ETV Bharat / state

ರಾಮನಗರದಲ್ಲಿ ಶಿವಣ್ಣನ 'ಬೈರಾಗಿ' ತಂಡ; ಚಿತ್ರ ವೀಕ್ಷಿಸಲು ಅಭಿಮಾನಿಗಳಿಗೆ ಮನವಿ - ಬೈರಾಗಿ ಸಿನಿಮಾದ ಪ್ರಚಾರಕ್ಕಾಗಿ ರಾಮನಗರಕ್ಕೆ ಬಂದಿದ್ದ ಶಿವಣ್ಣ

ನಟ ಶಿವರಾಜ್​ ಕುಮಾರ್​​, ನಟ ಡಾಲಿ ಧನಂಜಯ, ಪೃಥ್ವಿ ಅಂಬಾರ್, ನಿರ್ಮಾಪಕ ಕೃಷ್ಣಸಾರ್ಥಕ್ ಅವರು 'ಬೈರಾಗಿ' ಸಿನಿಮಾದ ಪ್ರಚಾರಕ್ಕಾಗಿ ಇಂದು ರಾಮನಗರಕ್ಕೆ ಬಂದಿದ್ದರು.

Shivanna who came to Ramanagara for the promotion of 'Bairagi' cinema
ಬೈರಾಗಿ ಸಿನಿಮಾದ ಪ್ರಚಾರಕ್ಕಾಗಿ ರಾಮನಗರಕ್ಕೆ ಬಂದಿದ್ದ ಶಿವಣ್ಣ
author img

By

Published : Jun 24, 2022, 3:54 PM IST

Updated : Jun 24, 2022, 4:20 PM IST

ರಾಮನಗರ: 'ಬೈರಾಗಿ' ಸಿನಿಮಾ ಪ್ರಚಾರಕ್ಕಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ರಾಮನಗರಕ್ಕೆ ಆಗಮಿಸಿದ್ದರು. ನಟರಾದ ಡಾಲಿ ಧನಂಜಯ, ಪೃಥ್ವಿ ಅಂಬಾರ್ ಹಾಗು ನಿರ್ಮಾಪಕ ಕೃಷ್ಣ ಸಾರ್ಥಕ್ ಜೊತೆಗಿದ್ದರು.

ಕಾರ್ಯಕ್ರಮದಲ್ಲಿ 'ಅಪ್ಪು.. ಅಪ್ಪು' ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಆಗ ಶಿವಣ್ಣ ಪ್ರತಿಕ್ರಿಯಿಸಿ, ಪ್ರೀತಿ ಎದೆಯಲ್ಲಿರಬೇಕು, ಬಾಯಲ್ಲಿ ಅಲ್ಲ, ಬಾಯಲ್ಲಿ ತೋರಿಕೆಯಾಗುತ್ತದೆ. ಎದೆಯಲ್ಲಿದ್ದರೆ ಅದು ಭಕ್ತಿ, ಪ್ರೀತಿ, ಮಾನವೀಯತೆ ಆಗಲಿದೆ ಎಂದು ಕಿವಿಮಾತು ಹೇಳಿದರು.

'ಬೈರಾಗಿ' ಸಿನಿಮಾ ಜುಲೈ 1ಕ್ಕೆ ರಿಲೀಸ್ ಆಗ್ತಿದೆ. ಎಲ್ಲರೂ ತಪ್ಪದೇ ಸಿನಿಮಾ ನೋಡಿ‌ ಎಂದು ರಾಮನಗರದ ಐಜೂರು ವೃತ್ತದಲ್ಲಿ ಶಿವಣ್ಣ ಮನವಿ ಮಾಡಿದರು. ಅಭಿಮಾನಿಯೊಬ್ಬರು ತಂದಿದ್ದ ಪುನೀತ್ ಫೋಟೋಗೆ ಅವರು ಸಹಿ ಹಾಕಿ ಕೊಟ್ಟರು.

ಇದನ್ನೂ ಓದಿ: ಕ್ರಾಂತಿಕಾರಿಯೊಬ್ಬನ ಪ್ರೇಮಕಥೆ ಹೇಳೋದಕ್ಕೆ ರೆಡಿಯಾದ ನೀನಾಸಂ ಸತೀಶ್

Last Updated : Jun 24, 2022, 4:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.