ETV Bharat / state

ಎಲ್ಲರ ಏಳಿಗೆಗಾಗಿ ಮಠ- ಮಾನ್ಯಗಳು ಅಪರಿಮಿತವಾಗಿ ಶ್ರಮಿಸುತ್ತಿವೆ: ಗೋವಿಂದ ಎಂ ಕಾರಜೋಳ - ದೀನ ದಲಿತರ, ಅಸಹಾಯಕರ, ಅಶಕ್ತರ ಮಕ್ಕಳ ಶಿಕ್ಷಣ ಹಾಗೂ ಏಳಿಗೆಗಾಗಿ ಮಠ ಮಾನ್ಯಗಳು ಅಪರಿಮಿತವಾಗಿ ಶ್ರಮಿಸುತ್ತಿವೆ

ಮಾಗಡಿ ತಾಲೂಕಿನ ಪಾಲನಹಳ್ಳಿ ಗ್ರಾಮದಲ್ಲಿ ಸದ್ಗುರು ಶ್ರೀ ಶನೇಶ್ವರ ಮಠವು ಆಯೋಜಿಸಿದ್ದ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಶನೇಶ್ವರರ ಸ್ವಾಮಿ ಜಯಂತೋತ್ಸವದಲ್ಲಿ ಗೋವಿಂದ ಎಂ ಕಾರಜೋಳ ಭಾಗಿಯಾಗಿದ್ದರು.

shaneshwara swamy festival at ramanagara
ಎಲ್ಲರ ಏಳಿಗೆಗಾಗಿ ಮಠ- ಮಾನ್ಯಗಳು ಅಪರಿಮಿತವಾಗಿ ಶ್ರಮಿಸುತ್ತಿವೆ
author img

By

Published : Mar 13, 2021, 3:14 AM IST

ರಾಮನಗರ : ದೀನ ದಲಿತರ, ಅಸಹಾಯಕರ, ಅಶಕ್ತರ ಮಕ್ಕಳ ಶಿಕ್ಷಣ ಹಾಗೂ ಏಳಿಗೆಗಾಗಿ ಮಠ ಮಾನ್ಯಗಳು ಅಪರಿಮಿತವಾಗಿ ಶ್ರಮಿಸುತ್ತಿವೆ. ಈ ಮಠಮಾನ್ಯಗಳ ಸೇವೆ ಅನನ್ಯ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಶ್ಲಾಘಿಸಿದರು.

ಮಾಗಡಿ ತಾಲೂಕಿನ ಪಾಲನಹಳ್ಳಿ ಗ್ರಾಮದಲ್ಲಿ ಸದ್ಗುರು ಶ್ರೀ ಶನೇಶ್ವರ ಮಠವು ಆಯೋಜಿಸಿದ್ದ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಶನೇಶ್ವರರ ಸ್ವಾಮಿ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.ಮಠಮಾನ್ಯಗಳು ಸಮಾಜದ ಕಲ್ಯಾಣಕ್ಕಾಗಿ ಗಣನೀಯವಾಗಿ ಶ್ರಮಿಸುತ್ತಿವೆ. ಮಠಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಆರಂಭದಲ್ಲಿ ಗುರುಕುಲ ಪದ್ಧತಿಯಿಂದ ಆರಂಭಿಸಿ, ಇಂದಿನ ಆಧುನಿಕ ಶಿಕ್ಷಣವನ್ನು ಉತ್ತಮಗುಣಮಟ್ಟದಲ್ಲಿ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಛಾಪುಮೂಡಿಸಿವೆ. ಪಾಲನಹಳ್ಳಿಯ ಮಠವೂ ಸಮಾಜದ ಅಭಿವೃದ್ಧಿಗಾಗಿ, ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ ಸಂಗತಿ, ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದ ಡಿಸಿಎಂ ಈ ಮಠವು ಮಾಡುವ ಕಲ್ಯಾಣ ಕಾರ್ಯಕ್ರಮಕ್ಕೆ ಬೆಂಬಲಿಸುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.