ರಾಮನಗರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿಲ್ಲೆಯ ಹಲವು ಗ್ರಾಮಗಳಿಂದ ಆಗಮಿಸಿದ್ದ, ರಾಸುಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವಿವಿಧ ತಳಿಯ ರಾಸುಗಳು ಈ ಕಾರ್ಯಕ್ರಮಕ್ಕೆ ಬಂದಿದ್ದು, ಪ್ರದರ್ಶನ ನೀಡುವುದರ ಜೊತೆಗೆ ಕಿಚ್ಚು ಹಾಯಿಸಿ ಹಬ್ಬವನ್ನು ಆಚರಣೆ ಮಾಡಲಾಯಿತು. ಈ ಪ್ರದರ್ಶನದಲ್ಲಿ ಜಯಗಳಿಸಿದ ರಾಸುಗಳಿಗೆ ಉತ್ತಮ ಹಾಗೂ ಅತ್ಯುತ್ತಮ ರಾಸು ಎಂದು ಜಾನಪದ ಪರಿಷತ್ವತಿಯಿಂದ ಬಹುಮಾನ ಕೊಡಲಾಯಿತು.
ಪ್ರಸ್ತುತ ವಿದ್ಯಮಾನದಲ್ಲಿ ಜೆರ್ಸಿ ಹಾಗೂ ಎಚ್ಎಫ್ ಎಂಬ ವಿದೇಶಿ ತಳಿಯ ಹಸುಗಳಿಂದ ಗ್ರಾಮೀಣ ಭಾಗದ ನಾಟಿ ದನಗಳನ್ನು ಸಾಕಾಣಿಕೆ ಮಾಡುವವರ ಸಂಖ್ಯೆ ಕ್ಷೀಣಿಸಿದೆ. ನಮ್ಮ ಹಿರಿಯರು ಬಿಟ್ಟು ಹೋಗಿರುವ ಜಾನಪದ ಪರಂಪರೆಯನ್ನು ಕೇವಲ ಪ್ರದರ್ಶಿಸುವುದಲ್ಲದೆ, ಮುಂದಿನ ಪೀಳಿಗೆಗೂ ಸಹ ಅನುಕೂಲವಾಗುವಂತೆ ರೈತರು ಯುವಕರಿಗೆ ಉತ್ತೇಜನ ನೀಡಬೇಕೆಂದು ಆಯೋಜಕರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಭಲೇ ಜೋಡಿ: 65 ಕ್ವಿಂಟಾಲ್ ಭಾರ ಎಳೆದು ಬೆರಗಾಗಿಸಿದ ಜೋಡೆತ್ತು!
ಹಬ್ಬದ ಪ್ರಯುಕ್ತ ಪ್ರತಿವರ್ಷವೂ ಕೂಡ ಜಾನಪದ ಲೋಕದಲ್ಲಿ ಇಂಥದ್ದೊಂದು ಸ್ಪರ್ಧೆ ಆಚರಣೆ ಮಾಡಲಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ರೈತರಿಗೆ ಪ್ರೋತ್ಸಾಹ ಸಿಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಿರುವ ನಾಟಿದನಗಳಿಗೆ ಭಾರಿ ಬೇಡಿಕೆಯಿದೆ. ಸುಮಾರು 3 ರಿಂದ 5 ಲಕ್ಷದವರೆಗೆ ಬೆಲೆಬಾಳುವ ರಾಸುಗಳಿವೆ. ಆದರೆ ನಾಟಿದನಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ.