆದಿದ್ದ ಪ್ರಕರಣದ ಹಿಂದೆ ಬಿದ್ದಿದ್ದ ರಾಮನಗರ ಜಿಲ್ಲೆ ಕನಕಪುರ ಠಾಣೆ ಪೊಲೀಸರಿಗೆ ತಲೆನೋವು ತಂದಿತ್ತು. ಅವತ್ತಿನ ದಿನ ಲಾಯರ್ ಆಫೀಸ್ ಒಂದರಲ್ಲಿ ಕೆಲಸಕ್ಕೆ ಹೋಗ್ತಿದ್ದ. ಆಗಷ್ಟೇ ಪಾರ್ಟ್ ಟೈಮ್ ಕೆಲಸ ಮುಗಿಸಿ ಆಶಾ ಎಂಬುವವರ ಪುತ್ರ ಬಂದಿದ್ದ. ಮತ್ತೆ ಬರ ಹೇಳಿದ್ದಾರೆ ಅಂತ ಹೋದವನು ಒಂದು ವರ್ಷದಿಂದಲೂ ನಾಪತ್ತೆಯಾಗಿದ್ದ. ಪರಿಚಯದ ವಕೀಲರೊಬ್ಬರು ಕಚೇರಿ ಶಿಫ್ಟಿಂಗ್ ಕೆಲಸಕ್ಕೆ ಕರೆದಿದ್ದಾರೆ ಎಂದು ಹೋಗಿದ್ದ ಯುವಕ ಮರಳಿ ಬಂದಿರಲಿಲ್ಲ.

ಈ ಬಗ್ಗೆ ಶ್ರೇಯಸ್ಸ್ ತಾಯಿ ಆಶಾ ಅವರು ಕನಕಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಕನಕಪುರ ಟೌನ್ ಪೊಲೀಸರು ದೂರವಾಣಿ ಕರೆ ಆಧರಿಸಿ ವಕೀಲ ಶಂಕರೇಗೌಡ ಹಾಗೂ ಅರುಣ್ ವಿರುದ್ಧ 377 ಕೇಸ್ ದಾಖಲಿಸಿ ಆರೋಪಿಗಳನ್ನ ಬಂಧಿಸಿದ್ದರು. ಆದರೆ ಬಾಲಕನ ನಿಗೂಢ ನಾಪತ್ತೆ‌ ಕುರಿತು ಆರೋಪಿಗಳು ಮಾತ್ರ ಬಾಯ್ಬಿಟ್ಟಿರಲಿಲ್ಲ. ಆದರೆ ಇದೀಗ ನೂತನ ತಂತ್ರಾಂಶದ ಮೂಲಕ ಸಂತ್ಯಾಂಶ ಹೊರ ಬಂದಿದೆ.

'ಬ್ರೈನ್ ಮ್ಯಾಂಪಿಗ್ ಎಂಬ ನೂತನ ತಂತ್ರಜ್ಞಾನದ ಮೂಲಕ ಯುವಕನ ನಾಪತ್ತೆ‌ ಪ್ರಕರಣವನ್ನು ಭೇದಿಸಲಾಗಿದೆ. ಆರೋಪಿ ತಲೆಗೆ ಸೆನ್ಸಾರ್ ಒಂದನ್ನು ಅಳವಡಿಸಲಾಗುತ್ತದೆ ಮತ್ತು ಆತನನ್ನು ಕಂಪ್ಯೂಟರ್ ಪರದೆಯ ಮುಂದೆ ಕೂರಿಸಿ ಪ್ರಕರಣದ ಕುರಿತ ಒಂದಷ್ಟು ಭಾವಚಿತ್ರ ಹಾಗೂ ಶಬ್ದಗಳನ್ನು ತೋರಿಸುವ ಮೂಲಕ ಆತನ ಮೆದುಳಿನಲ್ಲಿ ಆಗುವಂತಹ ಚಲನವಲನಗಳು, ಆಲೋಚನೆ, ಚಡಪಡಿಕೆ ಆಧಾರದ ಮೇಲೆ ಸತ್ಯಾಂಶ ಹೊರ ಬೀಳಲಿದೆ. ಅದೇ ರೀತಿ ಪ್ರಕರಣದ ಬಂಧಿತ ಆರೋಪಿಗಳಾದ ವಕೀಲ ಶಂಕರೇಗೌಡ ಮತ್ತು ಅರುಣ್ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಯವಕನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ' ಎಂದು ರಾಮನಗರ ಎಸ್​ಪಿ ಸಂತೋಷ್ ಬಾಬು ತಿಳಿಸಿದ್ದಾರೆ.

ಯುವಕನಿಗೆ ಮತ್ತು ಬರುವ ಮಾತ್ರೆ ನೀಡಿ ಅಸಹಜ ಲೈಂಕಿಕ ಕ್ರಿಯೆ ನಡೆಸಿ ಕೊಲೆ ಮಾಡಿ ಕೆರೆಗೆ ಎಸೆದಿರುವುದಾಗಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಹಿನ್ನೆಲೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಒಟ್ಟಾರೆ ಚಾಲೆಂಜಿಂಗ್ ಆಗಿದ್ದ ಪ್ರಕರಣವೊಂದನ್ನು ನೂತನ ತಂತ್ರಾಂಶದ ಮೂಲಕ ಬೇಧಿಸಿರೋದು ರಾಜ್ಯದಲ್ಲೇ ಮೊದಲು ಎನ್ನಲಾಗಿದೆ. ಅಪರಾಧಿಗಳು ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬುದನ್ನು ರಾಮನಗರ ಜಿಲ್ಲಾ ಪೊಲೀಸರು ನಿರೂಪಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಬಸ್​ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ.. ತಪ್ಪಿಸಿಕೊಳ್ಳಲು ಬಸ್​ನಿಂದ ಜಿಗಿದ ಮಹಿಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.