ETV Bharat / state

ಕೋವಿಡ್​​ ವಾಕ್ಸಿನ್ ಪಡೆದ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ.. ಶತಾಯುಷಿ ಎಲ್ಲರಿಗೂ ಪ್ರೇರಣೆ..

author img

By

Published : Jul 17, 2021, 9:26 PM IST

ಈ ಮಧ್ಯೆ ವೃಕ್ಷ ಮಾತೆ ತಿಮ್ಮಕ್ಕ ವ್ಯಾಕ್ಸಿನ್ ಪಡೆಯುವ ಮೂಲಕ ಜನರಲ್ಲಿನ ಭಯ ದೂರ ಮಾಡಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಮರಗಳನ್ನ ಬೆಳೆಸಿ ಯುವ ಜನತೆಗೆ ಮಾದರಿಯಾಗಿದ್ದ ತಿಮ್ಮಕ್ಕ ಇಂದು ಕೊರೊನಾ ವ್ಯಾಕ್ಸಿನ್ ಪಡೆಯುವ ಮೂಲಕ ಸಾಮಾಜಿಕ ಕಳಕಳಿ ಜತೆಗೆ ಜನ ಜಾಗೃತಿ ಮೂಡಿಸಿದ್ದಾರೆ..

Ramanagar
ಕೋವಿಡ್​​ ವಾಕ್ಸಿನ್ ಪಡೆದ ಸಾಲು ಮರದ ತಿಮ್ಮಕ್ಕ

ರಾಮನಗರ : ವೃಕ್ಷ ಮಾತೆ, ಪದ್ಮಶ್ರೀ ಪ್ರಶಸ್ತಿ ವಿಜೇತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ಇಂದು ಕೊರೊನಾ ಲಸಿಕೆ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ವ್ಯಾಕ್ಸಿನ್ ಪಡೆಯಲು ಹಿಂಜರಿಯುತ್ತಿರುವವರ ಮಧ್ಯೆ ಲಸಿಕೆ ಪಡೆಯುವ ಮೂಲಕ ತಿಮ್ಮಕ್ಕ ಜಾಗೃತಿ ಮೂಡಿಸಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಮಕ್ಕಳಂತೆ ಮರವನ್ನ ಬೆಳೆಸಿರುವುದು ನಮಗೆಲ್ಲ ಗೊತ್ತೇ ಇದೆ. ಈಗ 104 ವರ್ಷದ ತಿಮ್ಮಕ್ಕ ಕೋವಿಶೀಲ್ಡ್ ಲಸಿಕೆ ಪಡೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕೋವಿಡ್​​ ವ್ಯಾಕ್ಸಿನ್ ಪಡೆದ ಸಾಲು ಮರದ ತಿಮ್ಮಕ್ಕ..

ಮಕ್ಕಳಿಲ್ಲದ ತಿಮ್ಮಕ್ಕ ತನ್ನ ಹೆತ್ತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಗಿಡಗಳನ್ನ ಬೆಳೆಸಿದ್ದಾರೆ. ಇಂದಿಗೆ ಸರಿ ಸುಮಾರು 287 ಆಲದ ಮರಗಳನ್ನ ಬೆಳೆಸಿದ್ದಾರೆ. ಗಿಡಗಳನ್ನೇ ತನ್ನ ಮಕ್ಕಳಂತೆ ಪೋಷಿಸಿ ಬೃಹತ್ ಮರವಾಗಿ ಬೆಳೆಸಿದ್ದಾರೆ. ಕುದೂರು ಗ್ರಾಮದಿಂದ ಹುಲಿಕಲ್ ಗ್ರಾಮದವರೆಗೆ 4 ಕಿ.ಮೀ. ದೂರದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ತಿಮ್ಮಕ್ಕ ಅವರು ಬೆಳೆಸಿರುವ ಆಲದ ಮರಗಳು ಬಿಸಿಲು ಕೆಳಗೆ ಬೀಳದಂತೆ ಒಂದನ್ನೊಂದು ಬೆಸೆದುಕೊಂಡಿವೆ.

ಕೊರೊನಾ ಜಾಗೃತಿ ಮೂಡಿಸಿದ ವೃಕ್ಷ ಮಾತೆ : ಸಾಲು ಮರದ ತಿಮ್ಮಕ್ಕ ಸಾಧನೆ ಅಜಾರಮರ. ಮುಂದಿನ ಯುವ ಪೀಳಿಗೆ ನೆನಪಿಸಿಕೊಳ್ಳುವ ಮಹತ್ಕಾರ್ಯವನ್ನ ಮಾಡಿದ್ದಾರೆ. ಹಲವು ಪ್ರಶಸ್ತಿಗಳು ಕೂಡ ಇವರನ್ನು ಹುಡುಕಿಕೊಂಡು ಬಂದಿವೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾಗೃತಿ ಮೂಡಿಸಿದ್ರೂ ಕೂಡ ಇನ್ನೂ ಕೆಲವರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದರು.

ಈ ಮಧ್ಯೆ ವೃಕ್ಷ ಮಾತೆ ತಿಮ್ಮಕ್ಕ ವ್ಯಾಕ್ಸಿನ್ ಪಡೆಯುವ ಮೂಲಕ ಜನರಲ್ಲಿನ ಭಯ ದೂರ ಮಾಡಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಮರಗಳನ್ನ ಬೆಳೆಸಿ ಯುವ ಜನತೆಗೆ ಮಾದರಿಯಾಗಿದ್ದ ತಿಮ್ಮಕ್ಕ ಇಂದು ಕೊರೊನಾ ವ್ಯಾಕ್ಸಿನ್ ಪಡೆಯುವ ಮೂಲಕ ಸಾಮಾಜಿಕ ಕಳಕಳಿ ಜತೆಗೆ ಜನ ಜಾಗೃತಿ ಮೂಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.