ETV Bharat / state

ರಾಮನಗರ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ - Ramnagar

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯ ಹೋರಾಟಗಾರರು ಹಂಚಿಕೊಂಡ ಅನುಭವದ ನುಡಿಗಳನ್ನು ಆಲಿಸಿ, ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್ ಅವರು ನಿಮ್ಮ ಅನುಭವವೇ ನಮ್ಮೆಲ್ಲರಿಗೂ ಸ್ಫೂರ್ತಿ. ನಿಮ್ಮ ಜೀವನ ಮೌಲ್ಯ, ಆದರ್ಶಗಳು ಎಲ್ಲರಿಗೂ ಮುನ್ನೆಡೆಯಲು ಸಹಕಾರಿಯಾಗಿದೆ..

homage to the freedom fighters
ರಾಮನಗರ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ
author img

By

Published : Aug 14, 2021, 9:53 PM IST

ರಾಮನಗರ : 75ನೇ ಸ್ವಾತಂತ್ರ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಕನಕಪುರ ತಾಲೂಕಿನಲ್ಲಿ ಇಬ್ಬರು ಹಿರಿಯ ಸ್ವಾತಂತ್ರ ಹೋರಾಟಗಾರರಾದ ಎಂ ಎಸ್ ಕರಿಯಪ್ಪ, ಎನ್ ಲಿಂಗಯ್ಯ ಅವರ ಮನೆಗೆ ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್ ತೆರಳಿ ಜಿಲ್ಲಾಡಳಿತದ ವತಿಯಿಂದ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಮನೆಯಲ್ಲಿ ಕುಳಿತು ಅವರ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಅನುಭವ ಕುರಿತ ಮಾತುಗಳನ್ನು ಆಲಿಸಿದರು.

homage to the freedom fighters
ರಾಮನಗರ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ..

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರ ಪ್ರತಿಕ್ರಿಯೆ, ಚಳವಳಿ ಕಾವು, ಸೆರೆವಾಸ, ಅಂದಿನ ಪರಿಸ್ಥಿತಿ, ಜೀವನಶೈಲಿ, ಸಿಗುತ್ತಿದ್ದ ಸೌಲಭ್ಯಗಳು, ಸ್ವಾತಂತ್ರ್ಯದ ನಂತರ ಆದ ಬದಲಾವಣೆಗಳ ಕುರಿತು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಅನುಭವವನ್ನು ಮೆಲುಕು ಹಾಕಿದರು.

ಸ್ವಾತಂತ್ರ್ಯ ಹೋರಾಟಗಾರರು ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಚಳವಳಿಗೆ ತಾವು ಧುಮುಕಿದ ಬಗ್ಗೆ, ಜೈಲುವಾಸದಲ್ಲಿ ಅನುಭವಿಸಿದ ಕಷ್ಟಗಳನ್ನು ಒಂದೇ ಕೊಠಡಿಯಲ್ಲಿ ಹೆಚ್ಚಿನ ಜನರನ್ನು‌ ಬಂಧಿಸಿದಾಗ ಉಸಿರಾಡಲು‌ ಕಷ್ಟ ಪಟ್ಟ ಅನುಭವವನ್ನು ವಿಸ್ತಾರವಾಗಿ ವಿವರಿಸಿದರು. ಹೋರಾಟದ ಕಿಚ್ಚಿಗೆ ಪ್ರೇರೇಪಿತವಾದ ಸಂಗತಿಗಳ ಬಗ್ಗೆಯೂ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯ ಹೋರಾಟಗಾರರು ಹಂಚಿಕೊಂಡ ಅನುಭವದ ನುಡಿಗಳನ್ನು ಆಲಿಸಿ, ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್ ಅವರು ನಿಮ್ಮ ಅನುಭವವೇ ನಮ್ಮೆಲ್ಲರಿಗೂ ಸ್ಫೂರ್ತಿ. ನಿಮ್ಮ ಜೀವನ ಮೌಲ್ಯ, ಆದರ್ಶಗಳು ಎಲ್ಲರಿಗೂ ಮುನ್ನೆಡೆಯಲು ಸಹಕಾರಿಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.