ರಾಮನಗರ: ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ನೇರ ಸಂವಾದ ನಡೆಸಲು ಮುಂದಾಗಿದೆ. ಆದಷ್ಟು ಶೀಘ್ರ ಈ ಸಂವಾದ ನಡೆಯಲಿದ್ದು ಪೌರಕಾರ್ಮಿಕರು ಭಾಗವಹಿಸಿ ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೌರಕಾರ್ಮಿಕರೊಂದಿಗೆ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಆಯೋಗದ ಗಮನಕ್ಕೆ ತರಬೇಕು. ಕೆಲಸ ಮಾಡುವ ಸಂದರ್ಭದಲ್ಲಿ ವಿಶ್ರಾಂತಿ ಗೃಹ, ಹಬ್ಬದ ದಿನಗಳಲ್ಲಿ ರಜೆ ಸೇರಿದಂತೆ ಹಲವಾರು ಸಮಸ್ಯೆಗಳು ಇರುತ್ತವೆ. ಅವುಗಳನ್ನು ಆಯೋಗದ ಗಮನಕ್ಕೆ ತರಬಹುದು. ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಜಿಲ್ಲಾ ಜಾಗೃತ ಸಮಿತಿ ಸದಸ್ಯ ನಾಗರಾಜು ಮಾತನಾಡಿ, ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಪೊಲೀಸ್ ಇಲಾಖೆಯಲ್ಲಿ ನೀಡಲಾಗುವ ಹೆಲ್ತ್ ಕಾರ್ಡ್ ರೀತಿ, ಪೌರಕಾರ್ಮಿಕರಿಗೂ ವ್ಯವಸ್ಥೆ ಕಲ್ಪಿಸಬೇಕು. ಅವರ ಕುಟುಂಬಕ್ಕೂ ಸಹ ಆರೋಗ್ಯ ವಿಮೆ ಒದಗಿಸಲಿ. ಪೌರಕಾರ್ಮಿಕರಿಗೆ ಜಿ-1, ಜಿ-2 ರೀತಿ ಮನೆ ನೀಡುವ ಬದಲು 30*40 ಅಡಿ ನಿವೇಶನ ನೀಡಬೇಕು. ಇದರಿಂದ ಅವರು ಭೂ ಮಾಲೀಕರಾಗುತ್ತಾರೆ. ಪೌರಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಂತೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಹೆಚ್ಚೆಚ್ಚು ಸಾಲ, ಹೆಚ್ಚೆಚ್ಚು ತುಪ್ಪ!?; ಧನವಿನಿಯೋಗ, ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ..